ಶಿವಮೊಗ್ಗ: ದೇಶದ ಏಕತೆಗಾಗಿ, ಯೋಧರ ಸೇವೆಗೆ ಗೌರವ ಸಮರ್ಪಿಸುವ ಜತೆಯಲ್ಲಿ ಏಕಾಂಗಿಯಾಗಿ ಬೈಕ್‌ನಲ್ಲಿ 24000 ಕೀಮಿ ದೇಶ ಪರ್ಯಟಣೆ ಮಾಡಿ ಅರಿವು ಮೂಡಿಸುತ್ತಿರುವ ಕೇರಳದ ಅಮೃತಾ ಜೋಶಿ ಅವರಿಗೆ ಶಿವಮೊಗ್ಗ ನಗರದ ಶುಭಂ ಸಭಾಂಗಣದಲ್ಲಿ ಜೆಸಿಐ ಸಹ್ಯಾದ್ರಿ ಶಿವಮೊಗ್ಗ ಹಾಗೂ ಶುಭಂ ಹೊಟೇಲ್ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು.
ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡುತ್ತಿದ್ದು, ಸ್ಥಳೀಯ ಮಟ್ಟದಿಂದ ರಾಜ್ಯ, ರಾಷ್ಟç ಹಾಗೂ ಅಂತರಾಷ್ಟಿçÃಯ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾರೆ. ಕಾಸರಗೋಡಿನ 21 ವರ್ಷದ ಯುವತಿ ದೇಶದ ಏಕತೆ ಹಾಗೂ ಯೋಧರಿಗೆ ಗೌರವ ಸಮರ್ಪಿಸುವ ದೃಷ್ಠಿಯಿಂದ ಏಕಾಂಗಿಯಾಗಿ ದೇಶಾದ್ಯಂತ ಜಾಗೃತಿ ಮೂಡಿಸುತ್ತಿರುವ ಕೆಲಸ ಶ್ಲಾಘನೀಯ ಎಂದು ಜೆಸಿಐ ಸಹ್ಯಾದ್ರಿ ಶಿವಮೊಗ್ಗ ಅಧ್ಯಕ್ಷ ಸತೀಶ್‌ಚಂದ್ರ ಹೇಳಿದರು.
ಮಹಿಳೆಯರ ಸಾಧನೆಗೆ ನಾವೆಲ್ಲರೂ ಪ್ರೋತ್ಸಾಹ ನೀಡಿ ಗೌರವಿಸಬೇಕು. ಮಹಿಳೆಯರನ್ನು ಮನೆಗೆ ಸೀಮಿತಗೊಳಿಸದೇ ಅವರು ಆಸಕ್ತಿ ವಹಿಸುವ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಲು ಪ್ರೋತ್ಸಾಹ ನೀಡಬೇಕು. ಮಹಿಳೆಯರು ತಮ್ಮ ಶಕ್ತಿ ಸಾಮಾರ್ಥ್ಯ, ಛಲ ಹಾಗೂ ಆತ್ಮವಿಶ್ವಾಸದ ಮೂಲಕ ಸಾಧನೆ ಮಾಡುವಂತಾಗಬೇಕು ಎಂದು ತಿಳಿಸಿದರು.
ರೋಟರಿ ವಲಯ 11ರ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್ ಮಾತನಾಡಿ, ಸಾಮಾಜಿಕ ಕಳಕಳಿಯೊಂದಿಗೆ ಉತ್ತಮ ಸಾಧನೆ ಮಾಡುತ್ತಿರುವ ಎಲ್ಲರಿಗೂ ಪ್ರೋತ್ಸಾಹ ಸಹಕಾರ ನೀಡಬೇಕು. ಕಾಸರಗೋಡಿನ ಯುವತಿ ಅಮೃತಾ ಯಶಸ್ವಿ ಬೈಕ್ ಪ್ರಯಾಣಕ್ಕೆ ಅಭಿನಂದನೆ. ಮಹಿಳೆಯರ ಸಾಧನೆಯಿಂದ ಇತರರು ಸ್ಫೂರ್ತಿಗೊಂಡು ಯಶಸ್ಸು ಸಾಧಿಸಲಿದ್ದಾರೆ. ಆತ್ಮವಿಶ್ವಾಸದಿಂದ ಮುನ್ನಡೆಯುವ ಎಲ್ಲರಿಗೂ ಯಶಸ್ಸು ನಿಶ್ಚಿತ ಎಂದು ಹೇಳಿದರು.
ಜೆಸಿಐ ಮಾಜಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಉದಯ ಕದಂಬ, ಸ್ವಪ್ನಾ ಬದರೀನಾಥ್, ಡಾ. ಲಲಿತಾ ಭರತ್, ಮಂಜುನಾಥರಾವ್ ಕದಂ, ಅನೂಪ್‌ಗೌಡ, ಹರೀಶ್ ಪಂಡಿತ್, ಪ್ರಮೋದ್‌ಶಾಸ್ತಿç, ವಿದ್ಯಾ ಸುದರ್ಶನ್ ಮತ್ತಿತರರು ಉಪಸ್ಥಿತರಿದ್ದರು.