ಶಿವಮೊಗ್ಗ: ಕೇಳಿದ ವರವನ್ನು ಕರುಣಿಸುವ ವಿಶೇಷ ಶಕ್ತಿ ದೇವತೆ ದಾನಮ್ಮ ದೇವಿಗೆ ಶಿವಮೊಗ್ಗ ನಗರದ ರವಿ ಟ್ರೇರ‍್ಸ್ನ ಅಜಮನಿ ಕುಟುಂಬದವರು ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ಅನ್ನ ದಾಸೋಹ ಸೇವೆ ಮಾಡಿದರು. ಮಹಿಳೆಯರಿಗೆ ಉಡಿ ತುಂಬುವ ಮೂಲಕ ಸಂಭ್ರಮದಿAದ ವೃತ ಆಚರಿಸಿದರು.

ಕರ್ನಾಟಕದ ಗಡಿಗೆ ಸಮೀಪವಿರುವ ಗುಡ್ಡಾಪುರವು ಮಹಾರಾಷ್ಟçದಲ್ಲಿ ಇದ್ದರೂ ದೇವಿಗೆ ಭಕ್ತರು ಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಶ್ರಾವಣ ಮಾಸದ ಮೊದಲ ವಾರದಲ್ಲಿ ಆಚರಿಸುವ ವೃತವನ್ನು ರವಿ ಟ್ರೇರ‍್ಸ್ ಅಜಮನಿ ಕುಟುಂಬದವರು ತಲಾತಲಾಂತರಗಳಿAದ ನಡೆಸಿಕೊಂಡು ಬರುತ್ತಿದ್ದಾರೆ. ಮುತ್ತಜ್ಜನ ಕಾಲದಿಂದಲೂ ವಿಶೇಷ ಪೂಜೆಯ ಮುಖಾಂತರ ವೃತ ಆಚರಣೆ ನಡೆಸುತ್ತಿರುವುದು ವಿಶೇಷವಾಗಿದೆ.
ಅಜಮನಿ ಕುಟುಂಬದ ದಾನಮ್ಮ ಅವರು ಮಾತನಾಡಿ, ಶ್ರಾವಣ ಮಾಸದ ಮೊದಲ ವಾರದಲ್ಲಿ ಆಚರಿಸುವ ವೃತ ಹಾಗೂ ವಿಶೇಷ ಪೂಜೆಯಿಂದ ಎಲ್ಲರಿಗೂ ಒಳಿತಾಗುತ್ತದೆ. ನಮ್ಮ ಕುಟುಂಬವು ಆರ್ಥಿಕವಾಗಿ ಸದೃಢವಾಗಲು ದೇವಿಯ ಕೃಪೆ ಕಾರಣ ಹಾಗೂ ವೃತದ ಮಹಿಮೆ ಎಂದು ತಿಳಿಸಿದರು.

ದಾನಮ್ಮ ದೇವಿಗೆ ಪ್ರತಿ ವರ್ಷ ವಿಯಜಪುರದಿಂದ ಪಾದಾಯಾತ್ರೆಯಲ್ಲಿ ಸಾವಿರಾರು ಭಕ್ತರು ಬರುವುದು ತುಂಬಾ ವಿಶೇಷ ಎಂದರು. ಇದೇ ಸಂದರ್ಭದಲ್ಲಿ ಮಹಿಳೆಯರಿಗೆ ಉಡಿ ತುಂಬಿ ಗೌರವಿಸಿ ಹರಸಿದರು. ಶ್ರದ್ಧೆ, ಭಕ್ತಿ ಹಾಗೂ ಶುದ್ಧ ಮನಸ್ಸಿನ ಪ್ರತೀಕವೇ ದಾನಮ್ಮ ದೇವಿಯ ಪೂಜೆಯಾಗಿದೆ ಎಂದು ಭಕ್ತರು ಅನಿಸಿಕೆ ವ್ಯಕ್ತಪಡಿಸಿದರು.
ರವಿ ಟ್ರೇರ‍್ಸ್ನ ಉಮೇಶ್, ರವಿ, ಜಿ.ವಿಜಯ್‌ಕುಮಾರ್, ಮಲ್ಲಿಕಾರ್ಜುನ್ ಕಾನೂರು, ದಾನಮ್ಮ, ಅನಿತಾ, ಬಿಂದು ವಿಜಯ್‌ಕುಮಾರ್, ಮಮತಾ, ಸಾವಿತ್ರಿ, ಸುಪ್ರಿಯಾ, ಸ್ನೇಹ, ಸಿರಿ, ರೂಪಾ, ಮಲ್ಲಿಕಾರ್ಜುನ ಮತ್ತಿತರರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…