ಶಿವಮೊಗ್ಗ ನಗರದ ಎಲ್ ಬಿ ಎಸ್ ನಗರದ ಚಾಮುಂಡೇಶ್ವರಿ ದೇವಸ್ಥಾನದ ರಸ್ತೆಯಲ್ಲಿ ಇರುವ ಪಾರ್ಕ್ ಅನ್ನು ಜೆಸಿಐ ಶಿವಮೊಗ್ಗ ಶರಾವತಿ ಮಹಾನಗರ ಪಾಲಿಕೆ ಯಿಂದ ದತ್ತು ಪಡೆದು ನಿರ್ವಹಣೆ ಮಾಡುತ್ತಿದ್ದು. ಇಂದು ಮುಂಜಾನೆ ಜೆಸಿಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷರಾದ JFS ದಿದ್ರಜಿತ್ ಸಿಂಗ್ ಲೊಟ್ಟೇ ಅವರು ಉದ್ಘಾಟನೆ ಮಾಡಿದ್ದರೆ.
ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಜೆಸಿಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷರು ವಾರದಲ್ಲಿ ಒಮ್ಮೆ ಎಲ್ಲ ಮಕ್ಕಳನ್ನು ಪಾರ್ಕಿನಲ್ಲಿ ಸೇರಿಸಿಕೊಂಡು ದೇಶದ ಆಗುಹೋಗುಗಳ ಬಗ್ಗೆ. ಶಿಕ್ಷಣದ ನೀತಿಗಳ ಬಗ್ಗೆ, ದುಷ್ಟ ಚಟಗಳಿಂದ ದೂರವಿರುವ ಬಗ್ಗೆ, ಪರಿಸರದ ಬಗ್ಗೆ, ಭಾರತದ ಕಾನೂನುಗಳ ಬಗ್ಗೆ ನಿರಂತರ ಚರ್ಚಿಸಿ ಸಂವಾದ ಕಾರ್ಯಕ್ರಮಗಳನ್ನು ಮಾಡಿ. ಯುವ ಪೀಳಿಗೆಗೆ ಇಂತಹ ಕಾರ್ಯಕ್ರಮಗಳು ದಾರಿದೀಪವಾಗುತ್ತದೆ ಎಂದು ಮಾರ್ಗದರ್ಶನ ನೀಡಿದರು. ಜೆ ಸಿ ಐ ಶಿವಮೊಗ್ಗ ಶರಾವತಿಯ ತಂಡದ ಪಾರ್ಕ್ ಅಭಿವೃದ್ಧಿಯ ಕೆಲಸಗಳನ್ನು ನೋಡಿ ಹರ್ಷ ವ್ಯಕ್ತಪಡಿಸಿದರು. ಮಳೆ ನೀರಿನ ಕೊಯ್ಲು ಅಡವಳಿಸಿಕೊಳ್ಳಿ ಶುದ್ಧ ಮಳೆ ನೀರು, ಭೂಮಿಗೆ ಹೋಗುವಂತೆ ನೋಡಿಕೊಳ್ಳಿ ರಾಸಾಯನಿಕ ಮುಕ್ತ ಭೂಮಿಯನ್ನು ಮುಂದಿನ ಪೀಳಿಗೆಗೆ ನೀಡೋಣ ವೆಂದು ಮಾತನಾಡಿದರು.
ಜೆಸಿ ಸೌಮ್ಯ ಅರಳಪ್ಪ ಅವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಸಂಸ್ಥೆಯ ಕೆಲಸ ಕಾರ್ಯಗಳನ್ನು ಹಾಗೂ ಸಂಸ್ಥೆಯ ಸದಸ್ಯರನ್ನು ಅವರ ಕೆಲಸಗಳನ್ನು ನೆನಪಿಸಿಕೊಂಡು ಮುಂದೆ ಇದೇ ರೀತಿ ಉತ್ತಮ ಕಾರ್ಯಗಳನ್ನು ಮಾಡೋಣ ಎಂದು ಹೇಳುವ ಮೂಲಕ ಪಾರ್ಕ್ ಅಭಿವೃದ್ಧಿಗೆ ಸಂಪೂರ್ಣವಾಗಿ ಸಹಕಾರ ನೀಡುತ್ತಿರುವ ಸಂಸ್ಥೆಯ ಗೌರವಾನ್ವಿತ ಸದಸ್ಯರಾದ ಸಮಾಜಸೇವಕರಾದ ಎಂ ಶ್ರೀಕಾಂತ್ ಅವರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಜೆ ಸಿ ಚಿರಂಜೀವಿ ಬಾಬು ಸಮಾಜ ಸೇವಕರು ಕಾರ್ಯಕ್ರಮದ ನಿರೂಪಣೆ ನೆರವೇರಿಸಿದರು. ಜೆ ಸಿ ಮಮತಾ ಶಿವಣ್ಣ ಕಾರ್ಯದರ್ಶಿಗಳು ಸ್ವಾಗತ ಭಾಷಣ ಮಾಡಿದರು. ಸಂಸ್ಥಾಪಕ ಅಧ್ಯಕ್ಷರಾದ ಜೆಸಿ ಜ್ಯೋತಿ ಅರಳಪ್ಪ, ಪೂರ್ವ ಅಧ್ಯಕ್ಷರಾದ ಜೆ ಸಿ ಗಾರ ಶ್ರೀನಿವಾಸ್, ಜಿಲ್ಲಾ ನ್ಯಾಯಾಧೀಶರಾದ ಸೆಲ್ವಮ್, ಜೆ ಸಿ ಐನ ವಲಯ 24ರ ಉಪಾಧ್ಯಕ್ಷರುಗಳು ಒಳ್ಳೆಯ ಅಧಿಕಾರಿಗಳು ಜೆಸಿಐ ಶಿಮೊಗ್ಗ ಶರಾವತಿಯ ಸದಸ್ಯರುಗಳು ಪಾರ್ಕ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.