ಶಿವಮೊಗ್ಗ: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಪ್ರತಿಭಾವಂತ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಮಕ್ಕಳ ಶಿಕ್ಷಣಕ್ಕೆ ಪೂರಕವಾಗಿ ಅಭಿವೃದ್ಧಿಪಡಿಸಬೇಕು ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಆರ್.ಪರಮೇಶ್ವರಪ್ಪ ಹೇಳಿದರು.

ಶಿವಮೊಗ್ಗ ನಗರದ ರಂಗಾಯಣದಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಹಾಗೂ ರೋಟರಿ ಕ್ಲಬ್ ಆಫ್ ಹಾಸನ ಹೊಯ್ಸಳ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ “ತಾಯಿಯಾಗುವುದೆಂದರೆ” ಪೂಜಾ ರಘುನಂದನ್ ಅವರ ಏಕವ್ಯಕ್ತಿ ರಂಗಪ್ರಯೋಗ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಖಾಸಗಿ ಶಾಲೆಗಳಲ್ಲಿ ಇರುವಂತೆ ಭೌತಿಕ ಸೌಲಭ್ಯ, ಕಲಿಕಾ ವಾತಾವರಣ ಹಾಗೂ ಇತರ ಸೌಕರ್ಯಗಳನ್ನು ಸರ್ಕಾರಿ ಶಾಲೆಗಳಲ್ಲೂ ಒದಗಿಸಿದಲ್ಲಿ ಖಾಸಗಿ ಶಾಲೆಗಳಿಗಿಂತ ಹೆಚ್ಚು ಉನ್ನತ ಮಟ್ಟದಲ್ಲಿ ಶಿಕ್ಷಣ ನೀಡಬಹುದಾಗಿದೆ ಎಂದು ತಿಳಿಸಿದರು.
ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಸಂಸ್ಥೆ ಅಧ್ಯಕ್ಷ ಸತೀಶ್‌ಚಂದ್ರ ಹಾಗೂ ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ರೋಟರಿ ಸಂಸ್ಥೆ ಸಹಯೋಗದೊಂದಿಗೆ ಸರ್ಕಾರಿ ಶಾಲೆ ಅಭಿವೃದ್ಧಿ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ರೋಟರಿ ಕ್ಲಬ್ ಆಫ್ ಹಾಸನ ಹೊಯ್ಸಳ ಸಂಸ್ಥೆಯ ಸದಸ್ಯೆ ಪೂಜಾ ರಘುನಂದನ್ ಅವರ ಸ್ವಂತ ಜೀವನದಲ್ಲಿ ನಡೆದ ಸತ್ಯ ಘಟನೆ ಆಧಾರಿತ ತಾಯಿಯಾಗುವುದೆಂದರೆ ಏಕವ್ಯಕ್ತಿ ರಂಗ ಪ್ರವೇಶ ತುಂಬಾ ಅದ್ಭುತವಾಗಿ ಮೂಡಿಬಂದಿತು. ಮನಕಲುಕುವಂತಹ ಅಭಿನಯ ಎಲ್ಲರ ಕಣ್ಣಿಂಚಿನಲ್ಲಿ ಕಣ್ಣೀರು ತರಿಸಿತು. ಮಕ್ಕಳ ದತ್ತು ಪಡೆಯುವ ವಿಧಾನಗಳು ಹಾಗೂ ಅದರ ಬಗ್ಗೆ ಅರಿವು ಕಾರ್ಯಕ್ರಮ ಇದಾಗಿತ್ತು.
ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಸಂಸ್ಥೆ ಅಧ್ಯಕ್ಷ ಸತೀಶ್‌ಚಂದ್ರ ಮಾತನಾಡಿ, ಬಿ.ಬೀರನಕೆರೆಯ ಸರ್ಕಾರಿ ಶಾಲೆಯನ್ನು 30 ಲಕ್ಷ ರೂ. ವೆಚ್ಚದಲ್ಲಿ ಹಳೇ ವಿದ್ಯಾರ್ಥಿಗಳ ಸಂಘದಿAದ ಅಭಿವೃದ್ಧಿಪಡಿಸಲಾಗುತ್ತಿದೆ. 8 ಲಕ್ಷದ ವೆಚ್ಚದಲ್ಲಿ ಅಭಿವೃದ್ದಿ ನಡೆಸಲಾಗಿದೆ. ನಾನು ಓದಿರುವ ಶಾಲೆಯಲ್ಲಿ ಅತ್ಯಾಧುನಿಕ ವ್ಯವಸ್ಥೆಯನ್ನು ಅಳವಡಿಸಲು ಎಲ್ಲರ ಸಹಕಾರದಿಂದ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ತಾಯಿಯಾಗುವುದೆಂದರೆ ನಾಟಕದ ಕಥೆ ಹಾಗೂ ನಟನೆ ಪೂಜಾ ರಘುನಂದನ್, ನಿರ್ದೇಶನ ಕೃಷ್ಣಮೂರ್ತಿ ಕವತ್ಕರ್ ಮಾಡಿದ್ದರು. ಸಂಗೀತ-ರಘುನAದನ್, ಗಾಯನ-ಡಾ. ಸಿಂಧು ಆತ್ರಿಯ ಪಾಲ್ಗೊಂಡಿದ್ದರು.
ಬಿಇಒ ನಾಗರಾಜ್, ಕಲಾವಿದ ಕಾಂತೇಶ್, ಉಮೇಶ್, ರೋಟರಿ ಮಾಜಿ ಜಿಲ್ಲಾ ಗವರ್ನರ್ ಎಂ.ಜಿ ರಾಮಚಂದ್ರಮೂರ್ತಿ, ಹಾಸನ ಹೊಯ್ಸಳ ಸಂಸ್ಥೆಯ ಮಾಜಿ ಅಸಿಸ್ಟೆಂಟ್ ಗವರ್ನರ್ ಮೋಹನ್, ಜಿ.ವಿಜಯ್ ಕುಮಾರ್, ಮಂಜುನಾಥ್ ಕದಂ, ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಹಿರಿಯ ಸದಸ್ಯ, ಫೌಂಡರ್ ಪ್ರೆಸಿಡೆಂಟ್ ಹರೀಶ್, ಶೇಷಗಿರಿ, ಕಿಶೋರ್ ಕುಮಾರ್, ಕಾರ್ಯದರ್ಶಿ ಸಂತೋಷ್ ಕುಮಾರ್, ಈಶ್ವರ್, ಡಾ. ಲಲಿತಾ, ಸ್ವಪ್ನ ಬದ್ರಿನಾಥ್ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…