ಕೌಶಲ್ಯಾಭಿವೃದ್ಧಿ, ಉದ್ಯಮಶೀಲತಾ ಹಾಗೂ ಜೀವನೋಪಾಯ ಇಲಾಖೆ, ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ಸಿಡಾಕ್ (ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ, ಧಾರವಾಡ) ಸಂಸ್ಥೆಯಿಂದ ಸ್ವಯಂ ಉದ್ಯೋಗ ಕೈಗೊಳ್ಳಲು ಇಚ್ಛಿಸುವ ಶಿವಮೊಗ್ಗ ಜಿಲ್ಲೆಯ ಆಸಕ್ತ ಉದ್ಯಮಾಕಾಂಕ್ಷಿಗಳಿಗೆ ಸೆಪ್ಟಂಬರ್-2022 ತಿಂಗಳಿನಲ್ಲಿ 10 ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿಗಾಗಿ 18 ರಿಂದ 55 ವರ್ಷ ವಯೋಮಿತಿಯ 10ನೇ ತರಗತಿ ಪಾಸಾದ ಉದ್ಯಮಾಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದೆ.

ಉದ್ಯಮಶೀಲರ ಗುಣಲಕ್ಷಣಗಳು, ಸಾಮಾನ್ಯ ವ್ಯಕ್ತಿಯಿಂದ ಉದ್ಯಮಶೀಲ ವ್ಯಕ್ತಿಯಾಗಿ ಪರಿವರ್ತನೆಯಾಗಲು ಸಾಧನಾ ಪ್ರೇರಣ ತರಬೇತಿ, ಉದ್ಯಮ ಸ್ಥಾಪಿಸಲು ಅನುಸರಿಸಬೇಕಾದ ಮಜಲುಗಳು, ಉದ್ಯಮಾವಕಾಶಗಳ ಮಾಹಿತಿ, ಉದ್ಯಮ ಆಯ್ಕೆಯ ವಿಧಾನ, ಹಣಕಾಸು ನಿರ್ವಹಣೆ, ಮಾರುಕಟ್ಟೆ ನಿರ್ವಹಣೆ, ಲೆಕ್ಕಪತ್ರ ನಿರ್ವಹಣೆ, ಸಣ್ಣ ಉದ್ಯಮ ನಿರ್ವಹಣೆ ಇತ್ಯಾದಿ ವಿಷಯಗಳನ್ನು ಪರಿಣಿತ ಅತಿಥಿ ಬೋಧಕರಿಂದ ಉಪನ್ಯಾಸಗಳನ್ನು ಏರ್ಪಡಿಸಲಾಗುವದು. ಶಿಬಿರಾರ್ಥಿಗಳು ಉದ್ಯಮ ಪ್ರಾರಂಭಿಸಲು ಬೆಂಬಲ ಒದಗಿಸಲಾಗುವುದು.

ತರಬೇತಿಯು ಉಚಿತವಾಗಿದ್ದು, ತರಬೇತಿ ವೇಳೆಯಲ್ಲಿ ಉಟೋಪಚಾರ ಒದಗಿಸಲಾಗುವುದು. ಆಯ್ಕೆಯಾದ ಶಿಬಿರಾರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಪ್ರಯಾಣ ಮಾಡಿ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು.
ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಜಂಟಿ ನಿರ್ದೇಶಕರ ಕಚೇರಿ, ಸಿಡಾಕ್, ಜಿಲ್ಲಾ ಕೈಗಾರಿಕಾ ಕೇಂದ್ರ, 3ನೇ ಮಹಡಿ, ಶಿವಪ್ಪನಾಯಕ ಕಾಂಪ್ಲೇಕ್ಸ್, ನೆಹರು ರಸ್ತೆ, ಶಿವಮೊಗ್ಗ ಇಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ 2 ಪಾಸ್‍ಪೊರ್ಟ್ ಅಳತೆಯ ಪೋಟೋ ಹಾಗೂ ಆಧಾರ್ ಕಾರ್ಡ್ ಪ್ರತಿಯೊಂದಿಗೆ ಸಲ್ಲಿಸುವುದು.

ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು ಖುದ್ದಾಗಿ ಅಥವಾ ಅವಿನಾಶ ಎ. ತರಬೇತುದಾರರ ಮೊಬೈಲ್ ಸಂ. 9164811887ನ್ನು ಸಂಪರ್ಕಿಸುವಂತೆ ಸಿಡಾಕ್ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ವರದಿ ಮಂಜುನಾಥ್ ಶೆಟ್ಟಿ…