ಶಿವಮೊಗ್ಗ: ಕ್ರೀಡೆಯಿಂದ ದೇಹ, ಮನಸ್ಸು ಸದೃಢವಾಗುವುದರ ಜೊತೆಗೆ ಖಿನ್ನತೆ ದೂರವಾಗುತ್ತದೆ, ಬಾಲ್ಯದಲ್ಲೇ ಮಕ್ಕಳಿಗೆ ಕ್ರೀಡೆ ಬಗ್ಗೆ ಆಸಕ್ತಿಯನ್ನು ಬೆಳಸಬೇಕು ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ನುಡಿದರು.

ಅವರು ಇಂದು ಬೆಳಿಗ್ಗೆ ನಗರದ ರೋವರ್ಸ್ ಕ್ಲಬ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ಅಂತರ ಜಿಲ್ಲಾ ಮಟ್ಟದ ಇಂಡಿಪೆಂಡೆನ್ಸ್ ಡೇ ಓಪನ್ ಬ್ಯಾಡ್ ಮಿಂಟನ್ ಕಪ್ ಟೂರ್ನಮೆಂಟ್ ಉದ್ಘಾಟಿಸಿ ಮಾತನಾಡಿದರು. ಕ್ರೀಡೆಯಿಂದ ಪರಸ್ಪರರಲ್ಲಿ ಸ್ನೇಹಮಹಿ ವಾತವಾರಣದಿಂದ ವೃದ್ಧಿಯಾಗಿ ಒಳ್ಳೆಯ ಸಂಪರ್ಕ ಸಿಗುತ್ತದೆ.

ಜೆಡಿಎಸ್ ಜಿಲ್ಲಾಧ್ಯಕ್ಷ ಎಂ ಶ್ರೀಕಾಂತ್ ಮಾತನಾಡಿ ಈಗಾಗಲೇ ಶಿವಮೊಗ್ಗದಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಾಗೂ ಪ್ರತಿ ವರ್ಷ ನಿರಂತರವಾಗಿ ವಿವಿಧ ರಾಜ್ಯಮಟ್ಟದ ಕ್ರೀಡೆಗಳನ್ನು ಆಯೋಜಿಸುತ್ತಾ ಬಂದಿರುವುದು ನಮ್ಮೆಲ್ಲರಿಗೂ ಹೆಮ್ಮೆಯಾಗಿದೆ. ಅಲ್ಲದೇ, ಶಿವಮೊಗ್ಗದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಆಟಗಾರರು ತಮ್ಮ ಪ್ರತಿಭೆಯನ್ನು ತೋರಿಸಿ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ. ಈ ನಿಟ್ಟಿನಲ್ಲಿ ಇಂದು ವಿವಿಧ ಜಿಲ್ಲೆಗಳಿಂದ ಆಗಮಿಸಿದ ಎಲ್ಲಾ ಆಟಗಾರರು ಒಳ್ಳೆಯ ಪ್ರದರ್ಶನ ನೀಡಿ ರಾಷ್ಟ್ರಮಟ್ಟದಲ್ಲಿ ಆಡುವಂತ ಶಕ್ತಿ ಸಿಗಲಿ ಎಂದು ಹಾರೈಸಿದರು.

ಇದೇ ಸಂದರ್ಭದಲ್ಲಿ ಜೆ.ಡಿ.ಎಸ್. ರಾಜ್ಯ ಪ್ರಧಾನಕಾರ್ಯದರ್ಶಿ ಎಂ.ಶ್ರೀಕಾಂತ್ ಮಾತನಾಡಿ, ರೋವರ್ಸ್ ಕ್ಲಬ್ ಈಗಾಗಲೇ ಇಂತಹ ಕ್ರೀಡೆಗಳಿಗೆ ಸಹಕಾರ ನೀಡುತ್ತಾ ಬಂದಿದೆ. ಕ್ರೀಡೆ ನಮಗೆ ಸದಾ ಸಂತೋಷ ತರುವುದರ ಮುಖಾಂತರ ಒಳ್ಳೆಯ ವಾತಾವರಣವನ್ನು ಸೃಷ್ಟಿ ಮಾಡುತ್ತದೆ. ಈಗಾಗಲೇ ನಮ್ಮ ಜಿಲ್ಲೆಯ ಸಾಕಷ್ಟು ಕ್ರೀಡಾಪಟುಗಳಿಗೆ ಸಹಕಾರ ನೀಡಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಭಾಗವಹಿಸಲು ಸಹಕಾರ ನೀಡಿದ್ದೇವೆ ಎಂದರು.ಜಿಲ್ಲಾ ಸ್ಕೌಟ್ಸ್ ಗೈಡ್ಸ್ ಮುಖ್ಯ ಆಯುಕ್ತ ಹೆಚ್.ಡಿ. ರಮೇಶ್ ಶಾಸ್ತ್ರಿ ಮಾತನಾಡಿ, ಕ್ರೀಡೆಯಿಂದ ವರ್ಷ ಕಾಮನ್ ವೆಲ್ತ್ ನಲ್ಲಿ ರಾಜ್ಯ ಹಾಗೂ ದೇಶದವರು ಅತೀ ಹೆಚ್ಚು ಪದಕಗಳನ್ನು ಗಳಿಸಿ ಹೆಮ್ಮೆಯಿಂದ ತಂದಿರುತ್ತಾರೆ. ಹಾಗೆ ನಮ್ಮ ಜಿಲ್ಲೆಯಿಂದಲೂ ಕ್ರೀಡಾಪಟುಗಳು ಉನ್ನತ ಸ್ಥಾನಕ್ಕೆ ಹೋಗಲಿ. ಅವರಿಗೆ ನಮ್ಮ ಸಹಕಾರ ಇರುತ್ತದೆ ಎಂದು ನುಡಿದರು.

ವೇದಿಕೆಯಲ್ಲಿ ಉಪ ಮಹಾಪೌರರಾದ ಶಂಕರ್ ಗನ್ನಿ, ರೋವರ್ಸ್ ಕ್ಲಬ್ ನ ಉಪಾಧ್ಯಕ್ಷ ಕೆ. ರವಿ, ಖಜಾಂಚಿ ನಾಗರಾಜ್ ಪಾಟ್ಕರ್, ಜಿ. ವಿಜಯಕುಮಾರ್, ಎನ್. ರವಿಕುಮಾರ್, ಆ.ಮ. ಪ್ರಕಾಶ್, ವಿನಾಯಕ, ರಾಮು, ಎಂ.ಆರ್. ಬಸವರಾಜ್, ಸಹ ಕಾರ್ಯದರ್ಶಿ ಕೃಷ್ಣಣ್ಣ ಹಾಗೂ ರೋವರ್ಸ್ ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…