ದಿನಾಂಕಃ-28-06-2021 ರಂದು ರಾತ್ರಿ ಕೆಎ-02ಎಂಡಿ6933 ಓಮಿನಿ ವಾಹನದಲ್ಲಿ ತರೀಕೆರೆ ಕಡೆಯಿಂದ ಭದ್ರಾವತಿ ಕಡೆಗೆ ಅಕ್ರಮವಾಗಿ ಮಾದಕ ವಸ್ತು ಗಾಂಜಾವನ್ನು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿಯ ಮೇರೆಗೆ ಎಎಸ್ಪಿ ಭದ್ರಾವತಿ, ಡಿವೈಎಸ್ಪಿ ಶಿವಮೊಗ್ಗ, ಪಿಐ ಕುಂಸಿ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ತಂಡವು ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾರೇಹಳ್ಳಿ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ, ಅಲ್ಲಿ ಬಂದ ಕೆಎ-02ಎಂಡಿ6933 ಓಮಿನಿ ವಾಹನವನ್ನು ತಪಾಸಣೆ ಮಾಡಿದ್ದು, ವಾಹನದ ಫ್ಯೂಯಲ್ ಟ್ಯಾಂಕ್ ನಲ್ಲಿ, ಹಿಂಭಾಗದ ಡಿಕ್ಕಿಯ ಡೋರ್ ನ ಒಳಗಡೆ, ಹಿಂಭಾಗದ ಬಂಪರ್ ನ ಓಳ ಭಾಗದಲ್ಲಿ, ಸ್ಲೈಡಿಂಗ್ ಡೋರ್ ಒಳಗಡೆ ಮತ್ತು ವಾಹನದ ಚಾರ್ಸಿಯಲ್ಲಿ ಗಾಂಜಾ ಇರುವುದು ಕಂಡು ಬಂದಿರುತ್ತದೆ. ನಂತರ ಆರೋಪಿತನಾದ ವಾಹನದ ಚಾಲಕ ಮುರುಗ 32 ವರ್ಷ, ಸಂಕ್ಲಿಪುರ ಭದ್ರಾವತಿ ಈತನನ್ನು ವಶಕ್ಕೆ ಪಡೆದು, ಈತನಿಂದ ಅಂದಾಜು ಮೌಲ್ಯ 5,83,000/- ರೂಗಳ ಒಟ್ಟು 48 ಕೆಜಿ 656 ಗ್ರಾಂ ತೂಕದ ಒಣ ಗಾಂಜಾ, 01 ಮೊಬೈಲ್ ಫೋನ್, ಅರ್ದ ಕತ್ತರಿಸಿದ ಪೆಟ್ರೋಲ್ ಟ್ಯಾಂಕ್ ಹಾಗೂ ಕೃತ್ಯಕ್ಕೆ ಬಳಸಿದ ಓಮಿನಿ ವಾಹನವನ್ನು ವಶಕ್ಕೆ ಪಡೆದು ಆರೋಪಿತನ ವಿರುದ್ಧ ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಕಲಂ 8(c), 20(B)(ii)C, 25 NDPS ಕಾಯ್ದೆ ರಿತ್ಯಾ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದೆ.
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ
CCTV SALES & SERVICE
9880074684
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153