ಕನಕಪುರ ನ್ಯೂಸ್…

ಶ್ರೀ ಕ್ಷೇತ್ರ ದೇಗುಲ ಮಠದಲ್ಲಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು
ಹಿರಿಯ ಪರಮಪೂಜ್ಯ ಡಾ. ಶ್ರೀ ಶ್ರೀ ಮುಮ್ಮಡಿ ನಿರ್ವಾಣಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಎಲ್ಲಾ ಕಾರ್ಯವನ್ನು ಆಯೋಜಿಸಲಾಗಿದೆ ಎಂದು ಕಿರಿಯ ಪೂಜ್ಯ ಶ್ರೀಶ್ರೀ ಚನ್ನಬಸವ ಸ್ವಾಮೀಜಿಯವರ ತಿಳಿಸಿದರು.

ಶ್ರೀಮಠದ ವಿದ್ಯಾ ಸಂಸ್ಥೆಗಳ ಸ್ವಾತಂತ್ರ ಅಮೃತ ಮಹೋತ್ಸವದ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಧ್ವಜಾರೋಹಣ ನೆರವೇರಿಸಿ ಆಶೀರ್ವಚನ ನೀಡಿದ ಶ್ರೀ ಶ್ರೀ ಚನ್ನಬಸವ ಸ್ವಾಮೀಜಿ ಅವರು ಒಂದು ದೇಶ ಸದೃಢ ಸಬಲ ಸಂಪನ್ನವಾಗಬೇಕಾದರೆ ಆ ದೇಶದ ಶಸ್ತ್ರಾಸ್ತ್ರದ ಬಲಾಬಲಗಳಿಂದಲ್ಲ. ಒಂದು ದೇಶದ ಶಕ್ತಿ ಅಂದ್ರೆ ಅದು ಇಂದಿನ ಮತ್ತು ಮುಂದಿನ ಯುವಶಕ್ತಿ ಹಾಗಂದ್ರೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ವಿಶ್ವದಾದ್ಯಂತ ಇಂದಿನ ಜನತೆಗೆ ದುಡ್ಡು ಬೇಕು ದುಡಿಮೆ ಬೇಡ
ಅರಿವು ಬೇಕು ಅಕ್ಷರ ಬೇಡ ಚರಿತ್ರೆ ಬೇಕು ಚರಿತ್ರೆ ಬೇಡ ದುಡಿಯದೆ ದುಡ್ಡು ಗಳಿಸುವ
ಶ್ರಮಿಸದೆ ಶ್ರೀಮಂತರಾಗುವ ನಿಟ್ಟಿನಲ್ಲಿ ದೇಶವನ್ನು ದುರ್ಬಲಗೊಳಿಸದೆ ದೇಶದ ಆಸ್ತಿಯಾಗಬೇಕು.

ಶಿಕ್ಷಕರು ಮಕ್ಕಳಿಗೆ ಸ್ಪೂರ್ತಿಯ ಸೆಲೆಯಾದಾಗ ಮಕ್ಕಳು ಆಸಕ್ತಿಯ ಆಗರ ವಾಗುತ್ತಾರೆ. ಆಗ ತಂತಾನೆ ಮಕ್ಕಳ ಮನಸ್ಸಿನಲ್ಲಿ ಆಧ್ಯಾತ್ಮಿಕ ಧಾರ್ಮಿಕ ವೈಜ್ಞಾನಿಕ ಸಾಂಸ್ಕೃತಿಕ ವೈಚಾರಿಕಸಬಲವಾಗುತ್ತದೆ ಈ ದೇಶದ ಪ್ರತಿ ಮಗುವನ್ನು ಒಬ್ಬ ವ್ಯಕ್ತಿಯನ್ನಾಗಿಸದೆ ಈ ದೇಶದ ಶಕ್ತಿಯನ್ನಾಗಿ ಪರಿವರ್ತಿಸುವ ಗುರುತರ ಜವಾಬ್ದಾರಿ ಎಲ್ಲಾ ಪೋಷಕರಿಗೂ ಹಾಗೂ ಶಿಕ್ಷಕರ ಮೇಲೂ ಇದೆ ಇಂತಹ ಜವಾಬ್ದಾರಿಯನ್ನು ಪರಿಪೂರ್ಣಗೊಳಿಸುವುದಕ್ಕ ನಮ್ಮ ಸಂಸ್ಥೆಯ ಶಿಕ್ಷಕರು ಪ್ರಯತ್ನ ಇನ್ನೂ ಹೆಚ್ಚಿನ ರೀತಿಯಲ್ಲಿ ಪ್ರಯತ್ನ ಪಡೋಣ ಎಂದರು.

ಮುಖ್ಯ ಅತಿಥಿಗಳಾದ ಮೀಟಿ ರುದ್ರೇಶ್ ರವರು ಮಾತನಾಡುತ್ತಾ ಸ್ವತಂತ್ರ ನಮಗೆ ಹಾಗೆ ಸುಮ್ಮನೆ ಸಿಗಲಿಲ್ಲ ಅದರ ಹಿಂದಿದೆ ಅನೇಕ ದೇಶಪ್ರೇಮಿಗಳ ಹುತಾತ್ಮರ ತ್ಯಾಗಬಲಿದಾನ ಇದನ್ನು ನಾವು ಬರಿಯ ಅಂಕಿಗಣನನೆ ಮಾಡುತ್ತ ಕುಳಿತುಕೊಳ್ಳದೆ ದೇಶದ ಏಳಿಗೆಗೆ ಎಲ್ಲರೂ ಒಗ್ಗೂಡಿ ದುಡಿಯಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ
ಮಕ್ಕಳೆಲ್ಲರೂ ಅತ್ಯಂತ ಉತ್ಸುಕತೆಯಿಂದ ಭಾರತದ ಎಲ್ಲಾ ರಾಜ್ಯಗಳ ಉಡುಗೆ ತೊಡುಗೆ ತೊಟ್ಟು ನೃತ್ಯ ಮಾಡಿ ವೈವಿಧ್ಯತೆಯಲ್ಲಿ ಏಕತೆಯನ್ನು ಮೆರೆದರು.

ಈ ಅಮೃತ ಗಳಿಗೆಗೆ ಎಸ್ ಎನ್ ಕೆವಿಪಿ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀಯುತ ಎಸ್ ರೇವಣ್ಣ ರವರು, ಹಿರಿಯ ವಿದ್ಯಾರ್ಥಿಯಾದ ಬಾಳೆ ಗೌಡ ರವರು ಹಾಗೂ ಮುಖ್ಯ ಅತಿಥಿಗಳಾದ ಶ್ರೀ ಮೇಟಿ ರುದ್ರೇಶ್ ಡೈರೆಕ್ಟರ್ ಆಫ್ ಮೇರು ಐಎಎಸ್ ಅಂಡ್ ಕೆಎಎಸ್ ಸ್ಟಡಿ ಸೆಂಟರ್ ಧಾರವಾಡ , ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು ಶ್ರೀ ಮಠದ
ಸಂಸ್ಥೆಯ ಎಲ್ಲಾ ಶಾಲಾ ಕಾಲೇಜಿನ ಮುಖ್ಯಸ್ಥರು ಪ್ರಾಂಶುಪಾಲರು ಶಿಕ್ಷಕ ಪೋಷಕರು ಮತ್ತು ನಾಗರಿಕರು ಸಾಕ್ಷಿಯಾಗಿದ್ದರು.

ವರದಿ ಮಂಜುನಾಥ್ ಶೆಟ್ಟಿ…