ಶಿವಮೊಗ್ಗ:ಅರವಿಂದ್ ಕೇಜ್ರಿವಾಲ್ ವಿಧ್ಯೆಯ ಬಗ್ಗೆ ವಿಷೇಶ ಕಾಳಜಿಯನ್ನು ವಹಿಸುತ್ತಾರೆ. ಬಡಮಕ್ಕಳು ವಿಧ್ಯಯನ್ನು ಪಡೆದರೆ ದೇಶ ಅಭಿವೃದ್ಧಿ ಹೊಂದುತ್ತೆ ಎನ್ನುವುದು ಅವರ ಕನಸಾಗಿದೆ. ಇದನ್ನು ಮನಸಿನಲ್ಲಿಟ್ಟು ಕೊಂಡ ಎ.ಎ.ಪಿ ಪಕ್ಷದ ಮುಖಂಡರು ಹಾಗೂ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಾ.ನೇತ್ರಾವತಿ ಯವರು ಇಂದು ಬಡಮಕ್ಕಳೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಇಂದು ಅರವಿಂದ್ ಕೇಜ್ರಿವಾಲ್ ದೆಹಲೀ ಮುಖ್ಯಂಮತ್ರಿ ಹಾಗೂ ಎ.ಎ.ಪಿ ಪಕ್ಷದ ರಾಷ್ಟ್ರೀಯ ಸಂಚಾಲಕರಾಗಿರೋ ಇವರಿಗಿಂದು 54 ನೇ ವರ್ಷದ ಹುಟ್ಟು ಹಬ್ಬ ಈ ಸುಸಂದರ್ಭದಲ್ಲಿ ಅವರ ಕನಸಿನಂತೆ ಬಡ ಮಕ್ಕಳೊಂದಿಗೆ ಇವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು ಡಾ.ನೇತ್ರಾವತಿ ಶಿವಮೊಗ್ಗದ ಹೊರವಲಯದಲ್ಲಿರುವ ತಾಯಿ ಮನೆ ಎಂಬ ಬಡ ಮಕ್ಕಳ ಆಶ್ರಮದಲ್ಲಿ ಈ ಕಾರ್ಯಕ್ರಮವನ್ನು ನಡೆಸಿದರು.

ಪುಟ್ಟ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಅರವಿಂದ್ ಕೇಜ್ರಿವಾಲ್ ರವರು ದೇವರು ಒಳ್ಳೆಯ ಆಯುಷ್ಯ ಆರೋಗ್ಯ ನೀಡಲಿ ಎಂದು ಪ್ರಾರ್ಥನೆ ನಡೆಸಿದರು. ಇಷ್ಟು ಮಾತ್ರವಲ್ಲದೆ ಬಡ ಮಕ್ಕಳ ಸಿಹಿ ತಿಂಡಿಯನ್ನು ಸವಿದು ನಂತರ ಮಕ್ಕಳಿಗೆ ಪುಸ್ತಕ ಹಾಗೂ ಪೆನ್ಸಿಲ್ ವಿತರಿಸಿದರು.

ಈ ವೇಳೆ ಮಾತನಾಡಿದ ಪುಟ್ಟ ಪೋರನೊಬ್ಬ ಮಕ್ಕಳ ವಿದ್ಯಾಭ್ಯಾಸ ಕೇಜ್ರಿವಾಲ್ ಅವರ ಕನಸಾಗಿತ್ತು ಅವರ ಕನಸಿನಂತೆ ನಮ್ಮಂಥ ನಿರಾಶ್ರಿತ ಬಡ ಮಕ್ಕಳೊಂದಿಗೆ ಕೇಜ್ರಿವಾಲ್ ಅವರ ಹುಟ್ಟುಹಬ್ಬವನ್ನ ಆಚರಿಸಿದ ನಮ್ಮಗಳಿಗೆ ಸಂತಸವನ್ನು ತಂದು ಕೊಟ್ಟಿದೆ ಮುಂದಿನ ದಿನಗಳಲ್ಲಿ ಅವರ ಆಶಯದಂತೆಯೇ ಎಲ್ಲಾ ಅಭಿವೃದ್ದಿ ಕೆಲಸಗಳು ನಡೆದರೆ ನಮ್ಮ ಭಾರತವು ಉತ್ತುಂಗದ ಸ್ಥಿತಿಗೆ ಅತಿವೇಗದಲ್ಲಿ ತಲುಪಲಿದೆ ಎಂದು ಹೇಳಿದನು.

ಇದೇ ವೇಳೆ ಮಾತನಾಡಿದ ಡಾ.ನೇತ್ರಾವತಿ ರವರು ವಿದ್ಯೆ ಮತ್ತು ಆರೋಗ್ಯ ಪ್ರತಿಯೊಬ್ಬ ಭಾರತೀಯನಿಗೂ ಉಚಿತವಾಗಿ ಸಿಗಬೇಕು ಎನ್ನುವುದು ಅರವಿಂದ್ ಕೇಜ್ರಿವಾಲ್ ರವರ ಉದ್ದೇಶವಾಗಿದ್ದು ಇದರಂತೆಯೇ ದೆಹಲಿ ಹಾಗೂ ಪಂಜಾಬ್ ನಲ್ಲಿ ಪ್ರತಿಯೊಬ್ಬ ಜನತೆ ವಿದ್ಯೆ ಹಾಗೂ ವಿದ್ಯುತ್ ಉಚಿತವಾಗಿ ದೊರಕುವಂತೆ ಮಾಡಿದ್ದಾರೆ. ಅವರ ಮಾರ್ಗದರ್ಶನದಂತೆ ನಡೆಯುವ ನಾವುಗಳು ಈ ಬಡ ಮಕ್ಕಳಿಗೆ ವಿದ್ಯೆಯನ್ನು ದೊರಕಲಿ ಎನ್ನುವ ಕಾರಣಕ್ಕೆ ಅವರ ಹುಟ್ಟುಹಬ್ಬವನ್ನು ಬಡ ಮಕ್ಕಳೊಂದಿಗೆ ಆಚರಿಸಿ ಅವರ ವಿದ್ಯೆಗೆ ಬೇಕಾಗುವ ಪುಸ್ತಕ ಹಾಗೂ ಲೇಖನ ಹಂಚಿದ್ದೇವೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಡಾ.ನೇತ್ರಾವತಿ ರವರೊಂದಿಗೆ ಎಎಪಿ ಪಕ್ಷದ ಜಿಲ್ಲಾಧ್ಯಕ್ಷ ಕಿರಣ್ ಕೆ ,ಲಕ್ಷ್ಮೀಶ್ ,ಶಿವಮೊಗ್ಗ ನಗರ ಅಧ್ಯಕ್ಷರಾಗಿರುವ ಸುರೇಶ್ ಕೋಟೇಕರ್ ,ರವಿಕಿಶನ್ ,ಹಾಗೂ ಇನ್ನಿತರರು ಭಾಗಿಯಾಗಿದ್ದರು.

ವರದಿ ಪ್ರಜಾಶಕ್ತಿ…