ಭದ್ರಾವತಿ ಆ.18: ಇತ್ತೀಚೆಗೆ ಭದ್ರಾವತಿಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ನಡೆದ ವೈಯಕ್ತಿಕ ವಿಚಾರವನ್ನು ಇಟ್ಟುಕೊಂಡು ತಾಲ್ಲೂಕಿನಲ್ಲಿ ಶಾಂತಿ ಕದಡಲು ಯತ್ನಿಸಿದವರ ಬಣ್ಣ ಬಯಲು ಮಾಡುವುದರ ಮೂಲಕ ಭದ್ರಾವತಿಯ ಘಟನೆಯನ್ನು ಅತ್ಯಂತ ಸಮರ್ಥವಾಗಿ ಭದ್ರಾವತಿ ಶಾಸಕರಾದ ಬಿ.ಕೆ.ಸಂಗಮೇಶ್ ರವರು ನಿಭಾಗಯಿಸಿದರು ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ವಕ್ತಾರ ಹಾಗೂ ಭದ್ರಾವತಿ ಗ್ರಾಮಾಂತರ ಹಿಂದುಳಿದ ವರ್ಗಗಳ ವಿಭಾಗ ಅಧ್ಯಕ್ಷರಾದ ಎಂ.ರಮೇಶ್ ಶಂಕರಘಟ್ಟ ಅಭಿಪ್ರಾಯಪಟ್ಟಿದ್ದಾರೆ.

ಅವರು ಇಂದು ಈ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ, ಶಾಸಕರು ಘಟನೆ ನಡೆದ ಆರಂಭದಿಂದಲೂ ಇದೊಂದು ಪರಸ್ಪರ ವೈಯಕ್ತಿಕ ಜಗಳವಾಗಿದ್ದು, ಇದಕ್ಕೂ ಶಿವಮೊಗ್ಗದಲ್ಲಿ ನಡೆದಿರುವ ಘಟನೆಗೂ ಯವುದೇ ಸಂಬಂಧವಿಲ್ಲವೆಂದು ಸಾಕಷ್ಟು ಸಾಕ್ಷಿಗಳೊಂದಿಗೆ ಪ್ರತಿಪಾಧಿಸುತ್ತಲೇ ಬಂದಿದ್ದರೂ, ಕೆಲವು ಕಾಣದ ಕೈಗಳು ಈ ಪ್ರಕರಣದ ದುರ್ಲಾಭ ಪಡೆಯಲು ಘಟನೆಯ ದಿಕ್ಕು ಬದಲಾಯಿಸಲು ಪ್ರಯತ್ನಿಸಿದ್ದವು. ಆದರೂ ಸಹಾ ಕೆಲವು ಮುಖಂಡರುಗಳು ಭದ್ರಾವತಿಗೆ ಪದೇ ಪದೇ ಭೇಟಿ ನೀಡಿ ಶಾಂತಿ ಕದಡಲು ಯತ್ನಿಸಿದ್ದವರ ಕಾರ್ಯವೈಖರಿಯನ್ನು ಉಗ್ರವಾದ ಮಾತುಗಳಲ್ಲಿ ಖಂಡಿಸಿದ್ದರು.

ಯಾವಾಗ ಎಡಿಜಿಪಿ ಆಲೋಕ್ ಕುಮಾರ್ ಇವರು ಭದ್ರಾವತಿಯಲ್ಲಿ ನಡೆದ ಘಟನೆಗೂ, ಶಿವಮೊಗ್ಗದ ಘಟನೆಗೂ ಸಂಬಂಧವಿಲ್ಲ. ಕೆಲವರಿಂದ ಆಗಬಹುದಾಗಿದ್ದ ಪಿತೂರಿಗೆ ಪೊಲೀಸರಿಂದ ಕಡಿವಾಣ ಹಾಕಲಾಗಿದೆ ಎಂದು ಹೇಳಿಕೆ ನೀಡಿದಾಗ ಶಾಂತಿ ಕದಡಲು ಯತ್ನಿಸಿದವರು ತೆಪ್ಪಗಾದರು ಎಂದು ತಿಳಿಸಿದರು.
ಶಾಸಕ ಸಂಗಮೇಶ್ವರ ಜನಪ್ರಿಯ ಸಹಿಸಿದ ಕೆಲವು ಪಕ್ಷಗಳು ಇಂತಹ ಘಟನೆಗಳನ್ನು ಬಳಸಿಕೊಂಡು ಅವರ ಹೆಸರಿಗೆ ಕಳಂಕ ತರುವ ಯತ್ನ ಹಲವು ವರ್ಷಗಳಿಂದ ನಡೆಸುತ್ತಲೇ ಬಂದಿದ್ದರೂ ಆ ಪ್ರಯತ್ನದಲ್ಲಿ ವಿಫಲರಾಗುತ್ತಿದ್ದಾರೆ. ಇನ್ನು ಮುಂದಾದರೂ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ರಾಜಕಾರಣಿಗಳು ಇಂತಹ ಹೀನಕೃತ್ಯಕ್ಕೆ ಕೈ ಹಾಕಿ ಕ್ಷೇತ್ರದಲ್ಲಿ ಆಶಾಂತಿಯನ್ನು ಉಂಟುಮಾಡುವುದನ್ನು ಕೈ ಬಿಡಬೇಕೆಂದು ರಮೇಶ್ ಆಗ್ರಹಿಸಿದ್ದಾರೆ.

ವರದಿ ಪ್ರಜಾಶಕ್ತಿ…