ಕರೋನಾ ಸೋಂಕಿನ ಮೊದಲನೇ ಮತ್ತು ಎರಡನೇ ಅಲೆಗಳ ಹರಡುವಿಕೆ ನಿಯಂತ್ರಣಗೊಳಿಸಲು ದೇಶ ಮತ್ತು ರಾಜ್ಯಾದ್ಯಂತ ಕ್ರಮವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವ್ಯಾಪಕವಾಗಿ ವಿಧಿಸಲಾದ ಸಂಪೂರ್ಣ ಲಾಕ್ ಡೌನ್ ನಿಂದ ಬಾಧಿತರಾಗಿ ಸಂಕಷ್ಟದಿಂದ ರಾಜ್ಯದ ಜನತೆ ಬಳಲುತ್ತಿರುವ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಆಡಾಳಿತಾರೂಢರಾಗಿರುವ ಬಿಜೆಪಿ ಸರಕಾರಗಳು ಜನಸಾಮಾನ್ಯರ ರೈತರ ರೈತ-ಕೂಲಿಕಾರ್ಮಿಕರ ಮತ್ತು ದೀನ – ದಲಿತರ ಬದುಕಿನ ಮೇಲೆ ಬರೆ ಎಳೆಯುವ ತೈಲ-ಇಂಧನ ಬೆಲೆ ಪ್ರತಿ ಲೀಟರ್ಗೆ 100 ರೂ ಗಳ ಗಡಿ ದಾಟಿದ್ದು, ವಿದ್ಯುತ್ ದರ , ರಸಗೊಬ್ಬರದ ಬೆಲೆ ಮುಂತಾದುವುಗಳ ಬೆಲೆಗಳನ್ನು ಏರಿಸಿ ಶ್ರೀಸಾಮಾನ್ಯರ ಹಾಗೂ ಮಧ್ಯಮ ವರ್ಗದವರ ಜನಜೀವನವನ್ನು ಅಸ್ತವ್ಯಸ್ತಗೊಳಿಸಿ ಇರುವುದನ್ನು ಪ್ರತಿಭಟಿಸಿ, ಈ ಬೆಲೆ ಏರಿಕೆಗಳನ್ನು ಹಿಂಪಡೆಯಲು ಹಾಗೂ ಕರೋನ ಸೋಂಕಿನಿಂದ ಸಾವಿಗೀಡಾದ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ಜಿಲ್ಲಾಧಿಕಾರಿಯವರ ಮುಖೇನ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ರಾಜ್ಯ ಸರ್ಕಾರ ವಿದ್ಯುತ್ ದರವನ್ನು ಹೆಚ್ಚಿಸಿ ಜನಸಾಮಾನ್ಯರಿಗೆ ಅದರಲ್ಲೂ ಮಧ್ಯಮ ಮತ್ತು ಕೆಳ ವರ್ಗದವರಿಗೆ ಶಾಕ್ ನೀಡಿದೆ.ಏಪ್ರಿಲ್ ತಿಂಗಳಿನಿಂದಲೇ ಅನ್ವಯವಾಗುವಂತೆ ಪ್ರತಿ ಯೂನಿಟ್ ಗೆ 30 ಪೈಸೆ ಏರಿಕೆ ಮಾಡಿರುವುದು ಅತ್ಯಂತ ದುಬಾರಿಯಾಗಿದ್ದು ಈ ಪರಿಸ್ಥಿತಿಯಲ್ಲಿ ಸದರಿ ಆದೇಶವನ್ನು ಪುನರ್ ಪರಿಶೀಲಿಸಿ , ಏರಿಕೆ ಮಾಡಿರುವ ದರವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು. ಈ ವರ್ಷ ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ವ್ಯಾಪಕವಾಗಿ ಬೀಳುತ್ತಿದ್ದು ರೈತರು ಬಿತ್ತನೆ ಕಾರ್ಯ ಗಳ ತಯಾರಿಯಲ್ಲಿ ಮಗ್ನರಾಗಿರುವ ಈ ಸಮಯದಲ್ಲಿ ರಸಗೊಬ್ಬರದ ಬೆಲೆ ತೀವ್ರ ಏರಿಕೆ ಆಗಿರುವುದು ರೈತ ಸಮುದಾಯವನ್ನು ಚಿಂತೆಗೀಡುಮಾಡಿದೆ ಆದ ಕಾರಣ ತಕ್ಷಣವೇ ರೈತರಿಗೆ ಪ್ರತಿ 50 kg ರಸಗೊಬ್ಬರಕ್ಕೆ ಕನಿಷ್ಠ 500 ರೂ ಗಳನ್ನು ಸಹಾಯಧನವಾಗಿ ನೀಡಬೇಕೆಂದು ಒತ್ತಾಯಿಸಿದರು.

CCTV SALES & SERVICE

9880074684

ಕೊರೋನಾ ಮಹಾಮಾರಿಯಿಂದ ಈಗಾಗಲೇ ಸಾವಿರಾರು ಜನ ಮೃತರಾಗಿದ್ದು ,ಮೃತರ ಕುಟುಂಬಗಳಲ್ಲಿ ಕುಟುಂಬ ನಿರ್ವಹಣೆ ಮಾಡುವ ಮತ್ತು ದುಡಿಮೆ ಮಾಡುವ ವ್ಯಕ್ತಿಗಳನ್ನು ಕಳೆದುಕೊಂಡಿದ್ದು, ಅವರ ಆರ್ಥಿಕ ಸ್ಥಿತಿ ದುಸ್ಥಿತಿಯಲ್ಲಿದೆ . ಅಲ್ಲದೆ ರಾಜ್ಯ ಸರ್ಕಾರ ಈಗಾಗಲೇ ಘೋಷಣೆ ಮಾಡಿರುವ ಬಡತನ ರೇಖೆ ಕೆಳಗೆ ಬರುವ 1 ಕುಟುಂಬದ ಒಬ್ಬ ಮೃತ ವ್ಯಕ್ತಿಗೆ 1ಲಕ್ಷ ಪರಿಹಾರ ಘೋಷಿಸಿರುವುದು ಆ ಕುಟುಂಬಗಳ ನಿರ್ವಹಣೆಗೆ ಯಾವುದಕ್ಕೂ ಸಾಕಾಗುವುದಿಲ್ಲ , ಆದಕಾರಣ ನಿರ್ಬಂಧಗಳನ್ನು ಸಡಿಲಗೊಳಿಸಿದ ಎಲ್ಲ ಮೃತ ಕುಟುಂಬ ವರ್ಗದವರಿಗೂ ಕನಿಷ್ಠ 5ಲಕ್ಷ ರೂ ಗಳನ್ನು ಪರಿಹಾರವಾಗಿ ನೀಡಬೇಕೆಂದು ಒತ್ತಾಯಿಸಿದರು .


ಆದಷ್ಟು ಶೀಘ್ರವಾಗಿ 18 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರಿಗೆ ಉಚಿತ ಲಸಿಕೆಯನ್ನು ನೀಡುವ ಬಗ್ಗೆ ಕ್ರಮ ಕೈಗೊಂಡು ಬಡ ಮತ್ತು ಮಧ್ಯಮ ವರ್ಗದವರ ಜೀವ ರಕ್ಷಣೆಗೆ ಸಹಕಾರಿ ಯಾಗಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು . ರಾಜ್ಯದ ಜನತೆಯ ಹಿತದೃಷ್ಟಿಯಿಂದ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಯವರ ಮುಖೇನ ರಾಜ್ಯದ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡರು.

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153