ಶಿವಮೊಗ್ಗದ “ವೀರಶೈವ-ಲಿಂಗಾಯತ” ಸಮುದಾಯದ ಅಭ್ಯುದಯಕ್ಕಾಗಿ ಹಾಗೂ ಏಳಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಪ್ರತಿಷ್ಠಿತ ಸೇವಾ ಸಂಸ್ಥೆಯಾದ “ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘ(ರಿ.)ದ” 2022-2025ನೇ ಸಾಲಿನ ಆಡಳಿತ ಮಂಡಳಿ ಚುನಾವಣೆಯಲ್ಲಿ “ಶ್ರೀ ಎಸ್.ಎಸ್. ಜ್ಯೋತಿಪ್ರಕಾಶ್ ಹಾಗೂ ಶ್ರೀ ಎನ್.ಜೆ. ರಾಜಶೇಖರ್(ಸುಭಾಷ್) ನೇತೃತ್ವದ ತಂಡದಲ್ಲಿದ್ದ 15(ಹದಿನೈದು) ಮಂದಿ ಸ್ಪರ್ಧಾಳುಗಳಲ್ಲಿ ಒಟ್ಟು 8(ಎಂಟು) ಮಂದಿ ಸ್ಪರ್ಧಾಳುಗಳು ನಿರಾಯಾಸವಾಗಿ ನಿನ್ನೆ ನಡೆದ ಚುನಾವಣೆಯಲ್ಲಿ ಅಭೂತಪೂರ್ವ ದಿಗ್ವಿಜಯ ದಾಖಲಿಸಲಾಗಿದೆ.

ಇದರೊಂದಿಗೆ “ಬಸವ ಸೇನೆ” ಹೆಸರಿನೊಂದಿಗೆ ಶ್ರೀ ಎಸ್.ಪಿ. ದಿನೇಶ್ ಅವರ ನೇತೃತ್ವದಲ್ಲಿ ಸ್ಪರ್ಧಿಸಿದ್ದ ಒಟ್ಟು 15(ಹದಿನೈದು) ಮಂದಿ ಸ್ಪರ್ಧಾಳುಗಳಲ್ಲಿ 7(ಏಳು) ಮಂದಿ ಸ್ಪರ್ಧಾಳುಗಳು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಆಡಳಿತದ ಮಂಡಳಿ ರಚಿಸಲು ಬೇಕಾದ ಒಟ್ಟು 15(ಹದಿನೈದು) ಮಂದಿ ನೂತನ ನಿರ್ದೇಶಕರು ಈ ಪ್ರಕ್ರಿಯೆ ಮೂಲಕ ಆಯ್ಕೆಗೊಂಡಿದ್ದಾರೆ.

ತಡರಾತ್ರಿ ಮುಕ್ತಾಯಗೊಂಡ ಚುನಾವಣೆ ಎಣಿಕೆ ಪ್ರಕ್ರಿಯೆಯಲ್ಲಿ ದಾಖಲೆಯ ಮತಗಳೊಂದಿಗೆ ಸಮಾಜದ ಬಂಧುಗಳ ಸಂಪೂರ್ಣ ವಿಶ್ವಾಸಗಳಿಸುವಲ್ಲಿ ಯಶಸ್ವಿಯಾದ ಶ್ರೀ ಎಸ್.ಎಸ್.ಜ್ಯೋತಿಪ್ರಕಾಶ್ ತಂಡವು ಸಂಭ್ರಮಾಚರಣೆಯಲ್ಲಿ ಭಾಗಿಯಾಗಿ, ಪರಸ್ಪರ ಸಿಹಿ ಹಂಚಿಕೊಂಡು ಮತ ನೀಡಿದ ಸಮಾಜದ ಎಲ್ಲಾ ಮತದಾರ ಬಂಧುಗಳಿಗೆ ಈ ಸಂದರ್ಭದಲ್ಲಿ ಕೃತಜ್ಞತೆ ಅರ್ಪಿಸಿದ ಚಿತ್ರಣ.

“ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ 2022-25ನೇ ಸಾಲಿನ ಚುನಾವಣೆ” ಯಲ್ಲಿ ಜಯ ಸಾಧಿಸಿದ ಸಮುದಾಯದ ಬಂಧುಗಳ ವಿವರ:-

  1. ಎಸ್.ಎಸ್. ಜ್ಯೋತಿ ಪ್ರಕಾಶ್-2201 ಮತಗಳು
  2. ಎನ್.ಜಿ. ರಾಜಶೇಖರ್-1984 ಮತಗಳು
  3. ಎಸ್.ಪಿ. ದಿನೇಶ್-1832 ಮತಗಳು
  4. ಅನಿತಾ ರವಿಶಂಕರ್-1557 ಮತಗಳು
  5. ಬಳ್ಳೆಕೆರೆ ಸಂತೋಷ್-1411 ಮತಗಳು
  6. ಸಿ. ರೇಣುಕಾರಾದ್ಯ-1395 ಮತಗಳು
  7. ಮಹಾಲಿಂಗಶಾಸ್ತ್ರಿ-1241 ಮತಗಳು
  8. ಹೆಚ್. ಶಾಂತಾ ಆನಂದ್-1193 ಮತಗಳು
  9. ಕೆ.ಎಸ್. ತಾರಾನಾಥ್-1176 ಮತಗಳು
  10. ಮೋಹನ್ ಕುಮಾರ್ ಬಾಳೆಕಾಯಿ-1173 ಮತಗಳು
  11. ಟಿ.ಬಿ. ಜಗದೀಶ್-1145 ಮತಗಳು
  12. ಪಿ. ರುದ್ರೇಶ್-1119 ಮತಗಳು
  13. ಎಂ.ಆರ್. ಪ್ರಕಾಶ್-1077 ಮತಗಳು
  14. ಸಿ. ಮಹೇಶ್ ಮೂರ್ತಿ-1046 ಮತಗಳು
  15. ರತ್ನ ಜಿ.ಆರ್/ಕೆ.ಸಿ. ನಾಗರಾಜ್-1033 ಮತಗಳು.

ವರದಿ ಮಂಜುನಾಥ್ ಶೆಟ್ಟಿ…