ಕುವೆಂಪು ವಿಶ್ವವಿದ್ಯಾಲಯದ ನೂತನ ಶೈಕ್ಷಣಿಕ ವೇಳಾಪಟ್ಟಿ ಖಂಡಿಸಿ ಮತ್ತು ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರತಿಭಟನೆ ನಡೆಯಿತು.

ಕುವೆಂಪು ವಿಶ್ವವಿದ್ಯಾಲಯವು ದಿನಾಂಕ 18-08-2022ರಂದು ನೂತನ ಶೈಕ್ಷಣಿಕ ವೇಳಾಪಟ್ಟಿಯನ್ನು ಪ್ರಕಟಿಸಿದ್ದು ಇದರ ಅನ್ವಯ ಪದವಿ 4&6ನೆ ಸೆಮ್ ನ ವಿದ್ಯಾರ್ಥಿಗಳಿಗೆ ದಿನಾಂಕ 30-08-2022 ರಂದು ಪ್ರಸಕ್ತ ಸೆಮ್ ನ ಕೊನೆಯ ದಿನವೆಂದು ಪ್ರಕಟಿಸಿದ್ದು ಮತ್ತು ದಿನಾಂಕ 07-09-2022 ರಿಂದ ಪರೀಕ್ಷೆಗಳನ್ನು ಘೋಷಣೆ ಮಾಡಿದ್ದು ಈ ನಿಟ್ಟಿನಲ್ಲಿ ಪ್ರಸಕ್ತ ಸೆಮ್ ನ ವಿದ್ಯಾರ್ಥಿಗಳಿಗೆ ತರಗತಿಗಳು ಬಹುತೇಕ ಜೂನ್ ಇಂದ ಶುರುವಾಗಿರುವುದರಿಂದ ನೂತನ ಆದೇಶದ ಅನ್ವಯ ಈ ಸೆಮ್ ನ ವಿದ್ಯಾರ್ಥಿಗಳಿಗೆ ಅಗತ್ಯಕ್ಕಿಂತ ಕಡಿಮೆ ತರಗತಿ ಅವಧಿಗಳಾಗುವುದರಿಂದ ಪಾಠ-ಪ್ರವಚನಗಳು ಸಂಪೂರ್ಣವಾಗದೆ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೊಂದರೆ ಅನುಭವಿಸುವಂತಾಗಬಹುದು ಮತ್ತು ಒತ್ತಡದಲ್ಲಿ ಪರೀಕ್ಷೆ ಎದುರಿಸುವಂತಾಗುತ್ತದೆ ಎಂದರು.

ಅಲ್ಲದೇ 2ನೇ ಸೆಮ್ ನ ವಿದ್ಯಾರ್ಥಿಗಳು ಸಹ ಇದೇ ರೀತಿ ಸಮಸ್ಯೆ ಎದುರಿಸುತ್ತಿದ್ದಾರೆ ಈ ನಿಟ್ಟಿನಲ್ಲಿ ಕುವೆಂಪು ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿಗಳಿಗೆ ನೂತನವಾಗಿ ಹೊರಡಿಸಿರುವ ಶೈಕ್ಷಣಿಕ ವೇಳಾಪಟ್ಟಿಯನ್ನು ಹಿಂತೆಗೆದುಕೊಂಡು ಪರಿಷ್ಕರಿಸಿ ವಿದ್ಯಾರ್ಥಿಗಳ ಹಿತ ಕಾಪಾಡುವ ನಿಟ್ಟಿನ ವೇಳಾಪಟ್ಟಿಯನ್ನು ರಚಿಸಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಶಿವಮೊಗ್ಗ ಶಾಖೆಯು ಆಗ್ರಹಿಸುತ್ತದೆ.

ಪ್ರಸಕ್ತ NEP ಮೊದಲನೇ ವರ್ಷದ B.Com,BCA,BBA,BSW ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ಬಹಳ ಏರಿಕೆ ಮಾಡಿದೆ ಈ ನಿಟ್ಟಿನಲ್ಲಿ ಈಗಾಗಲೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಪ್ರತಿಭಟನೆಗೆ ಮಣಿದು ಕುವೆಂಪು ವಿವಿಯು 300ರೂ ಗಳಷ್ಟನ್ನು ಕಡಿಮೆ ಮಾಡಿದ್ದರೂ ಸಹ ಇನ್ನೂ ಪರೀಕ್ಷಾ ಶುಲ್ಕವನ್ನು ಕಡಿಮೆ ಮಾಡಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಶಿವಮೊಗ್ಗ ಶಾಖೆಯು ಆಗ್ರಹಿಸುತ್ತದೆ.ಈ ನಿಟ್ಟಿನಲ್ಲಿ ಈ ವಿದ್ಯಾರ್ಥಿಗಳ ಆಗ್ರಹದ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚಿಸಿ ವಿದ್ಯಾರ್ಥಿಗಳ ಹಿತ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಮ್ಮನ್ನು ಆಗ್ರಹಿಸುತ್ತದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಿದರು.

ವರದಿ ಪ್ರಜಾಶಕ್ತಿ…