ಕುವೆಂಪು ವಿಶ್ವವಿದ್ಯಾಲಯದ ಪದವಿ ಕಾಲೇಜುಗಳ 4 ಮತ್ತು 6ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ
ಪರೀಕ್ಷೆ ದಿನಾಂಕವನ್ನು ಮುಂದೂಡಲು ಶಿವಮೊಗ್ಗ ಜಿಲ್ಲಾ ಎನ್. ಎಸ್. ಯು. ಐ ಕುವೆಂಪು ವಿಶ್ವವಿದ್ಯಾಲಯದ ಅಧಿಕಾರಿಗೆ ಮನವಿ ಸಲ್ಲಿಸಿದರು.

ಈ ಸೆಮಿಸ್ಟರ್‍ಗಳಿಗೆ ಕಾಲೇಜು ಪ್ರಾರಂಭವಾಗಿ ಕೇವಲ 2 ತಿಂಗಳಷ್ಟೇ ಆರಂಭವಾಗಿದ್ದು, ನಿಗಧಿತ ಪಠ್ಯದ ಪಾಠ-ಪ್ರವಚನಗಳು ಮುಗಿದಿರುವುದಿಲ್ಲ. ಆದರೆ, ಕುವೆಂಪು ವಿವಿಯು ದಿನಾಂಕ: 08-09-2022ರಿಂದ 22-09-2022ರ ವರೆಗೆ ಪರೀಕ್ಷೆಗೆ ದಿನಾಂಕ ನಿಗಧಿಪಡಿಸಿದೆ. ಆದರೆ, ಕಾಲೇಜು ನಿಗಧಿತ ಸಮಯಕ್ಕಿಂದ ತಡವಾಗಿ ಪ್ರಾರಂಭವಾದ್ದು, ಉಪನ್ಯಾಸಕರಿಗೆ ಸಮಯದ ಅಭಾವದಿಂದ ನಿಗಧಿತ ಪಠ್ಯಗಳು ಪೂರ್ಣಗೊಂಡಿರುವುದಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗಲಿದ್ದು, ಉತ್ತಮ ಅಂಕ ಗಳಿಸುವುದು ಅಸಾಧ್ಯವಾಗಲಿದೆ.
ನಿಗಧಿತ ಪಠ್ಯಗಳನ್ನು ಪೂರ್ಣಗೊಳಿಸು ಇನ್ನೂ ಕನಿಷ್ಠ ಒಂದು ತಿಂಗಳಾದರೂ ಬೇಕು ಎಂದು ಉಪನ್ಯಾಸಕರು ತಿಳಿಸುತ್ತಿದ್ದಾರೆ.

ಹಾಗೆಯೇ ಈ ವರೆಗೂ ಕೇವಲ 1 ಇಂಟರ್ನಲ್ ಪರೀಕ್ಷೆ ನಡೆಸಲಾಗಿದೆ. ಇನ್ನೂ 1 ಇಂಟರ್ನಲ್ ಪರೀಕ್ಷೆ ಬಾಕಿದೆ. ಆದರೆ, ವಿವಿಯು ದಿನಾಂಕ: 30-08-2022ರೊಳಗೆ ನಿಗಧಿತ ಪಠ್ಯವನ್ನು ಪೂರ್ಣಗೊಳಿಸುವಂತೆ ಆದೇಶ ಹೊರಡಿಸಿದೆ.
ಪಾಠಗಳು ಪೂರ್ಣ ಪ್ರಮಾಣದಲ್ಲಿ ಮುಗಿಯದೇ ಇರುವುದರಿಂದ ಇದೇ ರೀತಿಯ ಸನ್ನಿವೇಶದಲ್ಲಿ ದಾವಣಗೆರೆ ವಿವಿಯವರು ಪರೀಕ್ಷೆ ಮುಂದೂಡಿರುವುದನ್ನು ಗಮನಿಸಿ ಕುವೆಂಪು ವಿವಿಯಲ್ಲೂ 4 ಮತ್ತು 6ನೇ ಸೆಮಿಸ್ಟರ್‍ನ ಪರೀಕ್ಷೆಗಳನ್ನು ಕನಿಷ್ಠ ಒಂದು ತಿಂಗಳು ಪರೀಕ್ಷೆ ಮುಂದೂಡಿ, ಬಾಕಿ ಉಳಿದಿರುವ 1 ಇಂಟರ್‍ನಲ್ ಪರೀಕ್ಷೆ ನಡೆಸಲು ಹಾಗೂ ಉಪನ್ಯಾಸಕರಿಗೆ ಪೂರ್ಣ ಪಾಠ ಮಾಡಲು ಅವಕಾಶ ಮಾಡಿಕೊಡಬೇಕೆಂದು ಈ ಮೂಲಕ ಒತ್ತಾಯಿಸುತ್ತಿದ್ದೇವೆ.

ಪರಿಶಿಷ್ಟ ಜಾತಿ/ವರ್ಗದ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ರದ್ದುಪಡಿಸಲು ಒತ್ತಾಯ…


ಕುವೆಂಪು ವಿವಿಯಲ್ಲಿ ಈ ಹಿಂದೆ ಎಸ್‍ಸಿ/ಎಸ್‍ಟಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕದಲ್ಲಿ ವಿನಾಯಿತಿ ಇತ್ತು. ಕೇವಲ ಅಂಕಪಟ್ಟಿ ಶುಲ್ಕ ಮಾತ್ರ ಪಡೆಯಲಾಗುತ್ತಿತ್ತು. ಆದರೆ ಈ ಬಾರಿ ಎಸ್‍ಸಿ/ಎಸ್‍ಟಿ ವಿದ್ಯಾರ್ಥಿಗಳಿಗೂ ಇತರೆ ವಿದ್ಯಾರ್ಥಿಗಳಂತೆ ಪರೀಕ್ಷಾ ಶುಲ್ಕ, ಅಂಕಪಟ್ಟಿ ಶುಲ್ಕ, ಅರ್ಜಿ ಶುಲ್ಕ ವಸೂಲು ಮಾಡುತ್ತಿರುವುದು ಸರಿಯಲ್ಲ. ಆದ್ದರಿಂದ ಕೂಡಲೇ ಮಾನ್ಯ ಕುಲಪತಿಗಳು ಈ ಆದೇಶವನ್ನು ರದ್ದುಗೊಳಿಸಿ, ಹಿಂದಿನಂತೆ ಪರೀಕ್ಷಾ ಶುಲ್ಕ ನಿಗಧಿಪಡಿಸಬೇಕೆಂದು ಒತ್ತಾಯಿಸುತ್ತಿದ್ದೇವೆ.
ಮೇಲಿನ ಬೇಡಿಕೆಗಳನ್ನು ಕೂಡಲೇ ಈಡೇರಿಸದಿದ್ದಲ್ಲಿ ಜಿಲ್ಲಾ ಎನ್.ಎಸ್.ಯು.ಐ. ವತಿಯಿಂದ ವಿಶ್ವವಿದ್ಯಾಲಯ ಬಂದ್ ಪ್ರತಿಭಟನೆಗೆ ಕರೆಕೊಡುವುದಾಗಿ ಈ ಮೂಲಕ ಎಚ್ಚರಿಸುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ವಿಜಯ್ , ಕಾರ್ಯಾಧ್ಯಕ್ಷ ರವಿ ಕಾಟಿಕೆರೆ , ನಗರ ಅಧ್ಯಕ್ಷ ಚರಣ್ ,ಗ್ರಾಮಾಂತರ ಅಧ್ಯಕ್ಷ ಹರ್ಷಿತ್‍ಗೌಡ ಹಾಗೂ ಗಿರೀಶ್, ರವಿ, ಶರಣ್, ಚಂದ್ರೋಜಿ ರಾವ್,ಪ್ರದೀಪ್, ವಿಶಾಲ್, ಸಾಗರ್ ಪ್ರಮುಖ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವರದಿ ಪ್ರಜಾಶಕ್ತಿ…