ಗೌರಿಗದ್ದೆ ಆಶ್ರಮದ ಅವಧೂತ, ಶ್ರೀ ವಿನಯ್ ಗುರೂಜೀ ಇಂದು ಮೂವತ್ತನಾಲ್ಕು ವಸಂತಗಳನ್ನ ಪೂರೈಸಿದ್ದಾರೆ. ಅವರ ಹುಟ್ಟು ಹಬ್ಬದ ಅಂಗವಾಗಿ ಶಿವಮೊಗ್ಗದ ಸರ್ಜಿ ಫೌಂಡೇಶನ್ ಹಾಗೂ ಗೌರಿಗದ್ದೆ ಮಹಾತ್ಮಾ ಗಾಂಧೀ ಸೇವಾ ಟ್ರಸ್ಟ್, ಹಲವು ಸಂಘಟನೆಗಳ ಸಹಯೋಗದಲ್ಲಿ ನಾನಾ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದವು. ಕಳೆದ ಮೂರು ದಿನಗಳಿಂದ ನಿರಂತರವಾಗಿ ಶಿವಮೊಗ್ಗ ನಗರದ ತುಂಗಾ ಮೇಲ್ದಂಡೆ ಬಲಭಾಗದ ಅಂಚಿನಲ್ಲಿ ಸಸಿ ನೆಡುವ ಕಾರ್ಯ ಸಾಂಗವಾಗಿ ಸಾಗಿದ್ದು, ಈ ತನಕ ದಾಖಲೆ ಪ್ರಮಾಣದಲ್ಲಿ ಸಾವಿರಾರು ಸಸಿಗಳು ನೆಲೆಕಂಡಿವೆ. ಇಂದು ಮುಂಜಾನೆಯೂ ಸಹ ಮೇಲ್ದಂಡೆ ಭಾಗದಲ್ಲಿ ವನಮಹೋತ್ಸವ ಏರ್ಪಡಿಸಿ ನೂರಾರು ಗಿಡಗಳನ್ನ ನೆಡಲಾಗಿದೆ. ಕಾರ್ಯಕ್ರಮದಲ್ಲಿ ಸರ್ಜಿ ಫೌಂಡೇಷನ್ ನ ಡಾ. ಧನಂಜಯ ಸರ್ಜಿ ಹಾಗೂ ಪರಿಸರಾಸಕ್ತರು ಭಾಗವಹಿಸಿ ಶ್ರಮಧಾನ ಮಾಡಿದರು.
ನಂತರ, ಗುರೂಜೀ ಜನ್ಮದಿನದ ಅಂಗವಾಗಿ ಸರ್ಜಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಯ್ತು. ನಗರದ ಸಮಾಜಮುಖಿ ಸಂಘಟನೆಗಳು, ವಿನಯ್ ಗುರೂಜೀ ಅನುಯಾಯಿಗಳು, ಅಭಿಮಾನಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಶಿಬಿರದಲ್ಲಿ ಭಾಗವಹಿಸದ್ದರು.
ಜಾತಿ-ಧರ್ಮ ಮೀರಿದ ದಾನ ರಕ್ತದಾನ. ರಕ್ತದಾನಿಯೊಬ್ಬ ನಾಲ್ಕು ಜನರ ಪ್ರಾಣ ಉಳಿಸಬಲ್ಲ, ಅಂಗಾಗ ದಾನಗಳ ಮೂಲಕ ಎಂಟು ಜೀವಕ್ಕೆ ಆಸರೆಯಾಗಬಲ್ಲ. ಇಂಥಹ ಶ್ರೇಷ್ಠ ದಾನಗಳಿಂದ ಇನ್ನೊಬ್ಬರ ದೇಹದಲ್ಲಿ ಜೀವಿಸಬಲ್ಲ. ಮಾನವೀಯ ಮೌಲ್ಯಗಳ ಪ್ರತಿಪಾದಕ ವಿನಯ್ ಗುರೂಜೀ ಜನ್ಮದಿನದಂದು ರಕ್ತದಾನ ಮಹತ್ವಪೂರ್ಣವಾದದ್ದು. ಜನರು ಇಂತಹ ಕಾರ್ಯಗಳಲ್ಲಿ ಹೆಚ್ಚೆಚ್ಚು ತೊಡಗಿಕೊಳ್ಳಬೇಕು.
ಗುರೂಜೀ ಜನ್ಮದಿನ ಸಂಭ್ರಮವನ್ನ ಅರ್ಥಗರ್ಭಿತವಾಗಿ ಆಚರಿಸಲು ನೆರವಾದ ಪರಿಸರಾಸಕ್ತ ತಂಡಗಳು, ಸಾಮಾಜಿಕ ಹೋರಾಟ ಸಂಘಟನೆಗಳ ಸದಸ್ಯರಿಗೆ ಡಾ. ಧನಂಜಯ ಸರ್ಜಿ ಧನ್ಯವಾದಗಳನ್ನ ತಿಳಿಸಿದರು.