ಶಿಕಾರಿಪುರ ತಾಲೂಕಿನ ಹೊಸೂರು ಹೋಬಳಿ ಬೇಗೂರು ಗ್ರಾಮದ ರೈತರು ಇನಾಂ ಭೂ ಸಮಸ್ಯೆಯನ್ನು ಬಗೆಹರಿಸಲು ಸಂಸದರಾದ ಬಿ. ವೈ ರಾಘವೇಂದ್ರ ಅವರ ನೇತೃತ್ವದಲ್ಲಿ ಬಿಜೆಪಿ ವತಿಯಿಂದ ತಹಶಿಲ್ದಾರ್ ರವರಿಗೆ ಮನವಿ ಸಲ್ಲಿಸಿದರು.

ಈ ವಿಷಯವಾಗಿ ಕಂದಾಯ ಸಚಿವರಾದ ಅಶೋಕ್ ಅವರು ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದಾರೆ. ಬಗರ್ ಹುಕುಂ ಅರಣ್ಯ ದೃತಿಗೆಡುವುದು ಅವಶ್ಯಕತೆ ಇಲ್ಲ ರೈತರಿಗೆ ತೊಂದರೆ ಯಾವತ್ತೂ ನಿಮ್ಮೊಂದಿಗೆ ಇರುತ್ತೇವೆ. ಅಡ್ವಕೇಟ್ ಜನರಲ್, ಮುಖ್ಯಮಂತ್ರಿಯವರ ಜೊತೆ ಮತ್ತು ಯಡಿಯೂರಪ್ಪನವರೊಂದಿಗೆ ಚರ್ಚೆ ಮಾಡಲಾಗಿದೆ ನಮ್ಮ ರೈತರಿಗೆ ತೊಂದರೆ ಆಗದಂತೆ ನೋಡಿಕೊಂಡು, ಈ ಸಮಸ್ಯೆಗೆ ಪರಿಹಾರ ಮಾಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಕೆ.ಎಸ್‌. ಗುರುಮೂರ್ತಿ ಅವರು. ನಿಂಬೆಗುಂದಿ ಸಿದ್ದಲಿಂಗಣ್ಣ, ಕಬ್ಬಡ್ಡಿ ರಾಜಪ್ಪ, ಬಿಜೆಪಿ ತಾಲೂಕು ಅಧ್ಯಕ್ಷರಾದ ವೀರೇಂದ್ರ ಪಾಟೀಲ್, ಪುಟ್ ಸ್ವಾಮಿ, ಹಾಗೂ ರೈತರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…