ಪ್ರಪಂಚಕ್ಕೆ ಯೋಗ ಮತ್ತು ಧ್ಯಾನವನ್ನು ಧಾರೆಯೆರೆದ ಆದಿ ಯೋಗಿ ಧ್ಯಾನ ರೂಪಿ ಶಿವನ ಮೂರ್ತಿ ಪ್ರತಿಷ್ಠಾಪಿಸಿ ಅವನಿಗೆ ನಿತ್ಯ ಯೋಗ ಧ್ಯಾನದ ಪೂಜೆ ಸಲ್ಲಿಸುವ ಯೋಗಾಚಾರ್ಯ ಡಾ ಸಿ.ವಿ. ರುದ್ರಾರಾಧ್ಯರ ಬಹುದಿನದ ಕನಸು ಈಡೇರುವ ದಿನ ಸಮೀಪಿಸಿದೆ ಲೋಕಾರ್ಪಣೆಯ ಸಿದ್ಧತೆಗಾಗಿ ಇಂದು ಶಿವನ ಮೂರ್ತಿಯನ್ನು ಪೀಠದಲ್ಲಿ ಇಂದಿನ ಶುಭಮಹೂರ್ತದಲ್ಲಿ ಪೂಜಾ ವಿಧಿಗಳ ಮೂಲಕ ಪ್ರತಿಷ್ಠಾಪಿಸಲಾಯಿತು.

ಯೋಗಾಚಾರ್ಯರ ನೇತೃತ್ವದಲ್ಲಿ ಕಾರ್ಯಕ್ರಮ ನೆರವೇರಿತು. ಯೋಗ ಶಿಕ್ಷಣಾರ್ಥಿಗಳಿಂದ ಪ್ರಾರ್ಥನೆ ಭಕ್ತಿ ಗಾಯನ ಸಮಾರಂಭವನ್ನು ಪವಿತ್ರ ಗೊಳಿಸಿತು. ಸುಂದರವಾದ ಪ್ರಕೃತಿ ಸೌಂದರ್ಯದಲ್ಲಿ ಶಿವನ ಮೂರ್ತಿ ಕಂಗೊಳಿಸುತ್ತಿತ್ತು. ಪೂಜೆ ನೆರವೇರಿಸಿ ಮಾತನಾಡಿದ ಯೋಗಾಚಾರ್ಯ ರುದ್ರರಾಧ್ಯರು ನಿರ್ಮಾಣ ಕೆಲಸ ಪೂರ್ಣಗೊಂಡ ಬಳಿಕ ಕೆಲವೇ ದಿನಗಳಲ್ಲಿ ಶಿವನ ಮೂರ್ತಿ ಲೋಕಾರ್ಪಣೆಗೊಳ್ಳಲಿದೆ ಎಂದು ತಿಳಿಸಿ ಸಹಕರಿಸಿದ ಶ್ರೀ ಲಿಂಗಮೂರ್ತಿ, ಅಧ್ಯಕ್ಷರು ಖನಿಜ ನಿಗಮ ಮಂಡಳಿ, ಶಿಲ್ಪಿಗಳಾದ ಶ್ರೀ ಸುಖೇಶ್, ಕವೀಶ್ ಮತ್ತು ತಂಡದವರನ್ನು,ಟ್ರಸ್ಟಿಗಳನ್ನು, ಯೋಗ ಶಿಕ್ಷಣಾರ್ಥಿಗಳ ಸಹಕಾರವನ್ನು ಸ್ಮರಿಸಿದರು.

ಶ್ರೀಮೃತ್ಯುಂಜಯ ಶಾಸ್ತ್ರಿ ಮತ್ತು ಸಿದ್ದಲಿಂಗಯ್ಯ ಶಾಸ್ತ್ರಿ ಇವರಿಂದ ಪೂಜಾ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ಡಾ. ಪದ್ಮನಾಭ ಅಡಿಗ, ವಿಜಯ ಬಾಯರ್ ಓಂಕಾರ ಜಿ.ಎಸ್,
ಜಿ ವಿಜಯಕುಮಾರ್, ವಿಜಯ ಕೃಷ್ಣ, ಕಾಟನ್ ಜಗದೀಶ್, ಲವಕುಮಾರ್ ಇನ್ನಿತರರಿದ್ದರು.

ವರದಿ ಪ್ರಜಾಶಕ್ತಿ…