ಎ. ಝೆಡ್ ಮಾರ್ಷಲ್ ಆರ್ಟ್ಸ್ ಸಂಸ್ಥೆಯ ವತಿಯಿಂದ ಮಾಜಿ ರಾಷ್ಟ್ರಪತಿ ದಿವಂಗತ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಸ್ಮರಣಾರ್ಥವಾಗಿ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿ 28 ರಂದು ಶಿವಮೊಗ್ಗ ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದಿದ್ದು. ಈ ಉದ್ಘಾಟನಾ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸದಸ್ಯರಾದಂತಹ ರುದ್ರೆಗೌಡರು,ಮಾಜಿ ಶಿವಮೊಗ್ಗ ಹಾಗೂ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಜ್ಯೋತಿಪ್ರಕಾಶ್. ಮಾಜಿ ನಗರಸಭಾ ಸದಸ್ಯರಾದ ಬಳ್ಳೆಕೆರೆ ಸಂತೋಷ್. ಮಹಾನಗರಪಾಲಿಕೆ ಸದಸ್ಯರಾದ ಇ ವಿಶ್ವಾಸ್. ಆರತಿ ಪ್ರಕಾಶ್.ಮಾಜಿ ನಗರಸಭೆ ಅಧ್ಯಕ್ಷರಾದ ಎಂ ಶಂಕರ್. ನಗರಸಭೆ ಸದಸ್ಯರಾದ ಧೀರರಾಜು ಹೊನ್ನವಿಲೆ ಮಾಮ್ಕೋಸ್ ನಿರ್ದೇಶಕರಾದ ವಿರುಪಾಕ್ಷಪ್ಪನವರು. ಮತ್ತು ರೂಪ ಪ್ರಶಾಂತ್ ಇನ್ನು ಮುಂತಾದ ಗಣ್ಯರಿಂದ ಜ್ಯೋತಿ ಬೆಳಗುವ ಮೂಲಕ ಕರಾಟೆ ಪಂದ್ಯಾವಳಿಯು ಪ್ರಾರಂಭವಾಯಿತು.

ಈ ಪಂದ್ಯಾವಳಿಗೆ ದೇಶದ ನಾನಾ ಭಾಗಗಳಿಂದ 1800 ಕ್ರೀಡಾಪಟುಗಳು ಆಗಮಿಸಿದ್ದು. ಈ ಪಂದ್ಯಾವಳಿಯಲ್ಲಿ ವಿಶೇಷ ಸನ್ಮಾನಿತರಾಗಿ ಸಂಸ್ಥೆಯು ವತಿಯಿಂದ ನಾಗೇಂದ್ರ ಎಫ್ ಹೊನ್ನಾಳಿ ಆಪಾರ ಜಿಲ್ಲಾಧಿಕಾರಿ ಗಳು ಶಿವಮೊಗ್ಗ. ಶ್ರೀಯುತ ರಾಜೇಶ್ ಸುರಗಿಹಳ್ಳಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ವೈದ್ಯಾಧಿಕಾರಿಗಳು .ಶ್ರೀಯುತ ರಘುರಾಜ್ ಹೆಚ್. ಕೆ ಸಂಪಾದಕರು ನ್ಯೂಸ್ ವಾರಿಯರ್ಸ್ ಪತ್ರಿಕೆ ಶಿವಮೊಗ್ಗ. ಶ್ರೀಯುತ ಮಾಲತೇಶ್ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರು.ಶಿವಮೊಗ್ಗ ಇವರಿಗೆ ಸನ್ಮಾನಿಸಲಾಯಿತು.ಈ ಪಂದ್ಯಾವಳಿಯ ಯಶಸ್ವಿಗೊಳಿಸಲು ಬಂದಂತಹ ಗಣ್ಯರಿಗೆ A. Z ಮಾರ್ಷಲ್ ಸಂಸ್ಥೆಯ ಅಧ್ಯಕ್ಷರಾದ ಎ. ಝೆಡ್ ಮುಹೀಬ್. ಕಾರ್ಯದರ್ಶಿಯಾದ ನವೀನ್ . ಮಂಜುನಾಥ್. ಸಾಧಿಕ್. ಮಹೇಶ್ ಮುಂತಾದ ಪದಾಧಿಕಾರಿಗಳಿಂದ ಅಭಿನಂದನೆ ಸಲ್ಲಿಸಲಾಯಿತು…

ವರದಿ ಪ್ರಜಾಶಕ್ತಿ…