ಶಿವಮೊಗ್ಗ – ತಾಳುಗುಪ್ಪ ವಿಭಾಗದ ಕುಂದು ಕೊರತೆ ವೀಕ್ಷಣೆಗಾಗಿ ಶಿವಮೊಗ್ಗಕ್ಕೆ ಆಗಮಿಸಿದ ನೈಋತ್ಯ ರೈಲ್ವೇ ಜೆನರಲ್ ಮ್ಯಾನೇಜರ್ ಶ್ರೀ ಸಂಜೀವ್ ಕುಮಾರ್ ಅವರನ್ನು ಸಂಸದರಾದ ಬಿ. ವೈ ರಾಘವೇಂದ್ರ ರವರು ಆತ್ಮೀಯವಾಗಿ ಸ್ವಾಗತಿಸಿ ,ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ ಶಿವಮೊಗ್ಗ ಜಿಲ್ಲೆಯ ವಿವಿಧ ರೈಲ್ವೇ ವಿಷಯಗಳ ಕುರಿತು ಮಹತ್ವದ ಚರ್ಚೆ ನೆಡೆಸಿದರು.
ಚರ್ಚೆಯ ಮುಖ್ಯ ವಿಷಯ…
• ಶಿವಮೊಗ್ಗ ಶಿಕಾರಿಪುರ ರಾಣೆಬೆನ್ನೂರು ನೂತನ ರೈಲು ಮಾರ್ಗ
• ಕೋಟೆಗಂಗೂರು ಕೋಚಿಂಗ್ ಡಿಪೋ
• ಅರಸಾಳು ರೈಲ್ವೆ ನಿಲ್ದಾಣದಲ್ಲಿ ರೈಲುಗಳನ್ನು ನಿಲ್ಲಿಸುವ ಬಗ್ಗೆ
• ಸಾಗರದ ಜಂಬಗಾರು ರೈಲ್ವೆ ನಿಲ್ದಾಣದ ಅಭಿವೃದ್ಧಿ
• ಶಿವಮೊಗ್ಗ ನಗರ ಮತ್ತು ತಾಳಗುಪ್ಪ ರೈಲ್ವೆ ನಿಲ್ದಾಣದ ಉನ್ನತಿಕರಣ.
• ರೈಲ್ವೆ ಓವರ್ ಬಿಡ್ಸ್ ಮತ್ತು ರೈಲ್ವೆ ಅಂಡರ್ ಬಿಡ್ಸ್ ಕೆಲಸವನ್ನು ಶೀಘ್ರವಾಗಿ ಪೂರ್ಣಗೊಳಿಸುವ ಬಗೆ
• ತಾಳಗುಪ್ಪ ಸಿರಸಿ ತಡಸ ಹುಬ್ಬಳ್ಳಿ ನೂತನ ರೈಲ್ವೆ ಮಾರ್ಗದ ಸರ್ವೆ ಮುಗಿದಿದ್ದು ಮುಂದಿನ ಬಜೆಟ್ ನಲ್ಲಿ ಹಣ ಬಿಡುಗಡೆಗೊಳಿಸುವ ಬಗ್ಗೆ ಚರ್ಚಿಸಿದರು.
• ಟ್ರೈನ್ ಸಂಖ್ಯೆ 16580 / 16581 ಯಶವಂತಪುರ ಶಿವಮೊಗ್ಗ ಯಶವಂತಪುರ – ವಾರಕ್ಕೆ ಮೂರು ದಿನ ರೈಲನ್ನು, ವಾರಪೂರ್ತಿ ಸಂಚರಿಸಲು ಮನವಿ ಮಾಡಿದರು.