ಶಿವಮೊಗ್ಗ ಬಳಿಯ ಸೋಗಾನೆಯಲ್ಲಿ ನಿರ್ಮಿಸುತ್ತಿರುವ ವಿಮಾನನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರಿಡಬೇಕು ಈ ಮೂಲಕ ಕುವೆಂಪು ಅವರ ಹೆಸರಿಗೆ ಜಾಗತಿಕ ಮನ್ನಣೆ ಕಲ್ಪಿಸಬೇಕೆಂದು ಅಖಿಲ ಕರ್ನಾಟಕ ಡಿ ಕೆ ಶಿವಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷರು ಹಾಗೂ ಕೆ.ಪಿ.ಸಿ.ಸಿ ಸದಸ್ಯರು ಆರ್ ಮೋಹನ್ ರವರು ಒತ್ತಾಯಿಸಿದ್ದಾರೆ . ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ಪುರಸ್ಕ ತ ಕನ್ನಡ ಘಟನೆಯನ್ನು ಜಗದ ಉದ್ದಗಲಕ್ಕೆ ಪಸರಿಸಿದ ಕುವೆಂಪುರವರ ಕನ್ನಡ ಸಾರಸತ್ವ ಲೋಕದ ಮೇರುಪರ್ವತವಾಗಿದ್ದಾರೆ . ಇಂತಹ ಮಹನೀಯರು ಶಿವಮೊಗ್ಗ ಜಿಲ್ಲೆಯವರು ಎಂಬುದು ಇಡೀ ಭಾರತಕ್ಕೆ ಶೋಭೆ ತರುವ ಸಂಗತಿ . ಓ ನನ್ನ ಚೇತನ ಆಗು ನೀ ಅನಿಕೇತನ ಎಂದು ಸಾರಿದ ಹಿರಿಯ ಚೇತನ ಮಹಾಚಿಂತಕ ವಿಶ್ವ ಮಾನವತಾವಾದಿ ಕುವೆಂಪು ಅವರ ಹೆಸರನ್ನು ವಿಮಾನನಿಲ್ದಾಣಕ್ಕೆ ಡುವುದು ಶೋಭೆತರುತ್ತದೆ .ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕೂಡಲೇ ಕಾರ್ಯಪ್ರವೃತ್ತವಾಗಲಿ .
ಟರ್ಮಿನಲ್ ವಿನ್ಯಾಸ ಬದಲಿಸಿ : ನಿರ್ಮಾಣವಾಗಲಿರುವ ವಿಮಾನ ನಿಲ್ದಾಣದ ಟರ್ಮಿನಲ್ ವಿನ್ಯಾಸ ನೀಲಿ ನಕ್ಷೆ ಅನ್ವಯ ಕಮಲದ ಆಕಾರದಲ್ಲಿದೆ , ಕಮಲದ ಗುರುತು ಬಿಜೆಪಿ ಪಕ್ಷದ ಚಿಹ್ನೆ ಆಗಿದ್ದು ರಾಜಕೀಯ ಪಕ್ಷದ ಚಿಹ್ನೆ ಪ್ರಚಾರಕ್ಕೆ ಸಾರ್ವಜನಿಕ ಹಣ ಮತ್ತು ಜಾಗ ಬಳಕೆ ಮಾಡುವುದು ಸರಿಯಲ್ಲ .ಈ ವಿನ್ಯಾಸದ ನಿರ್ಮಾಣವನ್ನು ಕೂಡಲೇ ನಿಲ್ಲಿಸಬೇಕು ಹಾಗೂ ಇದನ್ನು ಬದಲಿಸಬೇಕು .ಉತ್ತರ ಪ್ರದೇಶದ ಮಾಯಾವತಿ ಮುಖ್ಯಮಂತ್ರಿಯಾಗಿದ್ದಾಗ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಬಿ.ಎಸ್ .ಪಿ ಪಕ್ಷದ ಚಿಹ್ನೆಯಾಗಿದ್ದು ಆನೆಗಳ ಪ್ರತಿಮೆಗಳನ್ನು ನಿರ್ಮಿಸಲಾಗಿತ್ತು . ಇದನ್ನು ವಿರೋಧಿಸಿ ಕಾಮನ್ ಕಾಸ್ ಎಂಬ ಸಂಸ್ಥೆ ನ್ಯಾಯಾಲಯದ ಮೊರೆ ಹೋಗಿತ್ತು ಈ ಬಗ್ಗೆ ದೆಹಲಿ ಹೈಕೋರ್ಟ್ 07-07-2016 ರಂದು ನೀಡಿದ ತೀರ್ಪಿನಲ್ಲಿ ರಾಜಕೀಯ ಪಕ್ಷದ ಚಿಹ್ನೆ ಪ್ರಚಾರಕ್ಕೆ ತೆರಿಗೆದಾರರ ಹಣವನ್ನು ಬಳಸುವಂತಿಲ್ಲ ಎಂದು ತಿಳಿಸಿದೆ .ಅಲ್ಲದೆ ಚುನಾವಣೆ ಆಯೋಗವು 08-10-2016 ರಂದು ಸಾರ್ವಜನಿಕ ಹಣ ಮತ್ತು ಜಾಗವನ್ನು ಬಳಸಿಕೊಂಡು ರಾಜಕೀಯ ಪಕ್ಷ ಅಥವಾ ಅದರ ಚಿಹ್ನೆಗೆ ಪ್ರಚಾರ ನೀಡಿದರೆ ಅದು ಪಾರದರ್ಶಕ ಚುನಾವಣೆಗೆ ವಿರುದ್ಧವಾದದ್ದು , 1968 ರ ಚುನಾವಣೆ ಚಿಹ್ನೆ ಆದೇಶದ ಪ್ಯಾರಾ 16 ರ ನಿಯಮಾವಳಿ ಉಲ್ಲಂಘನೆ ಮಾಡಿದರೆ ಆ ಪಕ್ಷ ತನ್ನ ಚುನಾವಣೆ ಚಿಹ್ನೆ ಕಳೆದುಕೊಳ್ಳಲಿದೆ . ಆದುದರಿಂದ ಈ ಕೂಡಲೇ ವಿಮಾನ ನಿಲ್ದಾಣವನ್ನು ಕಮಲದ ವಿನ್ಯಾಸದ ನಿರ್ಮಾಣ ಮಾಡುವುದನ್ನು ನಿಲ್ಲಿಸಬೇಕು ನೀಲ ನಕ್ಷೆಯಂತೆ ಟರ್ಮಿನಲ್ ನ ನಿರ್ಮಿಸಿದ್ದಲ್ಲಿ ಪಕ್ಷವು ಕಮಲದ ಚಿಹ್ನೆ ಕಳೆದುಕೊಳ್ಳಬೇಕಾಗುತ್ತದೆ .ನಮ್ಮ ಪಕ್ಷದ ಜಿಲ್ಲಾ ನಾಯಕರುಗಳು ಈ ಸಂಗತಿಯನ್ನು ಕೆ.ಪಿ.ಸಿ.ಸಿ ಅಧ್ಯಕ್ಷರಾದ ಶ್ರೀ. ಡಿ. ಕೆ ಶಿವಕುಮಾರ್ ರವರ ಗಮನಕ್ಕೆ ತಂದಿದ್ದು ಮುಂಬರುವ ದಿನಗಳಲ್ಲಿ ಅವರ ನೇತೃತ್ವದಲ್ಲಿ ಹೋರಾಟ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಆರ್ ಮೋಹನ್ , ಜಿಲ್ಲಾ ಉಪಾಧ್ಯಕ್ಷ ಕಿರಣ್ ಗೌಡ ಆನವೇರಿ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣೇಶ್ ಉಪಸ್ಥಿತರಿದ್ದರು .
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ
CCTV SALES & SERVICE
9880074684
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153