ಶಿವಮೊಗ್ಗದ ಮಲವಗೊಪ್ಪ ಗ್ರಾಮದಲ್ಲಿ ನಿನ್ನೆ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಗೌರಮ್ಮ ಎಂಬ ಮಹಿಳೆಯ ಮನೆ ಗೋಡೆ ಬಿದ್ದು ಸಾವನ್ನಪ್ಪಿದರು.
ಇಂದು ಸ್ಥಳಕ್ಕೆ ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿ. ಅಶೋಕ ನಾಯ್ಕ ರವರು ತಹಶಿಲ್ದಾರ್ ನಾಗರಾಜ್ ರವರೊಂದಿಗೆ ಭೇಟಿ ನೀಡಿ 5 ಲಕ್ಷದ ಪರಿಹಾರದ ಮೊತ್ತದ ಮಂಜೂರಾತಿ ಪತ್ರವನ್ನು ಸ್ಥಳದಲ್ಲೇ ಸಂಭಂದಪಟ್ಟವರಿಗೆ ವಿತರಿಸಿದರು.
ಮನೆ ಸಂಪೂರ್ಣ ಹಾನಿಗೊಂಡಿದ್ದು ಸರ್ಕಾರದಿಂದ ದೊರೆಯುವ ಸೂಕ್ತ ಪರಿಹಾರವನ್ನು ಆದಷ್ಟೂ ಬೇಗ ವಿತರಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.