ಆತ್ಮ ವಿಶ್ವಾಶಸದಿಂದ ಎಂತಹ ಕಾಯಿಲೆಗಳನ್ನು ಹಾಗೂ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಡಾ. ಧನಂಜಯ್ ಸರ್ಜಿ ಅವರು ಇಂದು ಬೆಳಿಗ್ಗೆ ರೋಟರಿ ಕ್ಲಬ್ ಶಿವಮೊಗ್ಗ ಮಿಡ್‌ಟೌನ್ ವತಿಯಿಂದ ಶಿಕ್ಷಕರಿಗೆ ಹಾಗೂ ಪೊಷಕರಿಗೆ ಹಮ್ಮಿಕೊಳ್ಳಲಾದ ಕಲಿಕಾ ನ್ಯೂನತೆಯ ಬಗ್ಗೆ ಎರಡು ದಿನಗಳ ಕಾಲ ರೋಟರಿ ರಕ್ತನಿಧಿ ಸಭಾಂಗಣದಲ್ಲಿ ಏರ್ಪಡಿಸಲಾದ ಕಲಿಕಾ ನ್ಯೂನತೆಯ ಕಲಿಕಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಕಲಿಕಾ ನ್ಯೂನತೆಯೆನ್ನುವುದು ದೊಡ್ಡ ಜ್ವಲಂತ ಸಮಸ್ಯೆಯಾಗಿದೆ. ಅನೇಕ ಶಾಲೆಗೆ ಹೋಗುವ ಮಕ್ಕಳು ಇದನ್ನು ಒಂದಲ್ಲಾ ಒಂದು ರೀತಿಯಲ್ಲಿ ಎದುರಿಸುತ್ತಿದ್ದಾರೆ. ಇದು ಯಾವುದೇ ಬಾಲ್ಯದ ಬೆಳವಣಿಗೆಯ ಅಸಾಮರ್ಥ್ಯ ಅಥವಾ ಅನಾರೋಗ್ಯದಿಂದಲೂ ಉಂಟಾಗಬಹುದು. ಕೋವಿಡ್ ನಂತರ ಪರಿಸ್ಥಿತಿಯು ಈ ತೊಂದರೆಗಳನ್ನು ದೊಡ್ಡಮಟ್ಟದಲ್ಲಿ ನೋಡಬಹುದು. ಇಂತಹ ಮಕ್ಕಳನ್ನು ಸರಿಯಾಗಿ ಗುರುತಿಸಿ ಸಮಾಜದ ಮುಖ್ಯ ವಾಹಿನಿಗೆ ತರಬಹುದು ಎಂದು ಮಕ್ಕಳ ವೈದ್ಯರಾದ ಡಾ. ಧನಂಜಯ್ ಸರ್ಜಿಯವರು ನುಡಿದರು. ಇದೇ ಸಂದರ್ಭದಲ್ಲಿ ಕಲಿಕಾ ನ್ಯೂನತೆಯ ಹೈದ್ರಬಾದ್‌ನ ಪೂಜಜ ನಾಯರ್‌ರವರು ಮಾತನಾಡುತ್ತಾ ನಮ್ಮ ಸಮಾಜದಲ್ಲಿ ಈ ಮಕ್ಕಳನ್ನು ಸ್ವತಂತ್ರವಾಗಿ ಮತ್ತು ಈ ಸಮಾಜದಲ್ಲಿ ಉತ್ತಮವಾಗಿ ನೆಲೆಸಲು ನಾವು ಈಗಾಗಲೇ ಹೆಚ್ಚು ಗಮನ ಹರಿಸಿ ಹೈದ್ರಬಾದ್‌ನಲ್ಲಿ ಕಲಿಕಾ ನ್ಯೂನತೆಯ ಕೇಂದ್ರಗಳನ್ನು ಪ್ರಾರಂಭಿಸಿ ಸಾವಿರಾರು ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತಂದಿರುತ್ತೇವೆ. ಇಂತಹ ಮಕ್ಕಳ ಬೌಧಿಕವಾಗಿ ಅಂಗವಿಕಲರಲ್ಲ ನಾವು ಅವರನ್ನು ಸೋಲಿನ ಬಲೆಗೆ ಬೀಳದಂತೆ ನಕರಾತ್ಮಕ ಭಾವನೆಗಳನ್ನು ತುಂಬದAತೆ ಅವರನ್ನು ಸರಿಯಾದ ದಾರಿಯಲ್ಲಿ ಮಾರ್ಗದರ್ಶನ ನೀಡಿ ರಕ್ಷಿಸಬೇಕು ಎಂದು ನುಡಿದರು.

ಈ ಸಂದರ್ಭದಲ್ಲಿ ಮತ್ತೋರ್ವ ಕಲಿಕಾ ನ್ಯೂನತೆಯ ಸಂಪನ್ಮೂಲ ವ್ಯಕ್ತಿಗಳಾದ ಸುಮ ಸಿಂಗ್‌ರವರು ಮಾತನಾಡುತ್ತಾ ಕಲಿಕಾ ನ್ಯೂನತೆ ಒಂದು ಶಾಪವಲ್ಲ ಪರಿಹರಿಸಿಕೊಳ್ಳಬಹುದಾದ ಸಮಸ್ಯೆ ಇದಕ್ಕೆ ಪೋಷಕರು, ಶಿಕ್ಷಕರು ತಾಳ್ಮೆಯಿಂದ ವರ್ತಿಸಿ ಅವರ ಸಮಸ್ಯೆಗಳನ್ನು ಅರಿತು ಸೂಕ್ತ ಮಾರ್ಗದರ್ಶನ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ನುಡಿದರು. ಈದೇ ಸಂದರ್ಭದಲ್ಲಿ ಸುನಿತಾ ಶ್ರೀಧರ್‌ರವರು ಮಾತನಾಡುತ್ತಾ ಕಲಿಕಾ ನ್ಯೂನತೆ ನಮ್ಮ ರೋಟರಿಯ ಜಿಲ್ಲಾ ಯೋಜನೆಯಾಗಿದ್ದು ಇದಕ್ಕಾಗಿ ರೋಟರಿ ಎಲ್ಲಾ ಕ್ಲಬ್‌ಗಳಲ್ಲಿ ಇಂತಹ ಬಹಳ ಉಪಯುಕ್ತವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇವೆ, ಅವರ ಲಕ್ಷಣಗಳಿಂದ ಗುರುತಿಸಿ ಸೂಕ್ತ ತರಬೇತಿ ನೀಡಿದರೆ ಅವರು ಬೇರೆ ಮಕ್ಕಳಂತೆ ಬೆಳೆಯುತ್ತಾರೆ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆನ್ನು ರೋಟರಿ ಮಿಡ್‌ಟೌನ್ ಅಧ್ಯಕ್ಷರಾದ ವೀಣಾಸುರೇಶ್‌ರವರು ವಹಿಸಿ ಕಲಿಕಾ ನ್ಯೂನತೆಯಿಂದ ಜಿಲ್ಲೆಗಳಲ್ಲಿ ಹಾಗೂ ರಾಜ್ಯದಲ್ಲಿ ಸಾಕಷ್ಟು ಮಕ್ಕಳು ನರಳುತ್ತಿದ್ದಾರೆ ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲು ನಮ್ಮ ರೋಟರಿ ಮಿಡ್‌ಟೌನ್‌ವತಿಯಿಂದ ವಿನೋಬನಗರದಲ್ಲಿ ಕಲಿಕಾ ನ್ಯೂನತೆಯ ಕೇಂದ್ರವನ್ನು ಶೀಘ್ರವೇ ಪ್ರಾರಂಭಿಸಿಸುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಕಲಿಕಾ ನ್ಯೂನತೆಯಿಂದ ಸ್ವಂತAತ್ರರಾಗಿಸಲು ವೈಜ್ಞಾನಿಕ ಮತ್ತು ಭಾವೋದ್ರಿಕ್ತ ರೀತಿಯಲ್ಲಿ ಸರಿಯಾದ ಸಹಾಯವನ್ನು ನೀಡಲು ನಾವೆಲ್ಲರೂ ಒಂದಾಗಿ ಕೆಲಸ ಮಾಡಬೇಕೆಂದು ನುಡಿದರು. ಈ ಶಿಬಿರದಲ್ಲಿ ಕಾರ್ಯದರ್ಶಿ ಮೀರಾ ನಾಡಿಗ್, ರೋಟರಿ ಜಿಲ್ಲೆ ಸಾಕ್ಷರತ ಸಮಿತಿಯ ವೈಸ್ ಛರ‍್ಮನ್ ಜಿ.ವಿಜಯಕುಮಾರ್, ಗಿರಿಜಾ ರವೀಂದ್ರ, ಸ್ವರ್ಣ ಮುರಳಿ, ಸುನಿತಾ ಚೇತನ್, ಉಮಾ ಅಮರ್, ವಿದ್ಯಾಮಂಜುನಾಥ್, ವಿದ್ಯಾಮಲ್ಲಿಕಾರ್ಜುನ್, ಅನಿಲ್ ಪಿ ಶೆಟ್ಟಿ, ಸಂತೋಷ್, ಹೆಚ್.ಎನ್.ಎಸ್.ರಾವ್ ಹಾಗೂ ವಿವಿಧ ರೋಟರಿ ಕ್ಲಬ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…