ಶಿವಮೊಗ್ಗ ನಗರದ “ವೀರಶೈವ-ಲಿ೦ಗಾಯತ” ಸಮುದಾಯದ ಪ್ರತಿಷ್ಠಿತ ಸೇವಾ ಸಂಸ್ಥೆಯಾದ “ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘ(ರಿ.)ದ” 2022-2025ನೇ ಸಾಲಿನ ಆಡಳಿತ ಮಂಡಳಿಯ ಅಧ್ಯಕ್ಷೀಯ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಎ.ಪಿ.ಎಂ.ಸಿ ಹಾಗೂ ಸೂಡಾದ ನಿಕಟ ಪೂರ್ವ ಅಧ್ಯಕ್ಷರು ಮತ್ತು ಸಮಾಜದ ಮುಖಂಡರಾದ ಶ್ರೀ ಎಸ್.ಎಸ್. ಜ್ಯೋತಿಪ್ರಕಾಶ್ ಅವರು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಅಭೂತಪೂರ್ವ ದಿಗ್ವಿಜಯ ದಾಖಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ, ಸಮುದಾಯದ ಎಲ್ಲಾ ಒಳ ಪಂಗಡಗಳ ಏಳಿಗೆಗಾಗಿ ಬರುವ ದಿನಗಳಲ್ಲಿ ಅವಿರತವಾಗಿ ಶ್ರಮಿಸುವ ಭರವಸೆ ನೀಡಿದರು. ನಗರ ಮಟ್ಟದಲ್ಲಿ ಸಮಾಜದ ಸಂಘಟನೆಯನ್ನು ಇನ್ನಷ್ಟು ಬಲಪಡಿಸಲು ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಜೊತೆ ಜೊತೆಗೆ ಚುನಾವಣೆ ಸಮಯದಲ್ಲಿ ನೀಡಿದ ಆಶ್ವಾಸನೆಯನ್ನು ಯಥಾವತ್ ಜಾರಿಗೆ ತರಲು ಯೋಜನೆ ರೂಪಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆಯಲ್ಲಿ ಸಂಘದ ಉಪಾಧ್ಯಕ್ಷರಾಗಿ ಶ್ರೀಮತಿ ಶಾಂತ ಆನಂದ್ ಅವರು, ಕಾರ್ಯದರ್ಶಿಯಾಗಿ ಶ್ರೀ ಎಸ್.ಪಿ. ದಿನೇಶ್ ಅವರು, ಸಹ ಕಾರ್ಯದರ್ಶಿಯಾಗಿ ಶ್ರೀ ಸಂತೋಷ್ ಅವರು, ಖಜಾಂಚಿಯಾಗಿ ಶ್ರೀ ತಾರಾನಾಥ್ ಅವರು ಆಡಳಿತ ಮಂಡಳಿಯ ಇನ್ನುಳಿದ ಪ್ರಮುಖ ಸ್ಥಾನಗಳಿಗೆ ಆಯ್ಕೆಗೊಂಡರು.
ಇನ್ನುಳಿದಂತೆ ಶ್ರೀ ರಾಜಶೇಖರ್, ಶ್ರೀಮತಿ ಅನಿತಾ ರವಿಶಂಕರ್ , ಶ್ರೀಮತಿ ರತ್ನ ಅವರು, ಶ್ರೀ ಮಹೇಶ್ ಮೂರ್ತಿ , ಶ್ರೀ ಜಗದೀಶ್ , ಶ್ರೀ ಮಹಾಲಿಂಗ ಶಾಸ್ತ್ರಿ , ಶ್ರೀ ರೇಣುಕಾರಾಧ್ಯ , ಶ್ರೀ ರುದ್ರೇಶ್ , ಶ್ರೀ ಮೋಹನ್ ಹಾಗೂ ಶ್ರೀ ಪ್ರಕಾಶ್ ಆಡಳಿತ ಮಂಡಳಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.