ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ “ಡಿಜಿಟಲ್ ಪ್ರಪಂಚದ ಅನುಕೂಲಗಳು, ಅಪರಾಧಗಳು ಮತ್ತು ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳು” ಎಂಬ ವಿಷಯಗಳ ಬಗ್ಗೆ ಮಾಹಿತಿ ಮತ್ತು ಅರಿವು ಕಾರ್ಯಾಗಾರವನ್ನು ಅಧ್ಯಕ್ಷರಾದ ಎನ್. ಗೋಪಿನಾಥ್ ಉದ್ಘಾಟಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಖ್ಯಾತಿಯ ಹಾಗೂ ಸೈಬರ್ ಸೆಕ್ಯೂರಿಟಿ ಮತ್ತು ಫೊರನ್ಸಿಕ್ ಅನುಭವಿ ಮಾಹಿತಿ ತಜ್ಞರಾದ ಡಾ. ಕೆ.ಟಿ. ವೀರಮಂಜು, ಒ.ಇ(IIS)Phಆ, ನಿವೃತ್ತ ಪ್ರ‍್ರಾಧ್ಯಾಪಕರು, ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿAಗ್ ಕಾಲೇಜು, ಮೈಸೂರು ರವರು ಮಾತನಾಡುತ್ತಾ ಇಂದಿನ ಡಿಜಟಲೀಕರಣದಿಂದ ಅನುಕೂಲಗಳು ಹೆಚ್ಚಾದಂತೆ, ಮಾಹಿತಿ ತಂತ್ರಜ್ಙಾನದಿAದ ಅಪರಾಧ ಹೇಗೆ ಮಾಡುವುದು ಎನ್ನುವುದು ಹೆಚ್ಚಾಗಿದೆ. ಒಂದು ಅಪರಾದ ಮಾಡುವುದು ಅಥವಾ ಮುಚ್ಚಲು ಮಾಹಿತಿ ತಂತ್ರಜ್ಞಾನವನ್ನು ಬಳಸಿದಾಗ ಸೈಬರ್-ಕ್ರೆöÊಂ ಸಂಭವಿಸುತ್ತದೆ ಎಂದು ಪ್ರತ್ಯಕ್ಷಿತೆ ಮೂಲಕ ಉಪನ್ಯಾಸ ನಡೆಸಿಕೊಟ್ಟರು. ಇದು ನಗರ ಪ್ರದೇಶಗಳಲ್ಲಿ ಹೆಚ್ಚು ಅದರಲ್ಲೂ ದೇಶದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿದಲ್ಲಿ ನಮಗೆ ರಕ್ಷಣೆ, ನೆಮ್ಮದಿ ಸಾದ್ಯ ಎಂದು ನುಡಿದರು. ೪೪ ವರ್ಷದ ನಂತರ ನಾನು ಹುಟ್ಟಿದ ಊರಿಗೆ ಬಂದು ನನಗೆ ತಿಳಿದಿರುವ ಮಾಹಿತಿ ನಿಮಗೆ ನೀಡುವ ಅವಕಾಶ ಸಿಕ್ಕಿದ್ದಕ್ಕೆ ಸಂಘದ ಆಡಳಿತ ಮಂಡಳಿ ಎಲ್ಲಾ ನಿರ್ದೇಶಕರುಗಳಿಗೆ ಧನ್ಯವಾದಗಳನ್ನು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಎನ್. ಗೋಪಿನಾಥ್‌ರವರು ವಹಿಸಿ ಮಾತನಾಡುತ್ತಾ ೨೦ ವರ್ಷಗಳ ಹಿಂದಿನ ಜೀವನಕ್ಕೂ ಇಂದಿಗೂ ಬಹಳ ಬದಲಾವಣೆಯಾಗಿದೆ ದೇಶ ಗ್ಲೋಬಲೈಜೆಷನ್, ಪ್ರೆöÊವೇಟೈಜೆಷನ್, ಡಿಜಿಟಲೈಜೆಷನ್ ಕಡೆ ಮುಂದುವರೆದಿದ್ದು ಇಂದಿನ ಜೀವನೋಪಾಯದಲ್ಲಿ ಡಿಜಿಟಲ್ ವ್ಯವಸ್ಥೆಯನ್ನು ಅಳವಡಿಸಿಕೊಂಡು ಮುಂದುವರೆಯುವ ಅನಿವಾರ್ಯತೆ ಇದ್ದು, ಅನುಕೂಲಗಳು ಜಾಸ್ತಿಯಾದಂತೆ, ನಷ್ಟಗಳು, ಅಪರಾಧಗಳಿಂದ ಮುಕ್ತರಾಗಲು ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಇದರ ಸದುಪಯೋಗವನ್ನು ಪಡೆದುಕೊಳ್ಳುವ ಉದ್ದೇಶದಿಂದ ಸಂಘವು ಸದಸ್ಯರಿಗೆ ಅನುಕೂಲ ಮಾಹಿತಿ ಒದಗಿಸಲು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉಪಾಧ್ಯಕ಼ರಾದ ಬಿ.ಗೋಪಿನಾಥ್ ಸ್ವಾಗತಿಸಿ, ಕೈಗಾರಿಕಾಭಿವೃದ್ದಿ ಸಮಿತಿ ಛರ‍್ಮನ್ ಎಂ. ರಾಜು, ಪ್ರಸ್ತಾವನೆ ಮತ್ತು ಪರಿಚಯ ನುಡಿ ನುಡಿದರು, ಕಾರ್ಯಕ್ರಮ ಅಭಿವೃದ್ದಿ ಸಮಿತಿ ಛರ‍್ಮನ್‌ರಾದ ಬಿ.ಆರ್ ಸಂತೋಷ್ ಕಾರ್ಯಕ್ರಮವನ್ನು ನಿರೂಪಿಸಿದರು. ಜಂಟಿ-ಕಾರ್ಯದರ್ಶಿ ಜಿ. ವಿಜಯಕುಮಾರ್, ನಿಕಟಪೂರ್ವ ಅಧ್ಯಕ್ಷರಾದ ಜೆ.ಆರ್. ವಾಸುದೇವ, ಮಾಜಿ ಅಧ್ಯಕ್ಷರಾದ ಎ.ಆರ್.ಅಶ್ವತ್‌ನಾರಾಯಣ ಶೆಟ್ಟಿ, ನಿರ್ದೇಶಕರುಗಳಾದ ಎಸ್,ಎಸ್, ಉದಯಕುಮಾರ್, ಇ.ಪರಮೇಶ್ವರ, ಪ್ರದೀಪ್ ವಿ.ಯಲಿ, ಗಣೇಶ್ ಎಂ. ಅಂಗಡಿ ಎಲ್ಲಾ ಸಂಯೋಜಿತ ಸಂಘಗಳ ಪದಾಧಿಕಾರಿಗಳು ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…