ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಶನ್ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಸಿಂಥೆಟಿಕ್ ನೆಪವನ್ನು ಒಡ್ಡಿ ನೆಹರೂ ಒಳಾಂಗಣ ಕ್ರೀಡಾಂಗಣವನ್ನು ಇಲಾಖಾ ಕ್ರೀಡಾ ಚಟುವಟಿಕೆಗಳಿಗೆ ನೀಡಲು ನಿರಾಕರಿಸುತ್ತಿರುವ ಕ್ರೀಡಾಧಿಕಾರಿಯ ಧೋರಣೆ ಯನ್ನು ಖಂಡಿಸಿ ನೆಹರೂ ಒಳಾಂಗಣ ಕ್ರೀಡಾಂಗಣವನ್ನು ಎಲ್ಲ ಕ್ರೀಡಾ ಚಟುವಟಿಕೆಗಳಿಗೆ ನೀಡಲು ಮನವಿ ಮಾಡಿದರು.

ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಸ್ಮಾರ್ಟ್ ಸಿಟಿ ಅಡಿಯಲ್ಲಿ 4ಶಟಲ್ ಕೋರ್ಟ್ ಗಳಿಗೆ ಸಿಂಥೆಟಿಕ ಹಾಕಲಾಗುತ್ತಿದೆ ಎಂಬ ಒಂದು ಚಿಕ್ಕ ವಿಷಯವನ್ನೇ ನೆಪವಾಗಿಟ್ಟುಕೊಂಡು ಕ್ರೀಡಾಧಿಕಾರಿ ಬಹು ಬಳಕೆಗಾಗಿ ಸ್ಥಾಪಿಸಲ್ಪಟ್ಟ ನೆಹರು ಒಳಾಂಗಣ ಕ್ರೀಡಾಂಗಣವನ್ನು ಈಗ ಇತರೆ ಕ್ರೀಡಾಕೂಟಗಳಿಗೆ ಕೊಡುವುದಿಲ್ಲ ಎನ್ನುತ್ತಿದ್ದಾರೆ.
ಈ ಧೋರಣೆಯು ನೆಹರೂ ಒಳಾಂಗಣ ಕ್ರೀಡಾಂಗಣವನ್ನು ಕೇವಲ ಶಟಲ್ ಗಾಗಿ ಮಾತ್ರ ಮಾಡಿರುವಂತೆ ಕಾಣುತ್ತಿದೆ ಒಳಾಂಗಣ ಕ್ರೀಡಾಂಗಣದ ಬೈಲಾದಂತೆ ಒಳಾಂಗಣ ಕ್ರೀಡಾಂಗಣವನ್ನು ಬಹು ಬಳಕೆಗಾಗಿ ಸ್ಥಾಪಿಸಲಾಗಿದೆ.ಇದನ್ನು ಮರೆತಿರುವ ಕ್ರೀಡಾಧಿಕಾರಿ ಈಗ ಶಟಲ್ ಕೋರ್ಟ್ ಗಳಿಗೆ ಸಿಂಥೆಟಿಕ್ ಹಾಕಲಾಗುತ್ತಿದ್ದು ಸಿಂಥೆಟಿಕ್ ಹಾಕಿದ ನಂತರ ಇತರ ಕ್ರೀಡಾ ಚಟುವಟಿಕೆಗಳು ನಡೆಸಲು ಆಗುವುದಿಲ್ಲ ಎನ್ನುತ್ತಿದ್ದಾರೆ.

ಇದರಿಂದ ಇದೇ ತಿಂಗಳು ನಡೆಯಲಿರುವ ದಸರಾ ಕ್ರೀಡಾ ಕೂಟಗಳು ಮತ್ತು ಮುಂದಿನ ತಿಂಗಳು ಹಮ್ಮಿಕೊಂಡಿರುವ ಪದವಿಪೂರ್ವ ಶಿಕ್ಷಣ ಇಲಾಖೆಯ ರಾಜ್ಯಮಟ್ಟದ ಕರಾಟೆ ಕ್ರೀಡಾಕೂಟಗಳು ನಡೆಸಲು ಸಾಧ್ಯವಾಗುತ್ತಿಲ್ಲ.
ಶಿವಮೊಗ್ಗದಲ್ಲಿ ಸುಸಜ್ಜಿತವಾದ ಒಳಾಂಗಣ ಕ್ರೀಡಾಂಗಣ ವಿದೆ ಎಂದೆ ಇಲಾಖೆಯ ರಾಜ್ಯಮಟ್ಟದ ಕ್ರೀಡಾಕೂಟ ಸೇರಿದಂತೆ ಬಹುಮುಖ್ಯ ಕ್ರೀಡಾಕೂಟಗಳನ್ನು ಶಿವಮೊಗ್ಗದಲ್ಲಿ ಮೊದಲಿನಿಂದಲೂ ಮಾಡಲಾಗುತ್ತಿದೆ ಈಗ ಕ್ರೀಡಾಧಿಕಾರಿ ಯವರು ಒಳಾಂಗಣ ಕ್ರೀಡಾಂಗಣವನ್ನು ನೀಡಲಾಗುವುದಿಲ್ಲ ಬೇರೆ ಸ್ಥಳಾವಕಾಶವನ್ನು ನೋಡಿಕೊಳ್ಳಿ ಎನ್ನುತ್ತಿದ್ದಾರೆ ಇಲಾಖೆಯ ಕ್ರೀಡಾಕೂಟಗಳನ್ನು ನಡೆಸಲು ಇಲಾಖೆ ಕೊಡುವ ಹಣ ಕಡಿಮೆ ಎಂದರು.

ಈ ಹಣದಲ್ಲಿ ಕ್ರೀಡಾಕೂಟಗಳನ್ನು ನಡೆಸಲು ಸಾಧ್ಯವಾಗದೆ ಹೆಚ್ಚಿನ ಹೊರೆಯನ್ನು ಅಸೋಸಿಯೇಶನ್ ಗಳು ಹೋರುತ್ತಾ ಬಂದಿದೆ ಈಗ ಒಳಾಂಗಣ ಕ್ರೀಡಾಂಗಣವು ಇಲ್ಲವಾದಲ್ಲಿ ಖಾಸಗಿ ಕಲ್ಯಾಣ ಮಂದಿರಗಳಲ್ಲಿ ಕ್ರೀಡಾಕೂಟಗಳನ್ನು ನಡೆಸಲು ಇಲಾಖೆ ಕೊಡುವ ಹಣಕ್ಕಿಂತ 4 ಪಟ್ಟು ಅಧಿಕವಾಗುವುದರ ಜೊತೆಗೆ ಸ್ಥಳಾವಕಾಶದ ಕೊರತೆಯಾಗುತ್ತದೆ ಹೀಗಿರುವಾಗ ಸರ್ಕಾರಿ ಕ್ರೀಡಾಂಗಣದಲ್ಲಿ ಸರ್ಕಾರಿ ಚಟುವಟಿಕೆಗಳನ್ನು ನಡೆಸಲು ನಿರ್ಬಂಧವಾದರೆ ಸರ್ಕಾರಿ ಕಟ್ಟಡಗಳನ್ನು ನಿರ್ಮಿಸಿರುವ ಉದ್ದೇಶವಾದರೂ ಏನು ಪ್ರಸ್ತುತ ಕ್ರೀಡಾಧಿಕಾರಿ ನೀಡುತ್ತಿರುವ ಧೋರಣೆ ಏನೆಂದರೆ ಶಟಲ್ ಕೋರ್ಟ್ ನಲ್ಲಿ ಸಿಂಥೆಟಿಕ ಅನ್ನು ಹಾಕಲಾಗುತ್ತಿದೆ ಎಂದು ಸಿಂಥೆಟಿಕ್ 1 ಅಥವಾ 2 ಇಂಚಿನಷ್ಟು ಮಾತ್ರವಿರುತ್ತದೆ ಅದೇನು ದೊಡ್ಡ ತಡೆಗೋಡೆ ಅಲ್ಲ ಅದರ ಮೇಲೆ ಮ್ಯಾಟ್ ಅನ್ನು ಹಾಕಿ ಕ್ರೀಡಾಕೂಟವನ್ನು ಸುಲಭವಾಗಿ ನಡೆಸಬಹುದು ಇದರಿಂದ ಸಿಂಥೆಟಿಕ್ಗೂ ಹಾನಿಯಾಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಿಟಿ ಕರಾಟೆ ಅಸೋಸಿಯೇಶನ್ ಅಧ್ಯಕ್ಷ ಶಿವಮೊಗ್ಗ ವಿನೋದ್ ಮತ್ತು ಪದಾಧಿಕಾರಿಗಳಾದ ಆರ್ ರಾಘವೇಂದ್ರ ವೆಂಕಟೇಶ ಹರ್ಷಿತ್ ಸಾಗರ್ ಪ್ರಜ್ವಲ್ ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…