ಶಿವಮೊಗ್ಗ: ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಜೆಸಿಐ ಸಂಸ್ಥೆ ಅಪಾರ ಸೇವೆಯನ್ನು ಸಲ್ಲಿಸುತ್ತಿದ್ದು, ವಿಶ್ವಾದ್ಯಂತ ಸೇವಾ ಚಟುವಟಿಕೆಗಳನ್ನು ವಿಸ್ತರಿಸುತ್ತಿದೆ ಎಂದು ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷ ಸತೀಶ್‌ಚಂದ್ರ ಹೇಳಿದರು.
ಶಿವಮೊಗ್ಗ ನಗರದ ಗುಡ್‌ಲಕ್ ಆರೈಕೆ ಕೇಂದ್ರದಲ್ಲಿ ಜೆಸಿಯ ಸಪ್ತಾಹ ಪ್ರಯುಕ್ತ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ವತಿಯಿಂದ ಆಹಾರ ಸಾಮಾಗ್ರಿ ಮತ್ತು ಆಹಾರ ವಿತರಿಸಿ ಮಾತನಾಡಿ, ಸೆಪ್ಟೆಂಬರ್ ತಿಂಗಳಲ್ಲಿ ವಿಶ್ವದ ಎಲ್ಲ ಭಾಗಗಳಲ್ಲಿಯು ಜೆಸಿ ಸಪ್ತಾಹ ನಡೆಸುತ್ತಿದ್ದು, ಸೇವಾ ಚಟುವಟಿಕೆಗಳನ್ನು ಎಲ್ಲೆಡೆಯು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಗುಡ್‌ಲಕ್ ಆರೈಕೆ ಕೇಂದ್ರದ ಕಾರ್ಯದರ್ಶಿ, ನಿವೃತ್ತ ಪೊಲೀಸ್ ಅಧಿಕಾರಿ ಪಂಚಾಕ್ಷರಿ ಹಿರೇಮಠ ಮಾತನಾಡಿ, ಸಂಸ್ಥೆಯಲ್ಲಿ ಸೇವೆ ಮಾಡುವ ಅವಕಾಶ ನೀಡಿದ್ದು ದೇವರು ನೀಡಿದ ಪುಣ್ಯ. ಸದಾ ಸೇವೆ ಮಾಡುತ್ತ ಮುನ್ನಡೆಯುತ್ತೇನೆ ಎಂದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್ ಮಾತನಾಡಿ, ಅಗತ್ಯವಿರುವವರಿಗೆ ಸಹಾಯ ಹಸ್ತ ನೀಡಬೇಕಿರುವುದು ಎಲ್ಲರ ಕರ್ತವ್ಯ. ಹಿರಿಯರ, ವೃದ್ಧರ ಸೇವೆ ಮಾಡುವುದು ದೇವರ ಪೂಜೆ ಮಾಡಿದಂತೆ. ಗುಡ್‌ಲಕ್ ಆರೈಕೆ ಕೇಂದ್ರದ ಸಮಾಜಮುಖಿ ಸೇವೆ ಅಭಿನಂದನೀಯ ಎಂದು ಹೇಳಿದರು.

ಗುಡ್‌ಲಕ್ ಆರೈಕೆ ಕೇಂದ್ರ ಅಶಕ್ತರು, ಹಿರಿಯ ನಾಗರೀಕರು, ಅಂಗವಿಕಲರು ಎಲ್ಲರನ್ನು ಸತೀಶ್ ಚಂದ್ರ ಅವರು ಪ್ರೀತಿಯಿಂದ ಸತ್ಕರಿಸಿ ಅನ್ನಪೂಣೇಶ್ವರಿ ನಿತ್ಯ ಪ್ರಸಾದ ನಿಧಿಗೆ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ವತಿಯಿಂದ ನಿಧಿ ಸಮರ್ಪಿಸಿದರು.
ಜೆಸಿ ವಲಯ ನಿರ್ದೇಶಕ ಅನೂಷ್‌ಗೌಡ, ಕಿಶೋರ್‌ಕುಮಾರ್, ಪೂರ್ವ ವಲಯ ಅಧ್ಯಕ್ಷ ಕಾನೂರು ಮಲ್ಲಿಕಾರ್ಜುನ್, ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಮಧುರಾ ಮಹೇಶ್, ಕಾರ್ಯದರ್ಶಿ ಉಮಾ ವೆಂಕಟೇಶ್, ಸುರೇಂದ್ರ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…