ತೋಟಗಾರಿಕಾ ಸಚಿವ ಶ್ರೀ ಮುನಿರತ್ನ, ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ಹಾಗೂ ಬಂದರು ಮತ್ತು ಮೀನುಗಾರಿಕೆ ಸಚಿವ ಶ್ರೀ ಎಸ್ ಅಂಗಾರ ಜಂಟಿ ಪತ್ರಿಕಾ ಗೋಷ್ಠಿ ನಡೆಸಿದರು.
ಮಲೆನಾಡಿನ ಕೆಲವು ಭಾಗ ಗಳಲ್ಲಿ, ರೈತರ ಬೆನ್ನೆಲುಬಾಗಿರುವ, ಅಡಿಕೆ ಬೆಳೆಗೆ, ಎಲೆ ಚುಕ್ಕೆ ರೋಗ ಭಾಧೆ ಕಾಣಿಸಿಕೊಂಡಿದ್ದು, ರೈತ ಸಮುದಾಯದಲ್ಲಿ ಆತಂಕದ ಛಾಯೆ ಮೂಡಿದೆ.
ಈ ಹಿನ್ನೆಲೆಯಲ್ಲಿ, ರಾಜ್ಯ ಅಡಕೆ ಟಾಸ್ಕ್ ಫೋರ್ಸ್ ಅಧ್ಯಕ್ಷರೂ ಆದ, ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ಹಾಗೂ ತೋಟಗಾರಿಕಾ ಸಚಿವ ಶ್ರೀ ಮುನಿರತ್ನ ರವರು, ಇಂದು ತೋಟಗಾರಿಕಾ ಹಿರಿಯ ಅಧಿಕಾರಿಗಳೊಂದಿಗೆ, ಸಭೆ ನಡೆಸಿದರು, ರೋಗ ನಿಯಂತ್ರಣದ ಬಗ್ಗೆ ವಿಸ್ತಾರವಾಗಿ ಚರ್ಚಿಸಿದರು.
ರೋಗ ಬಾಧೆಯಿಂದ ಹಾನಿ ಅನುಭವಿಸಿದ ರೈತರಿಗೆ, ಆರ್ಥಿಕ ಪರಿಹಾರ ಒದಗಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ಎಲೆ ಚುಕ್ಕೆ ರೋಗವನ್ನು ಹತೋಟಿಗೆ ತರುವ ಬಗ್ಗೆ, ರೈತರಿಗೆ, ಉಚಿತವಾಗಿ ಔಷದಿ ಹಾಗೂ ಸುಧಾರಿತ ಧೋಟಿಯನ್ನು ಒದಗಿಸುವ ಬಗ್ಗೆ, ಅಧಿಕಾರಿಗಳಿಗೆ, ನಿರ್ದೇಶನ ನೀಡುವುದಾಗಿ, ಸಚಿವ ಶ್ರಿ ಮುನಿರತ್ನ ತಿಳಿಸಿದರು.
ಎಷ್ಟು ಪ್ರಮಾಣದಲ್ಲಿ ಅಡಕೆ ಬೆಳೆ, ಎಲೇಚುಕ್ಕೆ ರೋಗ ದಿಂದಾಗಿ ಹಾನಿಯಾಗಿದೆ ಎಂಬುದರ ಬಗ್ಗೆ ಸಮೀಕ್ಷಾ ಕಾರ್ಯ ನಡೆಸುವ ಬಗ್ಗೆಯೂ ನಿರ್ಧರಿಸಲಾಯಿತು.
ಎಲೆಚುಕ್ಕೆ ರೋಗ ಬಾಧೆಯ ತೀವ್ರತೆಯ ಬಗ್ಗೆ ಪ್ರಸ್ತಾಪಿಸಿದ, ಗೃಹ ಸಚಿವರು, ತಕ್ಷಣವೇ ರೋಗವನ್ನು ಹತೋಟಿಗೆ ತರಲು ಅನುಕೂಲವಾಗುವಂತೆ, ರೈತರಿಗೆ, ಉಚಿತವಾಗಿ ಔಷದಿ ಹಾಗೂ ಇತರ ಸಹಾಯವನ್ನು ಸರಕಾರದಿಂದ ನೀಡಲಾಗುವುದು, ಎಂದು ಸಚಿವರು ತಿಳಿಸಿದರು.
ಬಂದರು ಹಾಗೂ ಮೀನುಗಾರಿಕಾ ಸಚಿವ ಶ್ರೀ ಎಸ್ ಅಂಗಾರ ಹಾಗೂ, ತೋಟಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಶ್ರೀ ರಾಜೇಂದ್ರ ಕುಮಾರ್ ಕಟಾರಿಯ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.