ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರಪ್ಪರವರು ಪತ್ರಿಕಾಗೋಷ್ಠಿಯನ್ನು ಕರೆದಿದ್ದರು . ಪತ್ರಿಕಾಗೋಷ್ಠಿಯಲ್ಲಿ ಲೋಕಸಭಾ ಸದಸ್ಯರಾದ ಬಿ ವೈ ರಾಘವೇಂದ್ರ , ಶಾಸಕರಾದ ಆರಗ ಜ್ಞಾನೇಂದ್ರ , ಕುಮಾರ್ ಬಂಗಾರಪ್ಪ ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್ , ರುದ್ರೇಗೌಡ ಪ್ರಸನ್ನಕುಮಾರ್ , ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಉಪಸ್ಥಿತರಿದ್ದರು . ಸಭೆಯಲ್ಲಿ 4ದಿನದ ಲಾಕ್ ಡೌನ್ ಆದ ಪರಿಣಾಮಗಳನ್ನು ಚರ್ಚಿಸಲಾಯಿತು . ಈ ಸಂದರ್ಭದಲ್ಲಿ ಎಲ್ಲಾ ವರ್ತಕರ ಸಂಘದವರು ಹಾಜರಿದ್ದರು . ಎಲ್ಲರ ಸಹಕಾರದೊಂದಿಗೆ ಭಾನುವಾರದ ತನಕ ಲಾಕಡೌನ್ ಮುಂದುವರಿಸುವ ನಿರ್ಣಯ ಕೈಗೊಳ್ಳಲಾಯಿತು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಯನೂರು ಮಂಜುನಾಥ್ ರವರು ತುಂಬಾ ಪ್ರಮುಖವಾದ ಸಮಸ್ಯೆ ಒಂದನ್ನು ಸಭೆಯ ಮುಂದಿಟ್ಟರು . ಮೆಗ್ಗಾನ್ ಆಸ್ಪತ್ರೆಯಲ್ಲಿ ಸ್ಟಾಫ್ ಕೊರತೆಯಿಂದಾಗಿ ಪೇಷೆಂಟ್ ಗಳನ್ನು ನೋಡಿಕೊಳ್ಳಲು ಅವರ ಕುಟುಂಬಸ್ಥರಿಗೆ ಅನುವು ಮಾಡಿಕೊಡಲಾಗುತ್ತಿದೆ. ಹಾಗೆ ನೋಡಿಕೊಂಡ ಕೇರ್ ಟೇಕರ್ ಹೊರಗೆ ಬಂದು ಮನೆಗೆ ಹೋಗಿ ಮತ್ತೆ ಬರುತ್ತಾರೆ . ಆಸ್ಪತ್ರೆಯಿಂದ ಹೊರ ಹೋದ ಮೇಲೆ ಅವರು ಎಲ್ಲೆಲ್ಲಿ ತಿರುಗುತ್ತಾರೆ ಹಾಗೂ ಮನೆಯಲ್ಲಿ ಇತರ ಕುಟುಂಬಸ್ಥರಿಗೆ ಸೋಂಕು ತಗಲುವ ಸಾಧ್ಯತೆ ತುಂಬಾ ಹೆಚ್ಚಿದೆ. ಆದ್ದರಿಂದ ಈ ಕೂಡಲೇ ಅಗತ್ಯ ಸ್ಟಾಫ್ ಗಳನ್ನು ತೆಗೆದುಕೊಂಡು ಕುಟುಂಬಸ್ಥರಿಗೆ ಒಳಗೆ ಬಿಡುವ ಪದ್ಧತಿಯನ್ನು ರದ್ದು ಮಾಡಬೇಕು ಎಂದು ಹೇಳಿದರು . ಇದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ ರವರು ನಾನು ಒಬ್ಬ ಜನ ಚುನಾಯಿತ ಪ್ರತಿನಿಧಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಅನುದಾನ ಕೊಡುವ ತನಕ ಕಾಯುವ ಪರಿಸ್ಥಿತಿ ಇಲ್ಲ . ಹಾಗಾಗಿ ಜಿಲ್ಲಾಧಿಕಾರಿಗಳು ಈ ತಕ್ಷಣವೇ ಸ್ಟಾಫ್ ಕೆಲಸಕ್ಕೆ ತೆಗೆದುಕೊಳ್ಳಲು ಶುರು ಮಾಡಿ. ಅದಕ್ಕೆ ಬೇಕಾದ ಹಣದ ವ್ಯವಸ್ಥೆಯನ್ನು ನಮಗೆ ಬಿಡಿ . ಆದರೆ ಈಗ ನಮಗೆ ಜನರ ಆರೋಗ್ಯವೇ ಆದ್ಯತೆ . 2 ಅಥವಾ 3 ದಿನದೊಳಗಾಗಿ ಸ್ಟಾಫ್ ಸಮಸ್ಯೆ ಬಗೆಹರಿಸುವಂತೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತೀರ್ಥಹಳ್ಳಿಯ ಶಾಸಕರಾದ ಆರಗ ಜ್ಞಾನೇಂದ್ರರವರು , ಲಸಿಕಾಕರಣ ದಲ್ಲಿ ತೀರ್ಥಹಳ್ಳಿಗೆ ಮೊದಲ ಆದ್ಯತೆ ನೀಡಿ ಮಳೆಗಾಲ ಶುರುವಾಯಿತೆಂದರೆ ತೀರ್ಥಹಳ್ಳಿಯ ಆಸುಪಾಸಿನ ಜನತೆಗೆ ಓಡಾಡಲು ತುಂಬಾ ಕಷ್ಟವಾಗುತ್ತದೆ ಎಂದು ಎಲ್ಲರ ಗಮನ ಸೆಳೆದರು. ಹಾಗೆಯೇ ಕಳೆದ ವರ್ಷ ಕೋವಿಡ ಬಂದಾಗ ಟಾಸ್ಕ್ ಫೋರ್ಸ್ ಗಳು ಕಾರ್ಯ ನಿರ್ವಹಿಸಿದಂತೆ ಈ ಬಾರಿ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು . ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಈ ತಕ್ಷಣವೇ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು. ಶಿವಮೊಗ್ಗದ ಶವಾಗಾರದಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಜಿಲ್ಲಾಡಳಿತ ನಿಗದಿಪಡಿಸಿದ ದರಕ್ಕಿಂತ ಹೆಚ್ಚಾಗಿ ಶವ ಸಾಗಣೆಗೆ ಪಡೆಯುತ್ತಿದ್ದು. ಗೂಂಡಾಗಿರಿ ಅನುಭವವೂ ಆಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು . ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಈ ಕೂಡಲೇ ಶವಾಗಾರದ ಹತ್ತಿರ ಪೋಲೀಸರನ್ನು ನೇಮಿಸಿ ಸಮಸ್ಯೆಯನ್ನು ಪರಿಹಾರ ಮಾಡುವುದಾಗಿ ಭರವಸೆ ನೀಡಿದರು
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ