ಶಿವಮೊಗ್ಗ: ಶಿಕ್ಷಕರು ಸಮಾಜದ ಸ್ವಾಸ್ಥö್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ವಿದ್ಯಾರ್ಥಿಗಳನ್ನು ಸಂಸ್ಕಾರಯುತ ಪ್ರಜೆಗಳಾಗಿ ರೂಪಿಸುತ್ತಿದ್ದಾರೆ. ಶಿಕ್ಷಕರಿಂದ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಸರ್ಜಿ ಸಮೂಹ ಸಂಸ್ಥೆಯ ಡಾ. ಧನಂಜಯ ಸರ್ಜಿ ಹೇಳಿದರು.

ಶಿವಮೊಗ್ಗ ನಗರದ ಕಾಶಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಹಾಗೂ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಕರು ಮತ್ತು ಸಾರ್ವಜನಿಕರಿಗೆ ಹಮ್ಮಿಕೊಳ್ಳಲಾದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಒತ್ತಡದ ಜೀವನಶೈಲಿಯಲ್ಲಿ ಶಿಕ್ಷಕರು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಲು ಸಾಧ್ಯ ಆಗುತ್ತಿಲ್ಲ. ಎಲ್ಲರೂ ಆರೋಗ್ಯದ ಬಗ್ಗೆ ಪ್ರಾಮುಖ್ಯತೆ ನೀಡಬೇಕು. 40 ವರ್ಷ ಮೇಲ್ಪಟ್ಟು ಎಲ್ಲರೂ ಆರೋಗ್ಯದ ಬಗ್ಗೆ ಕಡ್ಡಾಯವಾಗಿ ತಪಾಸಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಆರೋಗ್ಯ ಶಿಬಿರದಲ್ಲಿ ಭಾಗವಹಿಸಿದ ಎಲ್ಲ ಶಿಕ್ಷಕರಿಗೂ ಸರ್ಜಿ ಆಸ್ಪತ್ರೆ ವತಿಯಿಂದ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಕೊಳ್ಳಲು ವಿಶೇಷ ರೀಯಾಯಿತಿ ನೀಡಲಾಗುವುದು. ಶಿಕ್ಷಕರು ಆರೋಗ್ಯ ಉತ್ತಮವಾಗಿ ಇಟ್ಟುಕೊಳ್ಳಲು ಒತ್ತಡಮುಕ್ತ ಜೀವನಶೈಲಿ ಹಾಗೂ ಗುಣಮಟ್ಟದ ಆಹಾರ ಸೇವನೆ ಪಾಲಿಸಬೇಕು ಎಂದರು.
ರೋಟರಿ ವಲಯ 10ರ ಸಹಾಯಕ ಗವರ್ನರ್ ಸುನೀತಾ ಶ್ರೀಧರ್ ಮಾತನಾಡಿ, ಎಲ್ಲ ಸಂಪತ್ತಿಗಿAತ ಆರೋಗ್ಯ ಸಂಪತ್ತು ಬಹಳ ಮುಖ್ಯ. ಶಿಕ್ಷಕರು ಆರೋಗ್ಯ ಉತ್ತಮ ಕಾಪಾಡಿಕೊಳ್ಳಬೇಕು. ಉತ್ತಮ ಪ್ರಜೆಗಳನ್ನು ರೂಪಿಸುತ್ತಿರುವ ಶಿಕ್ಷಕರ ಕಾರ್ಯ ಅಭಿನಂದನೀಯ ಎಂದು ಹೇಳಿದರು.


ಸಮುದಾಯ ಸೇವೆಗಳ ನಿರ್ದೇಶಕ ಡಾ. ಶ್ರೀನಿವಾಸ್.ಎ.ಸಿ ಮಾತನಾಡಿ, ಶಿಬಿರದ ಸಂಪೂರ್ಣ ಮಾಹಿತಿ ನೀಡಿ ಸದುಪಯೋಗ ಮಾಡಿಕೊಳ್ಳುವಂತೆ ತಿಳಿಸಿದರು. ಆರೋಗ್ಯವೇ ಮುಖ್ಯ. ಆರೋಗ್ಯದ ಬಗ್ಗೆ ಜಾಗೃತಿ ವಹಿಸುವ ಜತೆಯಲ್ಲಿ ಮಕ್ಕಳಿಗೂ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ವತಿಯಿಂದ ರೋಟರಿ ಸದಸ್ಯರ ಸಹಾಯದಿಂದ 20 ಚೇರ್ ಹಾಗೂ ಟೇಬಲ್‌ಗಳನ್ನು ಸರ್ಕಾರಿ ಶಾಲೆಗೆ ನೀಡಲಾಯಿತು.
ನುರಿತ ವೈದ್ಯರ ತಂಡ 30 ಶಾಲೆಗಳಿಂದ ಆಗಮಿಸಿದ್ದ ಶಾಲೆಯ ಶಿಕ್ಷಕರ ಆರೋಗ್ಯ ತಪಾಸಣೆ ನಡೆಸಿತು. ಇಸಿಜಿ, ರಕ್ತ ಪರೀಕ್ಷೆ, ಮಧುಮೇಹ, ಸಾಮಾನ್ಯ ಖಾಯಿಲೆ ಸೇರಿದಂತೆ ವಿವಿಧ ರೀತಿಯ ಆರೋಗ್ಯ ತಪಾಸಣೆ ನಡೆಸಲಾಯಿತು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಶಿಪುರ ಮುಖ್ಯ ಶಿಕ್ಷಕ ಹಾಲಾನಾಯ್ಕ, ರೋಟರಿ ವಲಯ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್, ಕಿಶನ್ ನಾರಾಯಣ, ಸಿ.ರಾಜು, ಮುಸ್ತಾಕ್, ಮಂಜುಳ ರಾಜು, ಚೇತನ್‌ಕುಮಾರ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಜಿ.ರವಿ, ಸರ್ಜಿ ಆಸ್ಪತ್ರೆಯ ಡಾ. ಚಂದುಶ್ರೀ, ಶೂನ್ಯ ಸಂಪದ್ ಮತ್ತಿತರರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…