ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ರಂಗ ದಸರಾ ಮತ್ತು ರಾಜ್ಯ ಮಟ್ಟದ ಹಾಸ್ಯ ನಾಟಕ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.ಸ್ಪರ್ಧೆಯಲ್ಲಿ ಗೆದ್ದ ತಂಡಕ್ಕೆ 30 ಸಾವಿರ ನಗದು ಪುರಸ್ಕಾರ ಶಿವಮೊಗ್ಗ ಮಹಾ ನಗರ ಪಾಲಿಕೆ ವತಿಯಿಂದ ಶಿವಮೊಗ್ಗ ದಸರಾ ಭಾಗವಾಗಿ ಆಯೋಜನೆಗೊಂಡಿರುವ ಶಿವಮೊಗ್ಗ ರಂಗ ದಸರಾ ಕಾರ್ಯಕ್ರಮಗಳನ್ನು ವಿಭಿನ್ನ ಹಾಗೂ ವಿಶೇಷವಾಗಿ ಆಯೋಜಿಸಲಾಗುತ್ತಿದೆ.
ರಂಗ ದಸರಾ ಅಂಗವಾಗಿ ರಾಜ್ಯ ಮಟ್ಟದ ಹಾಸ್ಯ ನಾಟಕ ಸ್ಪರ್ಧೆ ಆಯೋಜಿಸಲಾಗಿದೆ. ಸದಭಿರುಚಿಯಿಂದ ಕೂಡಿದ ಹಾಸ್ಯ ನಾಟಕವಾಗಿರಬೇಕು. ಅವಧಿ 45ರಿಂದ 60 ನಿಮಿಷ. ಒಂದು ತಂಡದಲ್ಲಿ ಕನಿಷ್ಠ 10 ಮಂದಿ ಇರಬೇಕು ಪಾಲ್ಗೊಂಡ ಪ್ರತೀ ತಂಡಕ್ಕೂ ಸ್ಮರಣಿಕೆ ಹಾಗೂ ಸರ್ಟಿಫಿಕೇಟ್ ನೀಡಲಾಗುವುದು. ಪ್ರತೀ ತಂಡಕ್ಕೂ ಸಾಮಾನ್ಯ ಊಟ, ಅಗತ್ಯ ಬಿದ್ದಲ್ಲಿ ಡಾರ್ಮೆಟರಿಯಲ್ಲಿ ವಸತಿ ವ್ಯವಸ್ಥೆ ಮಾಡಲಾಗುವುದು, ಮೊದಲ ಮೂರು ನಾಟಕಗಳಿಗೆ ನಗದು ಹಾಗೂ ಟ್ರೋಫಿ ಕೊಡಲಾಗುವುದು, ಪ್ರತೀ ತಂಡಕ್ಕೆ ಬಂದು ಹೋಗಲು ಕಿಲೋ ಮೀಟರ್ ಗೆ 10 ರೂಪಾಯಿಯಂತೆ ಪ್ರವಾಸ ಭತ್ಯೆ ನೀಡಲಾಗುವುದು.
ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಹಾಸ್ಯ ನಟ, ಅತ್ಯುತ್ತಮ ಹಾಸ್ಯ ನಟಿಗೆ ನಗದು ಪುರಸ್ಕಾರವಿದೆ. ನಾಟಕ ಸ್ಪರ್ಧೆ ಶಿವಮೊಗ್ಗದ ಕುವೆಂಪು ರಂಗಮAದಿದಲ್ಲಿ ರಂಗ ದಸರಾ ಉತ್ಸವದಲ್ಲಿ ಸೆಪ್ಟಂಬರ್ 29 ಹಾಗೂ 30 ರಂದು ನಡೆಯಲಿವೆ.
ತಂಡ ಹಾಗೂ ನಾಟಕದ ವಿವರಗಳನ್ನು ಸೆ.24ರ ಒಳಗಾಗಿ ಈ ಮೇಲ್ ಗೆ ಕಳಿಸಬೇಕು.
ಸ್ಪರ್ಧೆಗೆ ಆಯ್ಕೆಯಾದ ನಾಟಕ ತಂಡಗಳಿಗೆ ವೈಯಕ್ತಿಕವಾಗಿ ತಿಳಿಸಲಾಗುವುದು. ಮೊದಲ ಬಹುಮಾನ ಪಡೆದ ತಂಡವು ಬಹುಮಾನ ವಿತರಣೆ ದಿನ, ಆದೇ ನಾಟಕವನ್ನು ಪ್ರದರ್ಶಿಸಬೇಕು.
ವಿಜೇತರಿಗೆ ಪ್ರಥಮ ಬಹುಮಾನ 30,000/-
, ದ್ವಿತೀಯ ಬಹುಮಾನ 25,000/-,
ತೃತೀಯ ಬಹುಮಾನ 20,000/-
ಶ್ರೇಷ್ಠ ನಟ, ಶ್ರೇಷ್ಠ ನಟಿ, ಶ್ರೇಷ್ಠ ನಿರ್ದೇಶಕರಿಗೆ ತಲಾ 5,000 ರೂ.ಗಳ ಬಹುಮಾನವಿದೆ. ರಂಗ ತಂಡಗಳು ಈ ಸ್ಪರ್ಧೆಗಳಲ್ಲಿ ಭಾಗವಹಿಸಿ, ಬೆಂಬಲಿಸುವಂತೆ ರಂಗ ದಸರಾ ಸಮಿತಿ ಕೋರಿದೆ.