ಶಿವಮೊಗ್ಗ ನಗರದ ಚಂದ್ರಶೇಖರ್ ಆಜಾದ್ ಪಾರ್ಕ್ ( ಫ್ರೀಡಂ ಪಾರ್ಕ್ ) ನ ಅಭಿವೃದ್ಧಿಗಾಗಿ ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪ ನವರು ಸಮಯದಲ್ಲಿ ಅನುದಾನವನ್ನು ನೀಡಿದ್ದರು.ಈಗ ಶಿವಮೊಗ್ಗ ಸ್ಮಾರ್ಟ್ ಸಿಟಿ ವತಿಯಿಂದ ಅನೇಕ ಕಾಮಗಾರಿಯನ್ನು ಮಾಡುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದ್ದದ್ದನ್ನು ಗಮನಿಸಿ ಸಂಸದರಾದ ಬಿ. ವೈ ರಾಘವೇಂದ್ರ ಇಂದು ಪಾರ್ಕ್ ಗೆ ಭೇಟಿ ನೀಡಿದರು.
ಸಾರ್ವಜನಿಕರಿಗೆ ಅನುಕೂಲವಾಗಲು ಈ ಪಾರ್ಕ್ ನಿರ್ಮಾಣ ಮಾಡಲಾಗಿದೆ.ಆದರೆ ಸ್ವಚ್ಛತೆ, ವಾಕಿಂಕ್ ಟ್ರ್ಯಾಕ್, ಕುಡಿಯುವ ನೀರು, ಶೌಚಾಲಯಕ್ಕೆ ಮೊದಲ ಹಂತದಲ್ಲಿ ಆದ್ಯತೆ ನೀಡಲಾಗುವುದು.ಜೊತೆಗೆ 4 ಹಂತದಲ್ಲಿ ಪಾರ್ಕ್ ಕೆಲಸವನ್ನು ಸ್ಮಾರ್ಟ್ ಸಿಟಿ ವತಿಯಿಂದ ಮಾಡುತ್ತಿದ್ದು, ಇಲ್ಲಿ ಆಗುತ್ತಿರುವ ಕಾಮಗಾರಿಗಳು ಸಾರ್ವಜನಿಕರಿಗೆ ಕಿರಿಕಿರಿ ಆಗದಂತೆ ನೋಡಿಕೊಳ್ಳಬೇಕಿದೆ ಎಂದು ಸಂಸದ ಬಿ. ವೈ ರಾಘವೇಂದ್ರ ಅಧಿಕಾರಿಗಳಿಗೆ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ,ಎಸ್. ದತ್ತಾತ್ರಿ, ಉಪ ಮೇಯರ್ ಶಂಕರ್ ಗನ್ನಿ, ಕಾರ್ಪೊರೇಟರ್ ವಿಶ್ವಾಸ್ , ಸಿಮ್ಸ್ ಆಡಳಿತ ಮಂಡಳಿ ಸದಸ್ಯರಾದ ದಿವಾಕರ್ ಶೆಟ್ಟಿ, ಜಂಗಲ್ ರೆಸಾರ್ಟ್ ನಿರ್ದೇಶಕ ರಾಜೇಶ ಕಾಮತ್, ಬಳ್ಳಕೆರೆ ಸಂತೋಷ್, ಮಾಲತೇಶ್,
ಸ್ಮಾರ್ಟ್ ಸಿಟಿ ಎಂ. ಡಿ ಚಿದಾನಂದ ವಠಾರೆ, ಕುಮಾರ ಸ್ವಾಮಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.