ದೇಶಾದ್ಯಂತ PFI ಮತ್ತು SDPI ಜಿಲ್ಲಾಧ್ಯಕ್ಷ ಮತ್ತು ನಾಯಕರ ಮನೆ ಮೇಲೆ NIA ದಾಳಿ ನಡೆಸಿದೆ. ಶಿವಮೊಗ್ಗದಲ್ಲಿ ಟ್ಯಾಂಕ್ ಮೋಹಲದಲ್ಲಿ PFI ಮುಖಂಡ ಶಾಹಿದ್ ಖಾನ್ ರವರ ಮನೆಯ ಮೇಲೆ ದಾಳಿ ನಡೆಸಿದಾಗ ಮನೆಯಲ್ಲಿ 20 ಲಕ್ಷ ರೂಪಾಯಿಗಳು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಕರ್ನಾಟಕ ಸೇರಿದಂತೆ ಉತ್ತರ ಪ್ರದೇಶ್, ಕೇರಳ ,ತೆಲಂಗಾಣ , ತಮಿಳುನಾಡು ಸೇರಿ 10 ಹೆಚ್ಚು ರಾಜ್ಯಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದೆ. ದೇಶ ವಿರೋಧಿ ಚಟುವಟಿಕೆಗಳು ಭಯೋತ್ಪಾದನೆ ನಿಷೇಧಿತ ಸಂಸ್ಥೆಯ ಜೊತೆ ಸಂಪರ್ಕ ಹೊಂದಿದ್ದು , ಗಲಭೆ ಸೃಷ್ಟಿಸಲು ವ್ಯಕ್ತಿಗಳಿಗೆ ಸಹಕಾರ ನೀಡುತ್ತಿರುವ ಆರೋಪ ಹಿನ್ನಲೆ NIA ನಡೆಸಿದೆ.
ಕರ್ನಾಟಕದಲ್ಲಿ ಶಿವಮೊಗ್ಗ ಸೇರಿದಂತೆ ಬೆಂಗಳೂರು 5 ಕಡೆಗಳಲ್ಲಿ NIA ದಾಳಿ ನಡೆಸಿದೆ.