ಉಗ್ರ ಸಂಘಟನೆಗಳು ಜೊತೆಗೆ ಸಂಪರ್ಕ ಹೊಂದಿದ ಆರೋಪದಡಿಗೆ ಶಿವಮೊಗ್ಗ ಸಿದ್ದೇಶ್ವರ ನಗರ ನಿವಾಸಿ ಸೈಯದ್ ಯಾಸಿನ್ ತೀರ್ಥಹಳ್ಳಿಯ ಸೊಪ್ಪುಗುಡೆಯ ನಿವಾಸಿ ಶರೀಕ್ ಮತ್ತು ಮಂಗಳೂರಿನ ನಿವಾಸಿ ಮಾಝ್ ಮುನೀರ್ ಮೂವರನ್ನು ಬಂಧಿಸಿ ತನಿಖೆ ಮುಂದುವರಿಸುತ್ತಿದ್ದೇವೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ. ಲಕ್ಷ್ಮಿ ಪ್ರಸಾದ್ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ವಿವರಣೆ ನೀಡಿದ ವಿವರ
1.ಒಟ್ಟು 14 ಮೊಬೈಲ್ ಗಳು ಮತ್ತು 1 ಡೋಂಗಲ್
2.2 ಲ್ಯಾಪ್ಟಾಪ್ಗಳು 1 ಪೆನ್ ಡ್ರೈವ್ ಹಾಗೂ ಇತರ ಎಲೆಕ್ಟ್ರಾನಿಕ್ಸ್ ಉಪಕರಣಗಳು
3.ಬಾಂಬ್ ಸ್ಪೋಟ ಮಾಡಿದ ಸ್ಥಳದಲ್ಲಿ ದೊರಕಿದ ಛಿದ್ರಗೊಂಡ ಬಾಂಬಿನ ಅವಶೇಷಗಳು , ಬಾಂಬ ತಯಾರಿಸಲು ಬೇಕಾದ ಸಾಮಗ್ರಿಗಳು -ರಿಲೇ ಸರ್ಕ್ಯೂಟ್ , ಬಲ್ಬ್ಗಳು , ಮ್ಯಾಕ್ಸ್ ಬಾಕ್ಸ್ಗಳು , ವೈರ್ ಗಳು , ಬ್ಯಾಟರಿಗಳು , ಸ್ಪೋಟಕ ವಸ್ತುಗಳು
4.ಅರೆಬರೆ ಸುಟ್ಟಿರುವ ಭಾರತದ ತ್ರಿವರ್ಣ ರಾಷ್ಟ್ರಧ್ವಜ
5.ಪ್ರಮುಖ ದಾಸ್ತ ವೇಜಗಳು ಮತ್ತು ದಾಖಲಾತಿಗಳು
6.ಆರೋಪಿ ಶಾರಿಕ್ ಕೃತ್ಯಕ್ಕೆ ಬೆಳೆಸಿದ ಒಂದು ಮಾರುತಿ ಕಾರನ್ನು ವಶಪಡಿಸಿಕೊಂಡಿದ್ದೇವೆ ಎಂದರು.

ವರದಿ ಪ್ರಜಾಶಕ್ತಿ…