ಶಿವಮೊಗ್ಗ: ವಿವಿಧ ಸಂಘ ಸಂಸ್ಥೆಗಳ ನೆರವು ಹಾಗೂ ಸಹಕಾರದಿಂದ ಗುಡ್‌ಲಕ್ ಆರೈಕೆ ಕೇಂದ್ರ ಸದೃಢವಾಗಿ ಮುನ್ನಡೆಯುತ್ತಿದೆ. ಎಲ್ಲರ ಸಹಕಾರ ಆರೈಕೆ ಕೇಂದ್ರಕ್ಕೆ ಅತ್ಯಂತ ಮಹತ್ವಪೂರ್ಣ ಎಂದು ಗುಡ್‌ಲಕ್ ಆರೈಕೆ ಕೇಂದ್ರದ ಅಧ್ಯಕ್ಷ ರವೀಂದ್ರನಾಥ್ ಐತಾಳ್ ಹೇಳಿದರು.
ಶಿವಮೊಗ್ಗ ನಗರದ ಗುಡ್‌ಲಕ್ ಆರೈಕೆ ಕೇಂದ್ರಕ್ಕೆ ರೋಟರಿ ಕ್ಲಬ್ ಶಿವಮೊಗ್ಗ ರಿವರ್‌ಸೈಡ್ ಸಂಸ್ಥೆ ವತಿಯಿಂದ ಹಿರಿಯ ನಾಗರೀಕರ ಭೇಟಿ ಸಂದರ್ಭದಲ್ಲಿ ಮಾತನಾಡಿ, ಹಿರಿಯ ನಾಗರೀಕರು, ಪಾರ್ಶ್ವವಾಯು ಪೀಡಿತರು, ಮಾನಸಿಕ ಅಸ್ವಸ್ಥರು ಸೇರಿದಂತೆ ಅನೇಕರು ಕೇಂದ್ರದಲ್ಲಿ ಆಶ್ರಯ ಪಡೆದಿದ್ದು, ಎಲ್ಲರ ನೆರವಿನಿಂದ ಅವರೆಲ್ಲರಿಗೂ ಆರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ರೋಟರಿ ಅಂತರಾಷ್ಟಿçÃಯ ಸಂಸ್ಥೆಯು ಶಿವಮೊಗ್ಗದಲ್ಲಿ ವಿವಿಧ ಕ್ಲಬ್‌ಗಳನ್ನು ಹೊಂದಿದ್ದು, ಆರೈಕೆ ಕೇಂದ್ರದಲ್ಲಿ ನಿರಂತರವಾಗಿ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ವಿವಿಧ ಸಂಘ ಸಂಸ್ಥೆಗಳು ಸಹ ನೆರವು ನೀಡುತ್ತಿವೆ. ಸೇವೆಯು ಉತ್ತಮ ಕಾರ್ಯ ಎಂದು ಅಭಿನಂದಿಸಿದರು.
ರೋಟರಿ ಕ್ಲಬ್ ಶಿವಮೊಗ್ಗ ರಿವರ್‌ಸೈಡ್ ಅಧ್ಯಕ್ಷರು, ಸದಸ್ಯರು ಎಲ್ಲರೂ ಗುಡ್‌ಲಕ್ ಆರೈಕೆ ಕೇಂದ್ರದ ಹಿರಿಯ ನಾಗರೀಕರು, ಪಾರ್ಶ್ವವಾಯು ಪೀಡಿತರು, ಮಾನಸಿಕ ಅಸ್ವಸ್ಥರು ಹಾಗೂ ಜನರೊಂದಿಗೆ ಬೆಳಗಿನ ಉಪಾಹಾರ ಸೇವಿಸಿ ಕುಶಲೋಪರಿ ವಿಚಾರಿಸಿದರು.
ರೋಟರಿ ಕ್ಲಬ್ ಶಿವಮೊಗ್ಗ ರಿವರ್‌ಸೈಡ್ ಮಾಜಿ ಅಧ್ಯಕ್ಷ ಶಂಕರಣ್ಣ ಅವರು ನೂತನ ಸಭಾಂಗಣದಲ್ಲಿ ಆರ್ಥಿಕ ಸಹಾಯ ಹಾಗೂ ರಿವರ್‌ಸೈಡ್ ಕ್ಲಬ್ ಅಧ್ಯಕ್ಷ ದೇವೆಂದ್ರಪ್ಪ ಅವರು ಅನ್ನಪೂರ್ಣೇಶ್ವರಿ ನಿಧಿಗೆ ನಿತ್ಯಪ್ರಸಾದಕ್ಕೆ ದೇಣಿಗೆ ನೀಡಿದರು.
ಇದೇ ಸಂದರ್ಭದಲ್ಲಿ ಮಲೆನಾಡು ಅಡಕೆ ಮಾರಾಟ ಸಹಕಾರ ಸಂಘದ ಸದಸ್ಯರು ಸಭಾಂಗಣ ನಿರ್ಮಾಣಕ್ಕೆ ಆರ್ಥಿಕ ಸಹಾಯ ಮಾಡಿದರು. ನಿರ್ದೇಶಕ ರಾಮಲಿಂಗಪ್ಪ, ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್, ಶಿವಪ್ಪಗೌಡ, ನಟೇಶ್ ಕಾಸರವಳ್ಳಿ, ಕೆ.ಪಿ.ಶೆಟ್ಟಿ, ಜಗನ್ನಾಥ್.ಎಂ, ದ್ವಾರಕನಾಥ್, ರಾಕೇಶ್, ಪಂಚಾಕ್ಷರಿ ಹಿರೇಮಠ ಸೇರಿದಂತೆ ಅನೇಕರು ಹಾಜರಿದ್ದರು.