ಶಿವಮೊಗ್ಗದ ಫಲಕ್ ಪ್ಯಾಲೆಸ್ ನಲ್ಲಿ ಸೆಪ್ಟೆಂಬರ್ 17 ಮತ್ತು 18 ರಂದು ‘9 ನೇ ಕರ್ನಾಟಕ ರಾಜ್ಯ ಕೂಡೊ ಮಿಕ್ಸಡ್ ಮಾರ್ಷಲ್ ಆರ್ಟ್ಸ್ ಚಾಂಪಿಯನ್ಷಿಪ್ 2022’ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಈ ಪಂದ್ಯಾವಳಿಯನ್ನು ಶಿವಮೊಗ್ಗ ಜಿಲ್ಲಾ ಕೂಡೊ ಸಂಸ್ಥೆಯ ವತಿಯಿಂದ ಕರ್ನಾಟಕ ರಾಜ್ಯ ಕೂಡೊ ಸಂಸ್ಥೆಯ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಸದರಿ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯದ ಹಲವಾರು ಜಿಲ್ಲೆಗಳಿಂದ 300 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು. ಪದಕ ಪಡೆದಿರುವ ಕ್ರೀಡಾಪಟುಗಳಿಗೆ ಈ ಬಾರಿಯ ದೀಪಾವಳಿ ಹಬ್ಬದವನ್ನು ಬಾಲಿವುಡ್ ಸೂಪರ್ ಸ್ಟಾರ್ ಶಿಹಾನ್ ಅಕ್ಷಯ್ ಕುಮಾರ್ ರವರ ಜೊತೆಯಲ್ಲಿ ಅಕ್ಷಯ್ ಕುಮಾರ್ ಇಂಟರ್ನ್ಯಾಷನಲ್ ಕುಡೊ ಚಾಂಪಿಯನ್ಷಪ್ ನಲ್ಲಿ ಭಾಗವಹಿಸುವ ಜೊತೆಯಲ್ಲಿ ಹಬ್ಬವನ್ನು ಸಹ ಆಚರಿಸವ ಸುವರ್ಣ ಅವಕಾಶವನ್ನು ನೀಡಲಾಗಿದೆ.
ಪದಕ ವಿಜೇತ ಕ್ರೀಡಾಪಟುಗಳನ್ನು ಮುಂಬರುವ14ನೇ ಅಕ್ಷಯ್ ಕುಮಾರ್ ಇಂಟರ್ನ್ಯಾಷನಲ್ ಕುಡೊ ಚಾಂಪಿಯನ್ಷಪ್, 13ನೇ ರಾಷ್ಟ್ರೀಯ ಕುಡೊ ಚಾಂಪಿಯನ್ಷಪ್ ಹಾಗೂ 3ನೇ ಕುಡೊ ಫೆಡರೇಷನ್ ಕಪ್, ಈ 3 ಪಂದ್ಯಗಳಲ್ಲಿ ಭಾಗವಹಿಸಲು ಆಯ್ಕೆ ಮಾಡಲಾಗಿದೆ. ಇದು ಭಾರತದಲ್ಲಿ ಪ್ರಪ್ರಥಮ ಬಾರಿಗೆ 3 ಪಂದ್ಯಾವಳಿಗಳು ಒಂದೇ ಸ್ಥಳದಲ್ಲಿ ನಡೆಯಲಿರುವ ಏಕೈಕ ಮಹಾ ಕ್ರಿಡಾಕೂಟವಾಗಿದೆ. ಇಂತಹ ಕ್ರೀಡಾಕೂಟದಲ್ಲಿ ಭಾಗವಹಿಸಲು ಪದಕ ವಿಜೇತರಿಗೆ ಅವಕಾಶ ನೀಡಲಾಗಿದೆ. ಕೂಡೊ ಜಪಾನಿನ ಮಿಕ್ಸಡ್ ಮಾರ್ಷಲ್ ಆರ್ಟ್ಸ್ ಆಗಿದೆ ಅಂದರೆ ಜಪಾನಿನ ಒಂದು ಸಮರ ಕಲೆಯಗಿದೆ.ಈ ಕ್ರೀಡೆಯು ಕರಾಟೆ, ಜುಡೊ, ಟೆಕ್ವಾಂಡೊ, ಬಾಕ್ಸಿಂಗ್, ಕಿಕ್ ಬಾಕ್ಸಿಂಗ್, ಕುಸ್ತಿ, ಮುಯ್ ಥಾಯ್, ವುಶು, ಜುಜುಟ್ಸು ಸೇರಿದಂತೆ ಹಲವಾರು ಸಮರ ಕಲೆಗಳ ಮಿಶ್ರಣವಾಗಿದ್ದು ಈ ಒಂದು ಕ್ರೀಡೆಯನ್ನು ಕಲಿತರೆ ಎಲ್ಲಾ ಸಮರ ಕಲೆಗಳನ್ನು ಕಲಿಯಬಹುದು.
ಆದ್ದರಿಂದ ಈ ಕ್ರೀಡೆಯು ಆತ್ಮ ರಕ್ಷಣೆಗಾಗಿ ಅತ್ಯುತ್ತಮವಾಗಿದೆ ಹಾಗೆಯೇ ಭಾರತ ಸರ್ಕಾರವು ಕೂಡೊ ಕ್ರೀಡೆಗೆ ಮಾನ್ಯತೆಯನ್ನು ನೀಡಿದೆ.ಆದ್ದರಿಂದ 6 ನೇ ತರಗತಿಯಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದರೆ 10,000 ರೂಪಾಯಿಗಳ ನಗದು ಬಹುಮಾನ ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ಕೂಡೊ ಸಂಸ್ಥೆಯ ಅಧ್ಯಕ್ಷರಾದ ರೆನ್ಷೀ ಶಬ್ಬೀರ್ ಅಹ್ಮದ್ ರವರು ತಿಳಿಸಿದ್ದಾರೆ. ಇದಲ್ಲದೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಪಡೆಯುವ ಕೂಡೊ ಕ್ರೀಡಾಪಟುಗಳಿಗೆ ಭಾರತ ಸರ್ಕಾರದ ವತಿಯಿಂದ ಆರ್ಥಿಕ ರಾಶಿ ಹಾಗೂ ಸರ್ಕಾರಿ ನೌಕರಿಗಳಲ್ಲಿ ಮೀಸಲಾತಿಯ ಸೌಲಭ್ಯಗಳು ನೀಡಲಾಗುತ್ತಿದೆ ಎಂದು ಕೂಡೊ ಇಂಟರ್ ನ್ಯಾಷನಲ್ ಫೆಡರೇಷನ್ ಆಫ್ ಇಂಡಿಯದ ಚೆರ್ಮ್ಯಾನ್ ರವರಾದ ಪ್ರಖ್ಯಾತ ಬಾಲಿವುಡ್ ಚಲನಚಿತ್ರ ನಟ ಶ್ರೀ ಶಿಹಾನ್ ಅಕ್ಷಯ್ ಕುಮಾರ್ ಅವರು ತಿಳಿಸುತ್ತಾ ಭಾರತ ಸರ್ಕಾರಕ್ಕೆ ಹಾಗೂ ಭಾರತ ಸರ್ಕಾರದ ಕ್ರೀಡಾ ಮಂತ್ರಿಗಳಿಗೆ ಧನ್ಯವಾದಗಳುನ್ನು ಸಲ್ಲಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ-shabir-9886631024