ಶಿವಮೊಗ್ಗ: ವಿದ್ಯಾರ್ಥಿಗಳ ಜೀವನವನ್ನು ಸರಿದಾರಿಯಲ್ಲಿ ಮುನ್ನಡೆಸುವ ಜತೆಯಲ್ಲಿ ಉನ್ನತ ಸಾಧನೆ ಮಾಡುವಂತೆ ಪ್ರೇರೆಪಿಸುವ ಶಕ್ತಿ ಶಿಕ್ಷಕರಲ್ಲಿದೆ ಎಂದು ರೋಟರಿ ಜಿಲ್ಲೆ ಪಿಡಿಜಿ ಎಚ್.ಎಲ್.ರವಿ ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿಯ ಎನ್‌ಎಚ್‌ಎಸ್ ಆವರಣದಲ್ಲಿ ರೋಟರಿ ಕ್ಲಬ್ ಕೋಣಂದೂರು ವತಿಯಿಂದ ಆಯೋಜಿಸಿದ್ದ ನೇಷನ್ ಬಿಲ್ಡರ್ ಅವಾರ್ಡ್ ಮತ್ತು ಜಿಲ್ಲೆಯ ಉತ್ತಮ ಶಿಕ್ಷಕರ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನವನ್ನು ಬೆಳಗಿಸುವ ಶಕ್ತಿ ಶಿಕ್ಷಕರಲ್ಲಿ ಇರುತ್ತದೆ. ಉತ್ತಮ ವಿದ್ಯಾರ್ಥಿಗಳ ರೂಪಿಸುವುದರಿಂದ ಸದೃಢ ರಾಷ್ಟç ನಿರ್ಮಾಣ ಮಾಡಲು ಸಾಧ್ಯವಿದೆ. ವಿದ್ಯಾರ್ಥಿಗಳ ಭವಿಷ್ಯ ಹಾಗೂ ಉತ್ತಮ ರಾಷ್ಟç ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ ಎಂದು ತಿಳಿಸಿದರು.

ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಸಾಕ್ಷರತಾ ಮಾಸವಾಗಿ ಆಚರಿಸುತ್ತಿದ್ದು, ಜಿಲ್ಲೆಯಲ್ಲಿ ಶಿಕ್ಷಕ ವೃತ್ತಿಯಲ್ಲಿ ಉತ್ತಮ ಸಾಧನೆ ಮಾಡಿದ ಶಿಕ್ಷಕರನ್ನು ವಿದ್ಯಾರ್ಥಿಗಳಿಂದಲೇ ಆಯ್ಕೆ ಮಾಡಿ ರೋಟರಿ ಸಂಸ್ಥೆಯ ವಿಶೇಷ ಪ್ರಶಸ್ತಿ ನೀಡಲಾಗುತ್ತದೆ. ಇದರಿಂದ ಶಿಕ್ಷಕರ ಜವಾಬ್ದಾರಿ ಹೆಚ್ಚುವ ಜತೆಯಲ್ಲಿ ಇತರ ಶಿಕ್ಷಕರಿಗೂ ಪ್ರೇರಣೆ ಆಗುತ್ತದೆ ಎಂದರು.
ಸಾಕ್ಷರತಾ ಸಮಿತಿಯ ಜಿಲ್ಲಾ ವೈಸ್ ಚೇರಮನ್ ಜಿ.ವಿಜಯ್‌ಕುಮಾರ್ ಮಾತನಾಡಿ, ಪಾಲಕರ ಋಣ, ಓದಿದ ಶಾಲೆ, ಶಿಕ್ಷಕರ ಋಣ ತೀರಿಸುವುದು ತುಂಬಾ ಕಷ್ಟದ ಕೆಲಸ. ಶಿಕ್ಷಕರು ದೇಶದ ಆಸ್ತಿ. ಶಿಕ್ಷಕರು ಮಕ್ಕಳಿಗೆ ಉತ್ತಮ ಮಾರ್ಗದರ್ಶನ ಮಾಡಬೇಕು. ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.

ರೋಟರಿ ಕ್ಲಬ್ ಕೋಣಂದೂರು ಅಧ್ಯಕ್ಷ ಎಂ.ಟಿ.ಪುಟ್ಟಪ್ಪ ಮಾತನಾಡಿ, ಕೋಣಂದೂರು ರೋಟರಿ ಸಂಸ್ಥೆ ನಿರಂತರವಾಗಿ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದು, ಸಮಾಜಮುಖಿ ಚಟುವಟಿಕೆಗಳನ್ನು ಆಯೋಜಿಸುತ್ತಿದೆ. ಸಾಧಕ ಶಿಕ್ಷಕರನ್ನು ಗುರುತಿಸಿ ಗೌರವಿಸುವ ವಿಶೇಷ ಕಾರ್ಯಕ್ರಮ ಇದಾಗಿದೆ ಎಂದು ತಿಳಿಸಿದರು.
ಕೋಣಂದೂರು ಎನ್‌ಎಚ್‌ಎಸ್ ಪ್ರೌಢಶಾಲೆಯ ಉಪಪ್ರಾಚಾರ್ಯ ಬಿ.ವಿ.ಚಂದ್ರಶೇಖರ್, ಕರ್ನಾಟಕ ಪಬ್ಲಿಕ್ ಶಾಲೆಯ ಇ.ಟಿ.ಸೌಮ್ಯ, ಹುಂಚದಕಟ್ಟೆಯ ಗಣಿತ ಶಿಕ್ಷಕ ಡಿ.ಕೃಷ್ಣಪ್ಪ ಅವರಿಗೆ ಅಂತರಾಷ್ಟಿçÃಯ ರೋಟರಿ ಪ್ರತಿಷ್ಠಿತ ಪ್ರಶಸ್ತಿ ನೇಷನ್ ಬಿಲ್ಡರ್ ಅವಾರ್ಡ್ ನೀಡಿ ಸನ್ಮಾನಿಸಲಾಯಿತು.ಎಂ.ಸುರೇಶ್ ಹಾಗೂ ಎಚ್.ರಮೇಶ್ ಅವರನ್ನು ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ವಲಯ 11 ಸಹಾಯಕ ಗವರ್ನರ್ ಗುಡದಪ್ಪ ಕಸಬಿ, ಜೋನಲ್ ಲೆಫ್ಟಿನೆಂಟ್ ಕಿರಣ್.ಜೆ.ಪಿ., ಸಾಕ್ಷರತಾ ಸಮಿತಿ ಚೇರಮನ್ ಟಿ.ಮೋಹನ್, ರೋಟರಿ ಕ್ಲಬ್ ಕೋಣಂದೂರು ಕಾರ್ಯದರ್ಶಿ ವೀರಪ್ಪ ಟಿ.ವಿ., ಮುರಗೇಂದ್ರಪ್ಪ, ಧರ್ಮನಾಯ್ಕ, ಗಿರಿಯಪ್ಪಗೌಡ, ಈಶ್ವರಪ್ಪ, ಚೇತನ್ ಮತ್ತಿತರರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…