ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ದೇಶದ ಮತ್ತು ರಾಜ್ಯದ ಜನಸಾಮಾನ್ಯರಿಗೆ ಹಾಗೂ ಮಧ್ಯಮ ವರ್ಗದವರಿಗೆ ಮಾರಕವಾಗುವ ರೀತಿಯಲ್ಲಿ ಎಲ್.ಪಿ.ಜಿ ಅನಿಲ , ಪೆಟ್ರೋಲ್ ಮತ್ತು ಡೀಸೆಲ್ , ವಿದ್ಯುತ್ ಮೇಲಿನ ಶುಲ್ಕ ಮುಂತಾದವುಗಳ ದರಗಳನ್ನು ಯಥೇಚ್ಚವಾಗಿ ಕಳೆದ 5-6 ತಿಂಗಳು ಗಳಿಂದ ಏರಿಕೆ ಮಾಡಿದ್ದು , ತಾವು ಈ ಜನ ವಿರೋಧಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ವಜಾಗೊಳಿಸಿದ ದೇಶಾದ್ಯಂತ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೊಳಿಸಬೇಕೆಂದು ಸನ್ಮಾನ್ಯ ರಾಷ್ಟ್ರಪತಿಗಳನ್ನು ನಮ್ಮ ಸಂಘಟನೆಯು ಒತ್ತಾಯಿಸುತ್ತದೆ.
ದೇಶದಲ್ಲಿ ಉತ್ಪಾದನೆಯಾದ ಕೋವಿಡ -19 ನಿಯಂತ್ರಣದ ಲಸಿಕೆಯನ್ನು ಕೇಂದ್ರದ ಮೋದಿ ಸರ್ಕಾರ ಪ್ರಾರಂಭದಲ್ಲಿ ಹೊರದೇಶಕ್ಕೆ ರಫ್ತು ಮಾಡಿತ್ತು.ಈ ಕಾರಣದಿಂದ ರಾಷ್ಟ್ರದಲ್ಲಿ ಈಗ ಕೆಲವು ರಾಜ್ಯಗಳಿಗೆ ಲಸಿಕೆ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.ಈ ಭೀಕರ ಕರೋನ ಸಂಕಷ್ಟ ಕಾಲದಲ್ಲಿ ದೇಶದಲ್ಲಿ ಮತ್ತು ರಾಜ್ಯದಲ್ಲಿ ನಿರಂತರ ಲಾಕ್ ಡೌನ್ ನಿಂದಾಗಿ ರಾಜ್ಯ ಮತ್ತು ದೇಶದಲ್ಲಿ ದುಡಿಯುವ ಕೈಗಳು ಮತ್ತು ರೈತರು ಸಂಕಷ್ಟದಲ್ಲಿ ಕಾಲ ಕಳೆಯುತ್ತಿದ್ದಾರೆ.ದೇಶ ಮತ್ತು ರಾಜ್ಯದಲ್ಲಿ ಬಡವರು ಮತ್ತು ಮಧ್ಯಮ ವರ್ಗದವರು ಜೀವನ ನಡೆಸುವುದೇ ದುಸ್ತರವಾಗಿದ್ದು.ಆತ್ಮಹತ್ಯೆ ಮಾಡಿಕೊಳ್ಳುವ ಭೀಕರ ಪರಿಸ್ಥಿತಿ ಉಂಟಾಗಿದೆ .ಇಂತಹ ಸಂದರ್ಭದಲ್ಲಿ ದೇಶದಲ್ಲಿ ಈ ರೀತಿ ಹಿಗ್ಗಾಮುಗ್ಗಾ ಬೆಲೆ ಏರಿಕೆ ಮಾಡುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಮತ್ತು ಜನತೆಗೆ ಸಾಂತ್ವಾನ ಹೇಳುವ ಕಾರ್ಯವನ್ನು ಸಹ ಮಾಡುತ್ತಿಲ್ಲ.ಆದ್ದರಿಂದ ಸನ್ಮಾನ್ಯ ರಾಷ್ಟ್ರಪತಿಗಳು ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಜಾಗೊಳಿಸಿ ದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಲು ವಿನಂತಿ. ಈ ಸಂದರ್ಭದಲ್ಲಿ ಟ್ರಸ್ಟ್ ನ ಮುಖಂಡರಾದ ವೆಂಕಟೇಶ್ , ಎಂ.ಸಂಗಯ್ಯ , ಎಸ್ ವಿ ರಾಜಮ್ಮ , ಶಂಕ್ರನಾಯ್ಕ , ಎಲ್ ಆರ್ ಗೋಪಾಲಕೃಷ್ಣ , ಎಲ್ಲ ಆದಿಶೇಷ , ಕಲ್ಲೂರು ಮೇಘರಾಜ್ ಉಪಸ್ಥಿತರಿದ್ದರು.
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ
CCTV SALES & SERVICE
9880074684
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153