ಶಿವಮೊಗ್ಗ ಮಹಾನಗರ ಪಾಲಿಕೆ ಸುತ್ತಲಿನ ಕಲ್ಲುಹಾಸು – ಪಾಲಿಕೆ ಸಭೆಯ ಗಮನಕ್ಕೂ ತರದೆ ಹಾಗು ಪಾಲಿಕೆಯ  ಅನುಮತಿ ಇಲ್ಲದೆ 4.6 ಕೋಟಿ ವೆಚ್ಚದ  ಸ್ಮಾರ್ಟಸಿಟಿಯವರ ಅವೈಜ್ಞಾನಿಕ ದುಬಾರಿ ಕಾಮಗಾರಿ ನಾಗರೀಕರ ಓಡಾಟಕ್ಕೆ ತೀವ್ರ ಕಷ್ಟಕರವಾಗಿದೆ ಹಾಗಾಗಿ  ಕಲ್ಲು ಹಾಸುಗಳನ್ನು ತೆಗೆಸಿ ಪೇವರ್ಸ ಅಥವಾ ಟೈಲ್ಸ ಕಾಮಗಾರಿ ಮಾಡಿಸಲು ಮತ್ತು ತಪ್ಪಿತಸ್ಥರು ವಿರುದ್ಧ ಕಾನೂನು ಕ್ರಮ ಕೈಗೂಳ್ಳಲು ಆಗ್ರಹಿಸಿ ನಾಗರಿಕ ಹಿತರಕ್ಷಣಾ ವೇದಿಕೆ ಒಕ್ಕೂಟದಿಂದ ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡ ರವರಿಗೆ ಮನವಿ ಸಲ್ಲಿಸಿದರು.

ಶಿವಮೊಗ್ಗ ಮಹಾನಗರ ಪಾಲಿಕೆಯ ಆವರಣದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ನಿರ್ವಹಿಸಲಾಗಿರುವ ಕಲ್ಲುಹಾಸು ಕಾಮಗಾರಿಯು ಪಾಲಿಕೆಯ ಯಾವುದೇ ಪೂರ್ವಾನುಮತಿ ಇಲ್ಲದೆ, ಕನಿಷ್ಠ ಜನಪ್ರತಿನಿಧಿಗಳ(ಕಾರ್ಪೊರೇಟರ್ಸ್) ಗಮನಕ್ಕೆ ತರದೆ ನಡೆಸಿರುವ ಕಾಮಗಾರಿಯಾಗಿದೆ.
ಈ ಕಾಮಗಾರಿಗೆ ಮಹಾನಗರ ಪಾಲಿಕೆಯವರು ಯಾವುದೇ ಕೋರಿಕೆಯನ್ನಾಗಲಿ ಅಥವಾ ಅಂದಾಜು ವೆಚ್ಚದ ಪೆಟ್ಟಿ ಸಲ್ಲಿಸಿ ಯಾವುದೇ ರೀತಿಯ ಅನುಮೋದನೆಯನ್ನು ಪಡೆಯದೇ ನಿರ್ವಹಿಸಿರುವ ಕಾಮಗಾರಿಯಾಗಿದೆ.
ಸ್ಮಾರ್ಟಸಿಟಿ ನಿಯಮದ ಪ್ರಕಾರ, ಸಂಬಂಧ ಪಟ್ಟವರೊಂದಿಗೆ  (ಪಾಲಿಕೆ ಸಭೆಯಲ್ಲಿ ) ಕಾಮಗಾರಿ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ಕಾಮಗಾರಿ ನಡೆಸುವುದು ಕಡ್ಡಾಯ. ಆದರೆ ಈ ನಿಯಮಗಳನ್ನು ಗಾಳಿಗೆ ತೂರಿ ಅಂದಿನ ಮಹಾನಗರ ಪಾಲಿಕೆಯ ಆಯುಕ್ತರು ಮತ್ತು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಾಗಿ ಎರಡೂ ಹುದ್ದೆಗಳಲ್ಲಿದ್ದ  ಶ್ರೀ ಚಿದಾನಂದ ವಟಾರೆಯವರು ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ಸರ್ವಾಧಿಕಾರಿಯಾಗಿ  ನಡೆಸಿರುವ ಕಾಮಗಾರಿಯಾಗಿದೆ ಎಂದರು.

ಈ ಕಾಮಗಾರಿ ಗುತ್ತಿಗೆಯನ್ನು ಟೆಂಡರ್ ಅನ್ನು ಪ್ರದೀಪ್ ಕನ್ಸ್ಟ್ರಕ್ಷನ್ ಕಂಪನಿ, ಹುಬ್ಬಳ್ಳಿ ಇವರಿಗೆ ರೂ.4 ಕೋಟಿ 60 ಲಕ್ಷದ ಮೊತ್ತಕ್ಕೆ ಅನುಮೋದನೆ ನೀಡಿ ನಿರ್ವಹಿಸಲಾಗಿರುವ ಈ ಕಾಮಗಾರಿಯು ಕಾನೂನು ಬಾಹಿರವಾಗಿರುತ್ತದೆ. ಅವೈಜ್ಞಾನಿಕವಾದ ದುಬಾರಿ  ಕಾಮಗಾರಿಯನ್ನು ನಡೆಸಿರುವುದರ ಹಿಂದೆ ಭ್ರಷ್ಟಾಚಾರದ ವಾಸನೆ ಇದೆ.
ಮುಂದುವರೆದು, ಈ ಕಾಮಗಾರಿಯು ಅತ್ಯಂತ ಅವೈಜ್ಞಾನಿಕವಾಗಿದ್ದು ಅಳವಡಿಸಲಾಗಿರುವ ಕಲ್ಲುಹಾಸಿನ ಮೇಲೆ ನಡೆದುಕೊಂಡು ಹೋಗುವುದು ಹಾಗೂ ದ್ವಿಚಕ್ರ ವಾಹನ, ಸೈಕಲ್ ಮತ್ತು ಇತರೆ ವಾಹನಗಳನ್ನು ತೆಗೆದುಕೊಂಡು ಹೋಗುವುದು ಅತ್ಯಂತ ಕಷ್ಟದಾಯಕವಾಗಿರುತ್ತದೆ. ಹಾಗೆಯೇ ಈ ಕಲ್ಲು ಹಾಸಿನ ಕೆಳಗಡೆ ಬರುವಂತಹ ನೀರಿನ ಪೈಪುಗಳು, ಯುಜಿಡಿ ಚೇಂಬರ್ಸ್ ಗಳು ಮತ್ತು ಭೂಗತ ವಿದ್ಯುತ್ ಕೇಬಲ್ ಗಳಿಗೆ ಯಾವುದೇ ಅವಕಾಶಗಳನ್ನು ಕಲ್ಪಿಸದೆ ನಡೆಸಲಾಗಿರುವ ಈ ಕಾಮಗಾರಿ ಅತ್ಯಂತ ಆವೈಜ್ಞಾನಿಕವಾಗಿದೆ ಎಂದರು.

ಈ ಕಾಮಗಾರಿ ಯಿಂದ ಪಾಲಿಕೆ ಸುತ್ತಮುತ್ತಲಿನ ಸ್ವಚ್ಛತೆ ದೊಡ್ಡ ಸವಾಲಾಗಿದೆ. ಹಾಗಾಗಿ  ಅತ್ಯುತ್ತಮವಾದ ಪೇವರ್ಸ್ ಅಥವಾ ಟೈಲ್ಸ್ ಗಳನ್ನು ಬಳಸಿ ಇಲ್ಲಿ ಕಾಮಗಾರಿ ನಡೆಸಿ, ಓಡಾಡುವ ನಾಗರೀಕರಿಗೆ ಅನುಕೂಲ ಮಾಡಿ ಕೂಡುವ ಅಗತ್ಯವಿದೆ.ಹಾಗಾಗಿ ಅವೈಜ್ಞಾನಿಕ ಕಲ್ಲು ಹಾಸುಗಳನ್ನು ತೆಗೆಸಿ, ಆದರ ಬದಲು ಪೇವರ್ಸ್ ಅಥವಾ ಟೈಲ್ಸ್ ಗಳನ್ನು ಬಳಸಿ ಇಲ್ಲಿ ಕಾಮಗಾರಿ ನಡೆಸಲು ಆಗ್ರಹಿಸುತ್ತಾ ಈ ಕಾಮಗಾರಿಯ ನಿಯಮಬಾಹಿರ ಅನುಷ್ಠಾನ, ಟೆಂಡರ್ ಪ್ರಕ್ರಿಯೆ ಮತ್ತು ಅವೈಜ್ಞಾನಿಕ ಕಾಮಗಾರಿಗಳ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಎಲ್ಲಾ ಅಧಿಕಾರಗಳ ಮೇಲೆ ಕಾನೂನು ರೀತಿಯ ಕ್ರಮ  ಅಗತ್ಯ ಇರುವುದರಿಂದ ಸೂಕ್ತ ಆಧಿಕಾರಿಗಳ ಮೂಲಕ ಕಾನೂನು ಕ್ರಮ ಜರುಗಿಸಬೇಕು ಎಂದರು.ಈ ವಿಚಾರವಾಗಿ ಆಗತ್ಯ ಕ್ರಮ ಕೈಗೊಳ್ಳಲು ವಿಫಲರಾದಲ್ಲಿ ನಾವು ಮುಂದಿನ ಹೋರಾಟ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಈ ಮೂಲಕ ಎಚ್ಚರಿಸುತ್ತೇವೆ ಎಂದರು.

ವರದಿ ಪ್ರಜಾಶಕ್ತಿ…