ಉತ್ತಮ ಜೀವನ ನಿರ್ವಹಣೆಗಾಗಿ, ಆರೋಗ್ಯವಂತ ಹೃದಯ ಅವಶ್ಯಕ, ಆದ್ದರಿಂದ ಅದನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ‘ಅಂತರ ರಾಷ್ಟ್ರೀಯ ಹೃದಯ ದಿನದ’ ಪ್ರಯುಕ್ತ ಸೈಕಲ್ ಜಾತ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಉದ್ಘಾಟಿಸಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು ಇಂದಿನ ದಿನಗಳಲ್ಲಿ ಕಾರ್ಡಿಯಲ್ಅರೆಸ್ಟ್ ಹೆಚ್ಚಾಗಿ ಯುವಕರಲ್ಲಿ ಕಾಣಿಸಿ ಕೊಳ್ಳುತ್ತಿದೆ. ಇದರಿಂದ ಅವರ ಕುಟುಂಬಕ್ಕೆ, ದೇಶಕ್ಕೆ ತುಂಬಲಾರದ ನಷ್ಟ ಉಂಟಾಗುತ್ತಿದೆ. ಸೈಕಲ್ ಹೊಡೆಯುವುದು ಹೃದಯಕ್ಕೆ ಉತ್ತಮ ವ್ಯಾಯಾಮ ಎಂದು ಕೇಳಿದ್ದೇನೆ, ಇಂದು ಸಮಾಜಕ್ಕೆ ಉತ್ತಮ ಸಂದೇಶ ಕೊಡಲು ಹೊರಟಿರುವ ತಮಗೆಲ್ಲರಿಗೂ ಅಭಿನಂದಿಸುತ್ತಾ ಈ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದೇನೆ ಎಂದರು.
ಡಿಹೆಚ್ಓ ಡಾ.ರಾಜೇಶ್ ಸುರಗಿಹಳ್ಳಿ ಮಾತನಾಡುತ್ತಾ, ಈ ಸಾಲಿನ ದೇಯ ವಾಕ್ಯ “ಹೃದಯಕ್ಕಾಗಿ ಹೃದಯವನ್ನು ಬಳಸಿ” ನಮ್ಮ ಹೃದಯವನ್ನು ಕಾಪಾಡಿಕೊಳ್ಳುವ ಕಾರ್ಯದಲ್ಲಿ ತೊಡಗಿಸಿ ಕೊಂಡಾಗ ಉತ್ತಮ ಜೀವನ ನಡೆಸಲು ಸಾದ್ಯ ಎಂದರು.
ಐಎಮ್ಎ ಅಧ್ಯಕ್ಷರಾದ ಡಾ.ಅರುಣ್ ರವರು, ಇಪ್ಪತ್ ನಾಲ್ಕು ಗಂಟೆ ಕಾರ್ಯನಿರ್ವಹಿಸುವ ಹೃದಯಕ್ಕೆ ಅದಕ್ಕೆ ಅವಶ್ಯಕವಾದ ನೆಮ್ಮದಿ, ಸಮತೊಲನ ಆಹಾರ, ಪ್ರತಿ ನಿತ್ಯ ಕನಿಷ್ಠ ಅರ್ಧ ತಾಸು ವ್ಯಾಯಾಮ, ಯೋಗ, ಧ್ಯಾನ ರೂಡಿಸಿಕೊಂಡು, ಜಂಕ್ ಪುಡ್ ನಿಂದ ದೂರವಿದ್ದರೆ ಉತ್ತಮವಾಗಿ ಕಾರ್ಯ ನಿರ್ವಹಿಸಲು ಅನುಕೂಲ ಮಾಡಿ ಕೊಟ್ಟಂತಾಗುತ್ತದೆ ಎಂದರು.
ಐಎಮ್ಎ ಕಾರ್ಯದರ್ಶಿ ಡಾ.ರಕ್ಷರಾವ್, ವಿಪರೀತ ಸುಸ್ತು, ತೀಕ್ಷಣ ನೋವು ಕ್ರಮೇಣ ಭುಜ ಕತ್ತಿಗೆ ಹರಡಿದರೆ, ಅಲಸ್ಯ ಬಂದರೆ, ಭಾರವಾದ ಅನುಭವ, ತಂಪು ವಾತಾವರಣದಲ್ಲಿ ಮೈ ಬೆವರಿದರೆ ತಕ್ಷಣ ವ್ಯದ್ಯರನ್ನು ಸಂಪರ್ಕಿಸಿ ಎಂದರು.
ಡಾ.ಮಲ್ಲಪ್ಪನವರು ವರ್ಷಕೊಮ್ಮೆಯಾದರು ಆರೋಗ್ಯ ತಪಾಸಣೆ ಮಾಡಿಸಿ, ಧೂಮಪಾನ, ಮದ್ಯಪಾನ ವ್ಯಸನಿಗಳಾಗಬೇಡಿ, ಮನಸ್ಸಿಗೆ ಸಾಕಷ್ಟು ವಿಶ್ರಾಂತಿ ನೀಡಿ ಎಂದರು.
ಡಾ.ದಿನೇಶ್, ಡಿಎಸ್ ಡಿಒ ಸುರೇಶ್, ಸೈಕಲ್ ಕ್ಲಬ್ ಅಧ್ಯಕ್ಷ ಶ್ರೀಕಾಂತ್, ಗಿರೀಶ್, ಲೋಕೇಶ್, ನಟರಾಜ್, ಮನೋಜ್, ಸಂಜನ, ರವಿ, ನರಸಿಂಹಮೂರ್ತಿ, ಯೂತ್ ಹಾಸ್ಟೆಲ್ ಛೇರ್ಮನ್ ವಾಗೇಶ್, ಸುರೇಶ್, ಜಿ.ವಿಜಯಕುಮಾರ್, ರವೀಂದ್ರನಾಡಿಗ್ ಹಾಗೂ ನೂರಾರು ಸೈಕಲ್ ಜಾತ ಜನ ಮನ ಸೆಳೆಯಿತು. ಉತ್ತಮ ಸಂದೇಶ ರವಾನಿಸಿತು.