ಶಿವಮೊಗ್ಗ ನಗರದ ಗಾಂಧಿ ಬಜಾರಿನಲ್ಲಿರುವ ಬಟ್ಟೆ ಮಾರುಕಟ್ಟೆಯ ಟೆಂಡರ್ ಅವಧಿಯು ಪೂರ್ಣಗೊಂಡು ನಂತರವೂ ಟೆಂಡರ್ ದಾರ ವರ್ತಕರ ಬಳಿ ಕರ ವಸೂಲಿ ಮಾಡುತ್ತಿರುವುದನ್ನು ಯುವ ಕಾಂಗ್ರೇಸ್ ಖಂಡಿಸುತ್ತದೆ.
2020 ಫೇಬ್ರವರಿಯಿಂದ 2021 ಫೇಬ್ರವರಿವರೆಗೆ ಟೆಂಡರ್ ಅವಧಿ ಇದ್ದು ಈಗಾಗಲೇ ಟೆಂಡರ್ ಅವಧಿ ಮುಗಿದು ನಾಲ್ಕುತಿಂಗಳು ಕಳೆದಿದ್ದು ಸಂಬಂಧಪಟ್ಟ ಅಧಿಕಾರಿಗಳು ಈಗಾಗಲೇ ಟೆಂಡರ್ ಕರೆಯಲು ಸಿದ್ಧತೆ ಮಾಡಿಕೊಂಡಿದ್ದೆವೆಂದು ವರ್ತಕರು ಹಾಗೂ ಸಾರ್ವಜನಿಕರು ಕೇಳಿದಾಗ ಹೇಳುತ್ತಿದ್ದು ಆದರೆ ಟೆಂಡರ್ ಅವಧಿ ಮುಗಿದ ಮೇಲೂ ಗುತ್ತಿಗೆದಾರನು ಕರ ವಸೂಲಿ ಮಾಡುತ್ತಿರುವುದನ್ನು ಪ್ರಶ್ನಿಸಿದ ವರ್ತಕರಿಗೆ ಹಾಗೂ ಸಾರ್ವಜನಿಕರಿಗೆ ಧಮಕಿ ಹಾಕುವುದಲ್ಲದೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಟೆಂಡರ್ ಕರೆಯುವವರೆಗೂ ನಾನೇ ಮುಂದುವರೆಸುಕೊಂಡು ಹೋಗಲು ವರ್ಕ ಆರ್ಡರ್ ನೀಡುವುದಾಗಿ ಅಧಿಕಾರಿಗಳು ಹೇಳಿದ್ದಾರೆ ಎಂದು ಗುತ್ತಿಗೆದಾರನು ಧಮಕಿ ಹಾಕುವ ರೀತಿಯಲ್ಲಿ ವರ್ತಕರಿಗೆ ಬೆದರಿಕೆ ಹಾಕುತ್ತಿದ್ದು, ಪಾಲಿಕೆಗೆ ಸೇರಿದ ಅಧಿಕಾರಿಗಳ ಬಳಿ ವರ್ತಕರು ಮಾಹಿತಿಯನ್ನು ಕೇಳಿದರೆ ಸ್ಪಷ್ಟ ಉತ್ತರ ನೀಡದೆ ಗುತ್ತಿಗೆದಾರನಿಗೆ ಅಧಿಕಾರಿಗಳೆ ವರ್ತಕರು ಕೇಳುವ ಮಾಹಿತಿಯನ್ನ ಗುತ್ತಿಗೆದಾರನಿಗೆ ಫೋನ್ ಮುಖಾಂತರ ತಿಳಿಸುವುದನ್ನು ನೋಡಿದರೆ ಮೇಲ್ನೊಟಕ್ಕೆ ಅಧಿಕಾರಿಗಳೆ ಗುತ್ತಿಗೆದಾರರೊಂದಿಗೆ ಬಾಗಿಯಾಗಿ ವರ್ತಕರಿಗೆ ಕರ ವಸೂಲಿ ರೂಪದಲ್ಲಿ ತೊಂದರೆ ಕೊಡುತ್ತಿರುವುದು ಎದ್ದು ತೋರುತ್ತಿದೆ.
ಈಗಾಗಲೇ ಕಳೆದ ಎರಡು ದಿನಗಳ ಹಿಂದೆ ವರ್ತಕರು ಮತ್ತು ಗುತ್ತಿಗೆದಾರರ ನಡುವೆ ಮಾತಿನ ಚಕಮಕಿ ನಡೆದು ನಿನ್ನೆ ರಾತ್ರಿ ಪುಡಿ ರೌಡಿಗಳನ್ನ ಗುತ್ತಿಗೆದಾರನು ಕರೆದುಕೊಂಡು ಬಂದು ವರ್ತಕರು ಹಾಗೂ ಈ ವಿಚಾರವಾಗಿ ಪ್ರಶ್ನಿಸಿದ ಸಾರ್ವಜನಿಕರ ಮೇಲೆ ಹಲ್ಲೆ ನಡೆಸಲು ಮುದ್ದಾಗಿದ್ದು ಇಂತಹ ಗುತ್ತಿಗೆದಾರನ ವಿರುದ್ಧ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಯುವ ಕಾಂಗ್ರೇಸ್ ಆಗ್ರಹಿಸುತ್ತದೆ. ಇಲ್ಲಾವದಲ್ಲಿ ಮುಂದಿನ ದಿನಗಳಲ್ಲಿ ಮಹಾನಗರ ಪಾಲಿಕೆಯ ಎದುರು ವರ್ತಕರ ಪರವಾಗಿ ಯುವ ಕಾಂಗ್ರೇಸ್ ನಿಂದ ಉಗ್ರವಾಗಿ ಪ್ರತಿಭಟಿಸಲಾಗುವುದೆಂದು ಎಚ್ಚರಿಸುತ್ತಿದ್ದೆವೆ.

ಈ ಸಂದರ್ಭದಲ್ಲಿ ಶಿವಮೊಗ್ಗ ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾದ H P ಗಿರೀಶ್, ಶಿವಮೊಗ್ಗ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಎಸ್ ಕುಮರೇಶ್, ವರ್ತಕರಾದ ವಿನಯ್, ಮಂಜುನಾಥ್, ಸತೀಶ್, ಶಕ್ತಿ, ನಾಗರಾಜ್, ಉಪಸ್ಥಿತರಿದ್ದರು.

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153