ಶಿವಮೊಗ್ಗ ನಾಡಹಬ್ಬ ದಸರಾ ಪ್ರಯುಕ್ತ ಮಹಾನಗರ ಪಾಲಿಕೆಯಿಂದ ಏರ್ಪಡಿಸಿದ್ದ ಶ್ವಾನ ಪ್ರದರ್ಶನದಲ್ಲಿ ಪ್ರಮುಖ ಆಕರ್ಷಣೆಯಾಗಿ ಬೆಂಗಳೂರಿನಿಂದ ಸುಮಾರು ಹತ್ತು ಕೋಟಿ ಬೆಲೆಬಾಳುವ ಶ್ವಾನವನ್ನು ಪ್ರದರ್ಶಿಸಲಾಯಿತು.
ಈ ಶ್ವಾನವನ್ನು ಬೆಂಗಳೂರಿನಿಂದ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಎಂ ಶ್ರೀಕಾಂತ್ ರವರು ಈ ಪ್ರದರ್ಶನಕ್ಕೆ ಕರೆತಂದಿದ್ದರು.ಈ ಸಂದರ್ಭದಲ್ಲಿ ಬಸವರಾಜ್ , ನರಸಿಂಹ , ವಿನಯ್ ತಾನ್ಲೆ ಮುಂತಾದವರು ಉಪಸ್ಥಿತರಿದ್ದರು.