ಶಿವಮೊಗ್ಗ ನಗರದ, ಬಿ.ಹೆಚ್. ರಸ್ತೆಯ ಮೈನ್ ಮಿಡ್ಲ್ ಸ್ಕೂಲ್ (ಸರಕಾರಿ ಕನ್ನಡ ಮತ್ತು ಆಂಗ್ಲಾ ಮಾಧ್ಯಮ ಪ್ರಧಾನ ಹಿರಿಯ ಪ್ರಾಥಮಿಕ ಶಾಲೆ) ಯಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ 154ನೇ ವರ್ಷದ ಮತ್ತು ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿರವರ119ನೇ ವರ್ಷದ ಜನ್ಮದಿನಾಚರಣೆಯ ಮೂಲಕ ಮಹಾನಾಯಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೌರವ ಪೂರ್ವಕವಾಗಿ ನಮನವು ಸಲ್ಲಿಸಿ ಇವರ ಸಾಧನೆಗಳ ನುಡಿ ನಮನದ ಮೂಲಕ ಸ್ಮರಿಸಲಾಯಿತು. ನಂತರ ಶಾಲೆಯ ಹಳೇ ವಿದ್ಯಾರ್ಥಿಗಳಿಂದ ಎಲ್ಲರಿಗೂ ಸಿಹಿ ಹಂಚಲಾಯಿತು.

ಈ ಕಾರ್ಯಕ್ರಮದಲ್ಲಿ ಮೈನ್ ಮಿಡ್ಲ್ ಸ್ಕೂಲ್ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಚನ್ನವೀರಪ್ಪ ಗಾಮನಗಟ್ಟಿ, ಉಪಾಧ್ಯಕ್ಷ ಪರಶುರಾಮ, ಚಂದ್ರಶೇಖರ್, ಶಿಕ್ಷಕರು ಪ್ರಕಾಶ್, ಮಂಜುನಾಥ್, ಕವಿತಾ, ಸ್ವರ್ಣಲತಾ, ಮಕ್ಕಳು ಹಾಗೂ ಇತರರೂ ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…