ಕನಕಪುರ ನ್ಯೂಸ್…
ಕನಕಪುರ: ವಿಜಯ ದಶಮಿಯಂದು
ಶಮೀವೃಕ್ಷ ಪೂಜೆ ನೆರವೇರಿಸಿದರು.ನಂತರ ಆಶೀರ್ವಚನ ನೀಡಿದ ಶ್ರೀ ದೇಗುಲಮಠದ ಕಿರಿಯ ಪರಮಪೂಜ್ಯ ಶ್ರೀ ಚನ್ನಬಸವಮಹಾಸ್ವಾಮಿಗಳು ನವರಾತ್ರಿಯ ದಿನಗಳಂದು ಎಲ್ಲಾ ಪೂಜೆಗಳು ಎಂದಿನಂತೆ ನಮ್ಮ ಹಿರಿಯ ಪರಮಪೂಜ್ಯ ಡಾ. ಶ್ರೀ ಮುಮ್ಮಡಿ ನಿರ್ವಾಣಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ವಿಜಯ ದಶಮಿ ಪ್ರಯುಕ್ತ ರಾಜೋಪಚಾರ, ಭಜನೆ, ಗುರು ಶ್ರೀರಕ್ಷೆ, ಶಮೀವೃಕ್ಷ ಪೂಜೆ, ಪರಮಪೂಜ್ಯ ರಿಂದ ಭಕ್ತರಿಗೆ ಬನ್ನಿ ಬಂಗಾರ ಪಾತ್ರೆ ವಿತರಣೆ ಮಾಡುವ ಸಂಪ್ರದಾಯ ನಮ್ಮ ಶ್ರೀ ಮಠದಲ್ಲಿ ಹಿಂದಿನ ನಡೆಯುವುದು ಹಾಗೆ ಈ ದಿನ ವಿಜಯದ ಸಂಕೇತವಾಗಿರುವ ಶರನ್ನವರಾತ್ರಿ ವಿಜಯದಶಮಿಯ ದಸರಾ ಉತ್ಸವದ ಆಚರಣೆಯ ಸಮಯದಲ್ಲಿ ಅನೇಕ ವಿವಿಧ ರೂಪಗಳ ದೇವಿಗೆ
ಅರ್ಚನೆಯು ಆಯಾ ದಿನಗಳಲ್ಲಿ ನಡೆಯುತ್ತದೆ.ಇದರ ಜೊತೆಯಲ್ಲಿಯೇ ಅಂತಿಮ ದಿನದಂದು ಶಮೀ
ಬನ್ನಿ ವೃಕ್ಷದ ಪೂಜೆಯೂ ಕೂಡ ನಡೆಯುತ್ತದೆ.
ಸಾಧಾರಣವಾಗಿ ಧರ್ಮ ಪರಂಪರೆಯಲ್ಲಿ ಅಶ್ವಥವೃಕ್ಷ
ಅರಳಿ ಮರಕ್ಕೆ ವಿಶೇಷವಾದ ಗೌರವವು ಇರುತ್ತದೆ ಬಹುತೇಕ ಎಲ್ಲಾ ಸಾಂಪ್ರದಾಯಿಕ ದೇವಾಲಯ
ಗಳಲ್ಲಿಯೂ ಅಶ್ವಥವೃಕ್ಷ ಅರಳಿ ಮರ ಇರುತ್ತದೆ. ಆದಾಗ್ಯೂ, ಶರನ್ನವರಾತ್ರಿಯ ಆಚರಣೆಯಲ್ಲಿ
ಶಮೀ ಬನ್ನಿ ವೃಕ್ಷಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ ನಮ್ಮ ದೇಶದ ಹಬ್ಬಗಳು ನಮ್ಮ ಪ್ರಕೃತಿ ಪಂಚಭೂತ ಗಳನ್ನು ಒಳಗೊಂಡಂತೆ
ಮನುಷ್ಯನ ದೇಹದ ಮನಸ್ಸು, ಪ್ರಾಣಿ,ಪಕ್ಷಿ, ಗಿಡ-ಮರಗಳನ್ನು ಒಳಗೊಂಡಿದೆ ಆಗಾಗಿ ನಾವು ಈ
ದಿನ ಬಂಗಾರವೆಂದು ಕರೆಯುವ ಶಮೀ ವೃಕ್ಷ ಪೂಜೆ ಮಾಡಿಲಾಗಿದೆ.ಸಮಾಜದಲ್ಲಿ ಒಳ್ಳೆಯತನಕ್ಕೆ
ಸದಾ ಗೆಲುವು ದೊರೆಯುತ್ತದೆ ಎನ್ನುವುದನ್ನು ಸಂಕೇತಿಸುವ ವಿಜಯದಶಮಿ ನಾಡಿಗೆ ಹಾಗೂ
ಜನರಿಗೆ ಸದಾ ಒಳಿತಾಗುವಂತೆ ಹರಸಲಿ,ಎಲ್ಲರ ನೋವು, ದುಃಖ, ಸಂಕಷ್ಟಗಳನ್ನು ಪರಿಹರಿಸಿ ಜಗನ್ಮಾತೆ
ಎಲ್ಲರಿಗೂ ಸನ್ಮಂಗಳವನ್ನು ಕರುಣಿಸಲಿ, ಎಲ್ಲರಿಗೂ ವಿಜಯವನ್ನು ಅನುಗ್ರಹಿಸಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಹೆಬ್ಬನಿ ತೋಟಹಳ್ಳಿ, ಅತ್ತಹಳ್ಳಿ,
ಡಿ ಹಲಸಹಳ್ಳಿ, ರಾಗಿ ಬೊಮ್ಮನಹಳ್ಳಿ, ಸೋಮನಹಳ್ಳಿ, ಕುಂದೂರು ಮಠಗಳ ಸ್ವಾಮೀಜಿಗಳು ದಿವ್ಯ ಉಪಸ್ಥಿತಿಯಲ್ಲಿ ಹರಗುರು ಚರರ್ಮೂತಿಗಳು
ಸೇರಿದಂತೆ ನೂರಾರು ಭಕ್ತರು ನೆರೆದಿದ್ದರೂ .