
ಬೆಂಗಳೂರಿನ ಅರಮನೆ ಮೈದಾನದಲ್ಲಿ ನೆಡೆಯುತ್ತಿರುವ ರಾಜ್ಯ ಕಾರ್ಯಕಾರಿಣಿಯಲ್ಲಿ ಸಂಸದರಾದ ಬಿ. ವೈ ರಾಘವೇಂದ್ರ ರವರು ಭಾಗವಹಿಸಿ, ಸ್ವಾತಂತ್ರ್ಯ ವೀರ ಸಾವರ್ಕರ್ ಅವರ ಜೀವನ ಕಥೆಯನ್ನು ಸಾರುವ ಪ್ರದರ್ಶಿನಿಯನ್ನು ವೀಕ್ಷಿಸಿ ‘ಸಮೃದ್ಧ ಸಾಹಿತ್ಯದ’ ಪುಸ್ತಕವನ್ನು ಖರೀದಿಸಿದರು.

ಈ ಸಂದರ್ಭದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರ, ಸಣ್ಣ ನೀರಾವರಿ ಸಚಿವರಾದ ಜೆ. ಸಿ ಮಾಧುಸ್ವಾಮಿ ,ಮಾಜಿ ಸಚಿವರು, ಶಿವಮೊಗ್ಗ ಶಾಸಕರಾದ ಕೆ. ಎಸ್ ಈಶ್ವರಪ್ಪನವರು, ರಾಜ್ಯಸಭಾ ಸದಸ್ಯರಾದ ಜಗ್ಗೇಶ್ ಅವರು, ಉತ್ಸಾಹಿ ಯುವ ಮೋರ್ಚಾ ಕಾರ್ಯಕರ್ತರು ಮತ್ತು ಪ್ರಮುಖರು ಉಪಸ್ಥಿತರಿದ್ದರು.