ಶಾಸಕರಾದ ಕೆ ಎಸ್ ಈಶ್ವರಪ್ಪ ರವರು ಆಶ್ರಯ ಸಮಿತಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬೊಮ್ಮನಕಟ್ಟೆಯಲ್ಲಿ A ಯಿಂದ G ಬ್ಲಾಕ್ ವರೆಗೆ 20 ವರ್ಷ ಕಳೆದರೂ ಮನೆ ಕಟ್ಟದ ಹಿನ್ನೆಲೆಯಲ್ಲಿ 543 ಖಾಲಿ ನಿವೇಶನಗಳನ್ನು ಆಶ್ರಯ ಸಮಿತಿ ಕೆಲವು ದಿನಗಳ ಹಿಂದೆ ರದ್ದುಗೊಳಿಸಿತ್ತು.
ನಂತರ ಕೆಲವು ಸಂತ್ರಸ್ತರು ಶಾಸಕ ಕೆ ಎಸ್ ಈಶ್ವರಪ್ಪನವರ ಹತ್ತಿರ ನಮಗೆ ಸ್ವಲ್ಪ ದಿನಗಳ ಕಾಲಾವಕಾಶ ಕೊಡಿ ಎಂದು ಸಂತ್ರಸ್ತರು ಕೇಳಿದ್ದಾರೆ. ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಈಶ್ವರಪ್ಪನವರು 3 ತಿಂಗಳು ಕಾಲಾವಕಾಶ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.3 ತಿಂಗಳ ಒಳಗೆ ತಮ್ಮ ನಿವೇಶನದಲ್ಲಿ ಮನೆಗಳನ್ನು ಕಟ್ಟಿಕೊಳ್ಳಬೇಕು. ಇಲ್ಲವಾದಲ್ಲಿ ಅ ನಿವೇಶನವನ್ನು ಬೇರೆಯವರಿಗೆ ಹಂಚಿಕೆ ಮಾಡಲಾಗುತ್ತದೆ ಎಂದು ತಾಕಿತು ಮಾಡಿದರು.
ಗೋವಿಂದಪುರದಲ್ಲಿ ನಿರ್ಮಾಣವಾಗುತ್ತಿರುವ ಎರಡು ಅಂತಸ್ತಿನ 1200 G+2 ಮನೆಗಳು ಡಿಸೆಂಬರ್ ಅಂತ್ಯದೊಳಗೆ ಮುಕ್ತಾಯಗೊಳ್ಳಲಿದೆ. ಮೂಲಭೂತ ಸೌಕರ್ಯ ನೀರು , ವಿದ್ಯುತ್ , ಯುಜಿಡಿ ಸಂಪರ್ಕ ಆದಷ್ಟು ಬೇಗ ಕಲ್ಪಿಸಬೇಕು ಎಂದು ಕಾಂಟ್ರಾಕ್ಟ್ ದಾರರಿಗೆ ಕೆ ಎಸ್ ಈಶ್ವರಪ್ಪ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತರದ ಮಾಯಣ್ಣ ಗೌಡ , ಆಶ್ರಯ ಸಮಿತಿ ಅಧ್ಯಕ್ಷರಾದ ಶಶಿಧರ್ ಬಿಜೆಪಿ ಮುಖಂಡರಾದ ಚಂದ್ರಪ್ಪ ಮುಂತಾದವರು ಉಪಸ್ಥಿರಿದ್ದರು.