ಸಾಧನೆಗೆ ಏಕಾಗ್ರತೆ ಮತ್ತು ಸಾಧಿಸುವ ಛಲ ಇರಬೇಕು. ಆತ್ಮವಿಶ್ವಾಸದಿಂದ ಮುನ್ನಡೆದರೆ ಯಶಸ್ಸು ನಿಶ್ಚಿತ ಎಂದು ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಸಾಧಕ ಅಭಿಷೇಕ್ ಹೇಳಿದರು.ಇಂಡಿಯಾಸ್ ವರ್ಲ್ಡ್ ರೆಕಾರ್ಡ್ ಹಾಗೂ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಸಾಧನೆ ಮಾಡಿದ ಶಿವಮೊಗ್ಗದ ಅಭಿಷೇಕ್ ಅವರಿಗೆ ನಮ್ಮ ಟಿವಿ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದರು.ಲಾಕ್‌ಡೌನ್ ಸಂದರ್ಭದಲ್ಲಿ 87 ಗಂಟೆ, 35 ನಿಮಿಷದಲ್ಲಿ 4,04,882 ನವಣೆ ಕಾಳುಗಳನ್ನು ಎಣಿಸುವ ಮೂಲಕ ವಿಶೇಷ ಸಾಧನೆ ಮಾಡಲು ಸಾಧ್ಯವಾಯಿತು. ತಂದೆ, ತಾಯಿ, ಸ್ನೇಹಿತರ ಸ್ಫೂರ್ತಿ ಹಾಗೂ ಹಿಂದಿನವರು ಮಾಡಿದ ಸಾಧನೆ ನೋಡಿ ಪ್ರೇರಿತರಾಗಿ ಸಾಧನೆ ಮಾಡಿದೆ ಎಂದು ತಿಳಿಸಿದರು.
ಲಾಕ್‌ಡೌನ್ ಸಂದರ್ಭದಲ್ಲಿ ಒಂದು ಕೆಜಿ ನವಣೆಯಲ್ಲಿ ಎಷ್ಟು ಕಾಳುಗಳಿವೆ ಎಂಬುದನ್ನು ಎಣಿಸಬೇಕೆಂಬ ಆಲೋಚನೆ ಬಂತು. ಪ್ರತಿ ಪ್ಯಾಕೇಟ್‌ನಲ್ಲಿ 500 ಕಾಳುಗಳನ್ನು ಬೇರ್ಪಡಿಸಿ, ಅತಿ ಸಣ್ಣದಾದ ಮತ್ತು ಹೆಚ್ಚು ತೂಕವಿಲ್ಲದ ನವಣೆ ಕಾಳುಗಳನ್ನು ಕೂಡ ಎಣಿಸಿದೆ ಎಂದರು.
ಒAದು ಕೆ.ಜಿ. ನವಣೆಯಲ್ಲಿ 4,04,882 ಕಾಳು ಏಣಿಸಲು 87 ಗಂಟೆ 35 ನಿಮಿಷ ತೆಗೆದುಕೊಂಡಿದ್ದು, ಇದನ್ನು ಐಡಬ್ಲ್ಯೂಆರ್ ಫೌಂಡೇಷನ್ ನವರು ವಿಡಿಯೋ ಕಾಲ್ ಮಾಡಿ ಪರೀಕ್ಷೆ ಕೂಡ ಮಾಡಿದ್ದಾರೆ ಎಂದು ತಿಳಿಸಿದರು.
ಪ್ರಶಸ್ತಿ ಬಂದಿರುವುದು ತುಂಬಾ ಸಂತೋಷವನ್ನುAಟು ಮಾಡಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಸಾಧನೆ ಮಾಡಲು ಸಾಕಷ್ಟು ಅವಕಾಶಗಳಿವೆ. ಮುಂದಿನ ದಿನಗಳಲ್ಲಿ ವಿಶೇಷ ಸಾಧನೆಗಳನ್ನು ಮಾಡುವತ್ತ ಗಮನ ಹರಿಸುತ್ತೇನೆ. ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಹೆಚ್ಚಿನ ಸಾಧನೆ ಮಾಡುವ ಆಸೆಯಿದೆ ಎಂದರು.
ವಿಶೇಷ ಸಾಧನೆ ಮಾಡಿದ ಶಿವಮೊಗ್ಗದ ಗಾಂಧಿ ಬಜಾರ್‌ನ ಅಶೋಕ್ ರಸ್ತೆ ನಿವಾಸಿ ಅಭಿಷೇಕ್ ಅವರಿಗೆ ಸನ್ಮಾನಿಸಲಾಯಿತು. ನಮ್ಮ ಟಿವಿ ಶಿವಮೊಗ್ಗ ಮುಖ್ಯಸ್ಥ ವಿ.ಜಗದೀಶ್, ನಿರೂಪಕ ಜಿ.ವಿಜಯ್‌ಕುಮಾರ್, ಶ್ರೀಕಾಂತ್, ಕೋಟ್ರೇಶ್, ಸತೀಶ್, ಸುನೀತಾ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ
CCTV SALES & SERVICE
9880074684
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153