ಕೂಡ್ಲಿಗೆರೆ ನ್ಯೂಸ್…
ಭದ್ರಾವತಿ ತಾಲೂಕು ಕೂಡ್ಲಿಗೆರೆ ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷರಾಗಿ ಶ್ರೀಮತಿ ಪಾರ್ವತಿ ಬಾಯಿ ನಂಜನಾಯ್ಕ ರವರು ಅವಿರೋದವಾಗಿ ಆಯ್ಕೆಯಾದರು.
ಒಪ್ಪಂದದಂತೆ ಹಿಂದಿನ ಅಧ್ಯಕ್ಷರಾದ ಉಮಾದೇವಿ ರವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು.ಪ್ರಭಾರಿ ಅಧ್ಯಕ್ಷರಾದ ನಾಗರಾಜ ಗೌಡ ರವರು ಹೊಸ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು. ಚುನಾವಣೆಯನ್ನು ತಾಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ರಮೇಶ್ ರವರು ನಡೆಸಿಕೊಟ್ಟರು. ಪಂಚಾಯ್ತಿ ಯಲ್ಲಿ ಬಹುಮತ ಹೊಂದಿರುವ ಕಾಂಗ್ರೆಸ್ ಈ ಬಾರಿಯೂ ಸುಲಭವಾಗಿ ಅಧಿಕಾರ ಪಡೆದುಕೊಂಡಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾದ ನಾಗರಾಜ್ ಗೌಡ,ಮಾಜಿ ಅಧ್ಯಕ್ಷರಾದ ಉಮಾದೇವಿ, ಮಲಕ್, ಜಯಣ್ಣ ಮಾಜಿ ಉಪಾಧ್ಯಕ್ಷರಾದ ಕುಬೇರ್ ನಾಯ್ಕ, ಸದಸ್ಯರಾದ ಸ್ವಾಮೀನಾಥಾನ್, ರುದ್ರೇಶ, ವಿಶ್ವನಾಥ, ನೀಲಬಾಯಿ, ಗೌರಮ್ಮ, ಸಿದ್ದಮ್ಮ, ಭಾಗ್ಯಮ್ಮ ವಿ. ಎಸ್. ಎಸ್. ಎನ್ ಅಧ್ಯಕ್ಷರಾದ ಎನ್ ಹೆಚ್ ಮಹೇಶಣ್ಣ,ಗ್ರಾಮದ ಪ್ರಮುಖರಾದ ಕಿರ್ಯಾನಾಯ್ಕ, ಟಾಕ್ರ ನಾಯ್ಕ , ದೇವೇಂದ್ರಪ್ಪ, ವೀರಪ್ಪನ್, ತಿಪ್ಪೇಶ್, ನಾಗೇಶ್, ರಾಮಚಂದ್ರಪ್ಪ, ಅರಕೆರೆ ಲಕ್ಷ್ಮೀಪತಿ,ಪ್ರವೀಣ್ ನಾಯ್ಕ, ಕೋಡಿಹಳ್ಳಿ, ಕಲ್ಪನಹಳ್ಳಿ ಹಾಗೂ ಕೂಡ್ಲಿಗೆರೆಯ ಗ್ರಾಮಸ್ಥರು ಶುಭ ಕೋರಿದರು.