ಶಿವಮೊಗ್ಗ: ಮಹಿಳೆಯರು ಸ್ವಂತ ಸಾಮಾರ್ಥ್ಯದಿಂದ ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಜೀವನದಲ್ಲಿ ಪ್ರಗತಿ ಸಾಧಿಸಬೇಕು. ಸಮಾಜದಲ್ಲಿ ಮಾದರಿ ವ್ಯಕ್ತಿಯಾಗಿ ರೂಪುಗೊಳ್ಳಬೇಕು ಎಂದು ರೋಟರಿ ಜಿಲ್ಲಾ ಗವರ್ನರ್ ಡಾ. ಜಯಗೌರಿ ಅಭಿಪ್ರಾಯ ಪಟ್ಟರು.
ಶಿವಮೊಗ್ಗ ನಗರದಲ್ಲಿ ರೋಟರಿ ಜಿಲ್ಲಾ ಗವರ್ನರ್ ಡಾ. ಜಯಗೌರಿ ಅವರ ಮಾತಾಪಿತರ ಸ್ಮರಣಾರ್ಥ ಮಹಿಳಾ ಸಬಲೀಕರಣದ ಯೋಜನೆ ಮುಖಾಂತರ 120 ಹೊಲಿಗೆ ಯಂತ್ರ ವಿತರಣೆಯ ಬೃಹತ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಿಳೆಯರು ತಮ್ಮಲ್ಲಿರುವ ಪ್ರತಿಭೆ ಹಾಗೂ ಕೌಶಲ್ಯವನ್ನು ಅರಿತುಕೊಳ್ಳಬೇಕು. ಸಮಾಜದಲ್ಲಿ ಗೌರವಯುತ ಸ್ಥಾನದೊಂದಿಗೆ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಬಲ್ಲಳು ಎಂಬುದನ್ನು ತೋರಿಸಬೇಕು. ಉತ್ತಮ ಸಾಧನೆ ಮಾಡಲು ಮುಂದಾಗಬೇಕು ಎಂದು ತಿಳಿಸಿದರು.
ರೋಟರಿ ಸಂಸ್ಥೆ ವತಿಯಿಂದ ಆಸಕ್ತ ಮಹಿಳೆಯರಿಗೆ ವಾಹನ ಚಾಲನಾ ಪರವನಾಗಿ ಮಾಡಿಸಿಕೊಡಲಾಗುವುದು ಎಂದರು.
10 ಲಕ್ಷ ವೆಚ್ಚದಲ್ಲಿ 4 ಜಿಲ್ಲೆಯಲ್ಲಿ ಹೊಲಿಗೆ ಯಂತ್ರ ವಿತರಣೆಯ ಕಾರ್ಯಕ್ರಮದ ನಡೆಯುತ್ತಿದ್ದು, ಈಗಾಗಲೇ ಉಡುಪಿ, ಚಿಕ್ಕಮಗಳೂರು ಮತ್ತು ಹಾಸನದಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಹೊಲಿಗೆ ಯಂತ್ರ ವಿತರಿಸಲಾಗಿದೆ. ಇದೀಗ ಶಿವಮೊಗ್ಗ ನಗರದ ರಾಷ್ಟಿçÃಯ ಪ್ರೌಡಶಾಲಾ ಆವರಣದಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ತಂದೆ ದಿ. ಡಾ ಎ.ಕೃಷ್ಣರಾವ್ ಹಾಗೂ ತಾಯಿ ದಿ. ಎ.ಪದ್ಮಾರಾವ್ ಅವರ ಪ್ರೇರಣೆ, ಪ್ರೋತ್ಸಾಹ ನಾನು ಈ ಮಟ್ಟದಲ್ಲಿ ಮುಂದುವರಿಯಲು ಕಾರಣ ಹಾಗೂ ಹೆಣ್ಣು ಮಕ್ಕಳು ಧ್ಯೆರ್ಯದಿಂದ ಸ್ವಂತ ಪರಿಶ್ರಮದಿಂದ ದುಡಿದು ಸಮಾಜಕ್ಕೆ ಉಪಕಾರಿಯಾಗಿ ಜೀವನ ನಡೆಸಬೇಕು ಎಂದರು.
ಈ ಸಮಾರಂಭದ ವೇದಿಕೆಯಲ್ಲಿ ಸಹಾಯಕ ಗವರ್ನರ್ ಸುನಿತಾ ಶ್ರೀಧರ್ ಮಾತನಾಡಿ, ರೋಟರಿ ವಲಯ 10 ಮತ್ತು 11ರ ಶಿವಮೊಗ್ಗ ಎಲ್ಲ ರೋಟರಿ ಅಧ್ಯಕ್ಷರು ಹಾಗೂ ಸದಸ್ಯರು ಈ ಕೊಡುಗೆ ಸದ್ವಿನಿಯೋಗ ಆಗುವ ರೀತಿಯಲ್ಲಿ ನೋಡಿಕೊಳ್ಳುವ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಹೇಳಿದರು.
ರೋಟರಿಯ ಅಧ್ಯಕ್ಷರಾದ ಎನ್.ವಿ.ಭಟ್ಟ, ವೀಣಾ ಸುರೇಶ, ಸರ್ಜಾಜಗದೀಶ, ಸುಮತಿ ಕುಮಾರಸ್ವಾಮಿ, ಚಂದ್ರು, ದೇವೇಂದ್ರಪ್ಪ, ಸುರೇಶ. ಎನ್ ಮತ್ತು ಮಂಜುಳಾ ರಾಜು, ಜಿ.ವಿಜಯಕುಮಾರ್, ಡಾ. ಕಾಂಚನಾ ಕುಲಕರ್ಣಿ ಮತ್ತು ಲಕ್ಷ್ಮೀನಾರಾಯಣ್ ಭಟ್ಟ ಉಪಸ್ಥಿತರಿದ್ದರು.