ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಶಿವಮೊಗ್ಗ ಸೈಕಲ್ ಕ್ಲಬ್ (ರಿ.), ಮಲ್ನಾಡ್ ಸೈಕಲ್ ಕ್ಲಬ್, ರೋಟರಿ ಕ್ಲಬ್ ಮತ್ತು ನಗರದ ಸಾರ್ವಜನಿಕರ ಸಹಯೋಗದಲ್ಲಿ ಸೈಕಲ್ ಜಾಥಾ ಕಾರ್ಯಕ್ರಮ ಯಶಸ್ವಿಯಾಯಿತು.

20 ರಂದು ವಿಶ್ವ ಆಸ್ಟಿಯೊಪೊರೋಸಿಸ್ ದಿನದ ಅಂಗವಾಗಿ ಆಯೋಜಿಸಿದ ಸೈಕಲ್ ಜಾಥಾ ಕಾರ್ಯಕ್ರಮದಲ್ಲಿ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಕೀಲು ಮತ್ತು ಮೂಳೆ ವಿಭಾಗದ ವೈದ್ಯರುಗಳಾದ ಡಾ. ಚೇತನ್ ಎಂ.ಎಲ್ ರವರು ಮಾತನಾಡಿ ದೇಹವು ಮೂಳೆ ಮತ್ತು ಮಾಂಸ ಖಂಡಗಳ ಹೊದಿಕೆಯಾಗಿದೆ. ಮೂಳೆಗಳ ಸವೆತದ ರೋಗವು ಆರಂಭಿಕ ಹಂತದಲ್ಲಿ ಯಾವುದೇ ಸೂಚನೆಗಳಿಲ್ಲದೆ ಬರುತ್ತದೆ. ಮೂಳೆಗಳ ಆರೈಕೆಯ ಬಗ್ಗೆ ಸೂಕ್ತ ಸಲಹೆಗಳನ್ನು ನೀಡಿದರು. ಡಾ. ಅಭಿಷೇಕ್ ಎಂ.ಬಿ ಯವರು ಮಾತನಾಡಿ ಕೀಲು ಮತ್ತು ಮೂಳೆಗಳ ಆರೈಕೆ ಮತ್ತು ಪೋಷಣೆಯ ಬಗ್ಗೆ ಹಾಗೂ ಮೂಳೆಗಳ ಸವೆತದಿಂದ ಉಂಟಾಗುವ ತೊಂದರೆಗಳ ಬಗ್ಗೆ ಮಾಹಿತಿ ನೀಡಿದರು. ಅಂಥಹ ತೊಂದರೆಗಳಿಗೆ ಲಭ್ಯವಿರುವ ಚಿಕಿತ್ಸಾ ವಿಧಾನಗಳ ಮಾಹಿತಿಯನ್ನು ಸಹ ನೀಡಿದರು.

ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವೈದ್ಯರುಗಳಾದ ಡಾ. ಗೋಪಾಲ್, ಡಾ. ಶ್ರೀವತ್ಸ, ಡಾ. ಶ್ರೀಶ ರಾವ್, ಡಾ. ರವಿ, ಡಾ. ಪ್ರವೀಣ್ ಕುಮಾರ್, ಡಾ. ಶರತ್, ಡಾ. ವಿವೇಕ್, ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಯುತ ವರ್ಗೀಸ್ ಪಿ. ಜಾನ್ ಹಾಗೂ ಆಡಳಿತಾಧಿಕಾರಿಗಳು, ಸಿಬ್ಬಂದಿಗಳು, ನಗರದ ಪ್ರತಿಷ್ಠಿತ ಸೈಕಲ್ ಕ್ಲಬ್‌ಗಳಾದ ಶಿವಮೊಗ್ಗ ಸೈಕಲ್ ಕ್ಲಬ್ (ರಿ.), ಮಲ್ನಾಡ್ ಸೈಕಲ್ ಕ್ಲಬ್ ಮತ್ತು ರೋಟರಿ ಕ್ಲಬ್ ಸದಸ್ಯರುಗಳು ಹಾಗೂ ನಗರದ ಸಾರ್ವಜನಿಕರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವಿಶ್ವ ಆಸ್ಟಿಯೊಪೊರೋಸಿಸ್ ದಿನದ ಅಂಗವಾಗಿ ಕ್ಲಿನಿಕ್‌ನಲ್ಲಿ ದಿನಾಂಕ ೨೯ನೇ ಅಕ್ಟೋಬರ್ ಶನಿವಾರದಂದು “ಉಚಿತ ಮೂಳೆ ಸಾಂದ್ರತಾ (ಬಿಎಂಡಿ) ಪರೀಕ್ಷೆಯನ್ನು ಮಾಡಲಾಗುತ್ತದೆ ಎಂದು ಮಾರ್ಕೇಟಿಂಗ್ ವಿಭಾಗದ ಮುಖ್ಯಸ್ಥರಾದ ಶ್ರೀಯುತ ರಾಜಾಸಿಂಗ್ ರವರು ತಿಳಿಸಿದರು.

ನಂತರ ಸೈಕಲ್ ಕ್ಲಬ್‌ಗಳ ಪದಾಧಿಕಾರಿಗಳಾದ ಶ್ರೀಯುತ ಶ್ರೀಕಾಂತ್ ಭಾರದ್ವಾಜ್ ಮತ್ತು ಶ್ರೀಯುತ ಪ್ರದೀಪ್ ಎಸ್. ರವರು, ಶ್ರೀಯುತ ವಿಜಯ್ ಕುಮಾರ್ ಮಾಜಿ ಸಹಾಯಕ ಗೌವರ್ನರ್ ರೋಟರಿ ಕ್ಲಬ್ ಶಿವಮೊಗ್ಗ, ಶ್ರೀಯುತ ಚಂದ್ರು ಅಧ್ಯಕ್ಷರು ರೋಟರಿ ಕ್ಲಬ್ ಶಿವಮೊಗ್ಗ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಾಥಾವು ನಾರಾಯಣ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್‌ನಿಂದ ಪ್ರಾರಂಭಗೊAಡು ತೀರ್ಥಹಳ್ಳಿ ರಸ್ತೆಯ, ಹರಕೆರೆಯಲ್ಲ್ಲಿರುವ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಂಪನ್ನಗೊAಡಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಪ್ರತಿಯೊಬ್ಬರನ್ನು ಆಸ್ಪತ್ರೆಯ ಆಡಳಿತ ಮಂಡಳಿಯು ಹೃತ್ಪೂರ್ವಕವಾಗಿ ಅಭಿನಂದಿಸಿದೆ.

ವರದಿ ಪ್ರಜಾಶಕ್ತಿ…