ಶಿವಮೊಗ್ಗ ನಗರದ ಮಹಾನಗರ ಪಾಲಿಕೆ ಪರಿಷತ್ ಸಭಾಂಣದಲ್ಲಿ, ನಡೆದ ಪಟಣ್ಣ ಮಾರಾಟ ಸಮಿತಿಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಾದ ಮಾನ್ಯ ಶ್ರೀ ಮಾಯಣ್ಣ ಗೌಡ ರವರು, ಸಭೆಯು ಪರಿಪೂರ್ಣವಾಗಲು ಎಲ್ಲಾ ಟಿವಿಸಿ ಸದಸ್ಯರು ಪಾಲಿಕೆ ಸದನದಲ್ಲಿ ಹಾಜರಿರಬೇಕು, ಪಾಲಿಕೆಯಿಂದ ಸಮಿತಿಯ ಎಲ್ಲಾ ಸದಸ್ಯರಿಗೆ ಎಳು ದಿನ ಮುಂಚಿತವಾಗಿ ಸಭೆಯ ನೋಟಿಸ್ ಜಾರಿಯಾಗಲಿ, ಸಭೆಯಲ್ಲಿ ಟಿವಿಸಿ ಸದಸ್ಯರು ಪಾಲುಗೊಳ್ಳುವುದು ಅತಿಮುಖ್ಯ ಬೀದಿಬದಿ ಗುರುತಿನ ಚೀಟಿ ಪಡೆದ ವ್ಯಾಪಾರಿಗಳು ಪಾಲಿಕೆ ನೀಡಿದ ಜಾಗದ ಮೀತಿ, ಮೀರಿ ತಮ್ಮ ಭಾಹುಗಳನ್ನು ವಿಸ್ತರಿಸುತ್ತಿರುವರು. ಇದರಿಂದ ಪುಟ್ ಪಾತ್ ನಲ್ಲಿ ಓಡಾಡುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ‌ ಎಂದರು.

ಪಾಲಿಕೆಯಿಂದ ಕಾರ್ಡು ಪಡೆದ ಕುಟುಂಬ ಸದಸ್ಯರು ಮಾತ್ರ ನೀಡಿದ ಸ್ಥಳದಲ್ಲಿ ವ್ಯಾಪಾರ ಮಾಡಬೇಕು, ಅವರ ಬದಲಿ ಬೇರೆಯವರು ಅವರ ಸ್ಥಳದಲ್ಲಿ ವ್ಯಾಪಾರ ಮಾಡಿದರೆ ಕಾರ್ಡ್ ರದ್ದು ಗೊಳ್ಳುವುದು, ರಸ್ತೆ ತುಂಬ ಹರಡಿದ ಸಾಮಗ್ರಿ ವಶಪಡಿಸಿ ಕೋಳ್ಳಲಾಗುವುದು.

ನಗರದ ವಿವಿಧ ಬಡಾವಣೆಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ವೆಂಡಿಂಗ್ ಝೂನ್ ಮತ್ತು ನಾನ್ ವೆಂಡಿಂಗ್ ಝೂನ್ ಎಂದು ಗುರುತಿಸಿದ್ದು ಅವರಿಗೆ ಈ ತಿಂಗಳಲ್ಲಿ ಸ್ಥಳಾಂತರಿಸಲಾಗುವುದು, ಅವರಿಗೆ ಮೂಲಭೂತ ಸೌಕರ್ಯಗಳಾದ ನೆರಳಿಗೆ ಸೆಟ್ಟರ್, ಕುಡಿಯುವ ನೀರು, ಶೌಚಾಲಯ, ವಿದ್ಯುತ್ ದೀಪಾ ಇನ್ನೂ ಅವರಿಗೆ ಬೇಕಾದ ಅನುಕೂಲಗಳು ಪಾಲಿಕೆಯಿಂದ ಮಾಡಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಕೌಶಲ್ಯಾಭಿವೃದ್ದಿ ಇಲಾಖೆಯ ಅಧಿಕಾರಿಗಳಾದ ಮಾನ್ಯ ಶ್ರೀ ಸುರೇಶ್ ಹೆಚ್.ಎಂ ರವರು, ಪಿಎಂ ಸ್ವನಿಧಿ ಸಾಲ ಎಲ್ಲರು ಪಡೆಯಿರಿ ಎಂದರು ಸಭೆಯಲ್ಲಿ ಟಿವಿಸಿ ಸದಸ್ಯರು ಬೀದಿಬದಿ ವ್ಯಾಪಾರಿಗಳು ಬ್ಯಾಂಕಿಗೆ ಅಲೆದಾಡಿ ಸಾಕಾಗಿ ಬಿಟ್ಟಿರುವರು ಎಂದರು.

ಲೀಡ್ ಬ್ಯಾಂಕ್ ಮಾನೇಜರ್ ಮಾನ್ಯ ಶ್ರೀ ಯತೀಶ್ ರವರು, ಜನರು ಸಾಲ ಪಡೆದು ಸರಿಯಾದ ಕಂತುಗಳಲ್ಲಿ ಬಾಂಕಿಗೆ ಸಾಲ ಕಟ್ಟದಿದ್ದಾಗ ಅವರ ಸಿಬಿಲ್ ಸ್ಕೊರ್ ಇರುವುದಿಲ್ಲ, ರಾಜ್ಯದಲ್ಲಿ ಪಿಎಂ ಸ್ವನಿಧಿ ಸಾಲ ನೀಡಿರುವ ಪಟ್ಟಿಯಲ್ಲಿ ಶಿವಮೊಗ್ಗ ಜಿಲ್ಲೆ 2ನೇ ಸ್ಥಾನದಲ್ಲಿದೆ ಎಂದರು.

ಪಾಲಿಕೆ ಸಮುದಾಯ ವ್ಯವಹಾರಿಕ ಅಧಿಕಾರಿ ಶ್ರೀ ಮತಿ ಅನುಪಮಾ ರವರು,ಡೇ-ನಲ್ಮ್ 2021/22ರ ಸೂಚಿಸಿರುವಂತೆ ಈಗಾಗಲೇ 3227 ಗುರಿ ಪಡಿಸಿದ್ದು 50% ಫಲಾನುಭವಿಗಳಿಗೆ ಹತ್ತು ಸಾವಿರ ನೀಡಲಾಗಿದೆ, ಎರಡನೇ ಅವದಿಗೆ 20 ಸಾವಿರ ಸಾಲಕ್ಕೆ, 862 ಪಲಾನುಭವಿಗಳ ಪಟ್ಟಿ ಗುರಿಯನ್ನು ನಿಗಧಿ ಪಡಿಸಿದೆ ಎಂದರು‌.

ಮಹಾನಗರ ಪಾಲಿಕೆ ಪಟಣ್ಣ ಮಾರಾಟ ಸಮಿತಿ ಸದಸ್ಯರಾದ ಶ್ರೀ ಚನ್ನವೀರಪ್ಪ ಗಾಮನಗಟ್ಟಿ ರವರು, ಬಡವರ ಬಂದು ಸ್ಕೀಂನಲ್ಲಿ ಸಾಲ ಪಡೆದ ಬಹಳಷ್ಷು ಬೀದಿಬದಿ ವ್ಯಾಪಾರಿಗಳಿಗೆ ಪಿಎಂ ಸ್ವನಿಧಿ ಸಾಲ ದೊರೆತ್ತಿಲ್ಲ, ಹೂವು, ಹಣ್ಣು, ತರಕಾರಿ ವ್ಯಾಪಾರಿಗಳಿಗೆ ಇದುವರೆಗೂ ಸಾಲ ಸಿಕ್ಕಿಲ ಬ್ಯಾಂಕುಗಳಿಗೆ ಅಲೆದಾಡುತ್ತಿರುವರು, ಅವರಿಗೆ ಕ್ಯಾಂಪ್ ಗಳು ಹಾಕಿ ಸ್ಥಳದಲ್ಲೆ ಸಾಲ ನೀಡುವಂತೆಯಾಗಲಿ ಎಂದರು.ಅದಕ್ಕೆ ಸಭೆಯಲ್ಲಿ ಎಲ್ಲರೂ ಸಮ್ಮತಿಸಿದರು. ಹಾಗೂ ಶಿವಾಲಯ ದೇವಾಲಯದಲ್ಲಿ ನಮಗೆ ಮಳಿಗೆ ದೊರೆತ್ತಿಲ್ಲ ಎನ್ನುತ್ತಿರುವರು, ಅವರಿಗೆ ಸಮೀಕ್ಷೆ ಮಾಡಿ ಪಾಲಿಕೆಯ ನಾಮಫಲಕದಲ್ಲಿ ಪ್ರಕಟಿಸಿ, ಅದಕ್ಕೆ ಈಗ ನೀಡಿದ 70 ವ್ಯಾಪಾರಿಗಳಿಗೆ 2018ರಲ್ಲಿ ಪಟ್ಟಿ ಮಾಡಲಾಗಿತ್ತು.ಇವರಲ್ಲಿ ಯಾರು ಅಲ್ಲಿಗೆ ಬರದೆ ಹೋದರೆ ಬೇರೆಯವರಿಗೆ ಅ ಮಳಿಗೆ ನೀಡಲಾಗುವುದು ಡೇ-ನಲ್ಮ್ ಅಧಿಕಾರಿ ತಿಳಿಸಿದರು. ಪುಡ್ ಪೂರ್ಟ್ ನಲ್ಲಿ ಇರುವ ಶೌಚಾಲಯ ಸದಾ ಬಿಗಾ ಹಾಕುತ್ತಿರುವ ದೂರ ಬರುತ್ತಿವೆ ಅದರ ಬಗ್ಗೆ ಕ್ರಮ ಕೈಗೊಳ್ಳಿ ಆಯುಕ್ತರಿಗೆ ಹೇಳಿದರು ಅದಕ್ಕೆ ಅಧಿಕಾರಿಗಳಿಗೆ ವರದಿ ನೀಡಲು ತಿಳಿಸಿದರು.

ಸಭೆಯಲ್ಲಿ ಪಟಣ್ಣ ಮಾರಾಟ ಸಮಿತಿ ಕಾರ್ಯದರ್ಶಿಗಳಾದ ಶ್ರೀ ಶಾಂತಯ್ಯ ರವರು ಎಲ್ಲರಿಗೂ ಸ್ವಾಗತ ಕೋರಿದರು, ಸಮುದಾಯ ಸಂಘಟಕರಾದ ಶ್ರೀ ರತ್ನಾಕರ್ ರವರು ವಂದನಾರ್ಪಣೆ ಮಾಡಿದರು. ಸಭೆಯಲ್ಲಿ ಟಿವಿಸಿ ಸದಸ್ಯರು, ಪಾಲಿಕೆ ಸದಸ್ಯರು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಪಾಲಿಕೆ ಸಿಬ್ಬಂದಿ ವರ್ಗದವರು ಹಾಗೂ ಇತರರೂ ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…